ಬಸವಾನಂದ ಪ್ರೌಢ ಶಾಲೆಯ ಮೇಘನಾ ಶಾಲೆಗೆ ಪ್ರಥಮ.
ಮಹಾಲಿಂಗಪುರ: ಪಟ್ಟಣದ ಬಸವಾನಂದ ಪ್ರೌಢ ಶಾಲೆಯ ಕುಮಾರಿ. ಮೇಘನಾ ಮ. ಹುನಿಶ್ಯಾಳ 2023ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 97.44 ಸರಾಸರಿಯಂತೆ ಒಟ್ಟು 609 ಅಂಕಗಳನ್ನು ಪಡೆಯುವುದರ ಮೂಲಕ ಶಾಲೆಗೆ ಪ್ರಥಮ ಸ್ಥಾನದ ಗೌರವ ಪಡೆದಿದ್ದಾಳೆ.
ಸರಾಸರಿ 97.28ರ ಸರಾಸರಿಯಲ್ಲಿ ಒಟ್ಟು 608 ಅಂಕಗಳನ್ನು ಪಡೆದು ನಂತರದ ದ್ವಿತೀಯ ಸ್ಥಾನವನ್ನು ಕುಮಾರಿ. ಪೂಜಾ ಆಲಬಾಳ ಪಡೆದುಕ್ಕೊಂಡಿದ್ದಾಳೆ.
ತೃತೀಯ ಸ್ಥಾನವನ್ನು ಇದೇ ಶಾಲೆಯ ಅರುಣ ಹಿಕಡಿ 97.12 ಸರಾಸರಿಯಂತೆ 607 ಅಂಕಗಳನ್ನು ಪಡೆದುಕೊಂಡಿದ್ದಾನೆ.