ನಂದಗಡ ಬಳಿ ಗುಂಡಿನ ದಾಳಿ, ಓರ್ವ ಯುವಕನ ಹತ್ಯೆ : ಗ್ರಾಮದಲ್ಲಿ ಬಿಗುವಿನ
ಬೆಳಗಾವಿ : ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಯುವಕನೋರ್ವನನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಬೇಕವಾಡ ಗ್ರಾಮದ ನಡುವೆ ನಡೆದಿದೆ.
ರವಿವಾರ ತಡರಾತ್ರಿ ಹಲಸಿ – ಬೇಕವಾಡ ರಸ್ತೆಯ ನರಸೇವಾಡಿ ಬೀಜ ಬಳಿ ತಡರಾತ್ರಿ 3 ಗಂಟೆ ಸುಮಾರಿಗೆ ನಡೆದ ಗುಂಡಿನದಾಳಿಯಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ತಾಫಾಗಸ್ ಮಕಾಂದರ್ (27) ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಹಲಸಿನ ಖಾನಾಪುರದ ಬೇಕ್ವಾಡಕ್ಕೆ ಹೋಗುವ ನರಸೇವಾಡಿಬೀಜ್ ನಿತ್ಯವೂ ಮರಳು ಸಂಗ್ರಹ ನಡೆಯುತ್ತು ಎನ್ನಲಾಗಿದೆ.
ಇದೇ ಕಾರಣಕ್ಕೆ ಈ ಗುಂಡಿನ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಈ ಸುದ್ದಿ ಎಲ್ಲೆಡೆ ಹರಡಿದ ಬಳಿಕ , ಪೊಲೀಸ್ ರು ತಕ್ಷಣವೆ ಆಗಮಿಸಿ ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಇರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್, ನಂದಗಡ ಪೊಲೀಸ್ ನಿರೀಕ್ಷಕ ಎಸ್. ಸಿ. ಪಾಟೀಲ್ ಘಟನಾ ಸ್ಥಳದ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.