ಬೆಂಕಿ ಅವಘಡ : ಬೀದಿಗೆ ಬಂದ ಬಡ ಕುಟುಂಬಕ್ಕೆ ಐಪಿಎಸ್ ಅಧಿಕಾರಿ ನೆರವು : ತುತ್ತು ಅನ್ನಕ್ಕಾಗಿ ಅಲೆದಾಡುತ್ತಿದ್ದವರಿಗೆ ಗಡಾದಿ ಸಹಾಯ
ಬೆಳಗಾವಿ : ಬೆಂಕಿ ಅವಘಡದಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆ, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡು ತುತ್ತು ಅನ್ನಾಕ್ಕಾಗಿ ಅಲೇದಾಡುತ್ತಿದ್ದ ಬಡ ಕುಟುಂಬವೊಂದಕ್ಕೆ ಮೂರು ತಿಂಗಳ ಆಹಾರ ನೆರವು ನೀಡುವ ಮೂಲಕ ಐಪಿಎಸ್ ಅಧಿಕಾರಿ ಹಾಗೂ ಬೆಳಗಾವಿ ಡಿಸಿಆರ್ ಇ ಎಸ್ ಪಿ ರವೀಂದ್ರ ಗಡಾದಿ ಅವರು ಮಾನವೀಯತೆ ಮೆರೆದಿದ್ದಾರೆ.

ಹೌದು ಓದುಗರೇ ಬೆಳಗಾವಿಯ ಶಿವಾಜಿ ನಗರದ 3 ಕ್ರಾಸ್ ನಲ್ಲಿ ಶುಕ್ರವಾರ ದಿ. 19ರ ಸಂಜೆ ವೇಳೆ ವಿದ್ಯುತ್ ಶಾರ್ಟ್-ಸರ್ಕ್ಯೂಟ್‌ನಿಂದ ಬಾಡಿಗೆ ಮನೆಯಲ್ಲಿ ವಾಸುತ್ತಿದ್ದ ಬಡ ಕುಟುಂಬವು ಗೃಹೋಪಯೋಗಿ ಸಾಮಗ್ರಿಗಳನ್ನು ಕಳೆದುಕೊಂಡು ತುತ್ತು ಅನ್ನಕ್ಕಾಗಿ ಅಲೇದಾಡುವಂತೆ ಮಾಡಿತ್ತು.
ಶಿವಾಜಿನಗರದ 1ನೇ ಮುಖ್ಯ, 3ನೇ ಕ್ರಾಸ್‌ನಲ್ಲಿರುವ ಒಂದು ಕೊಠಡಿಯ ಬಾಡಿಗೆ ಹೆಂಚಿನ ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳಾದ ಸಂಕೇತ ಸುತಾರ್ (22) ಮತ್ತು ತುಕಾರಾಂ ಸುತಾರ್ (20) ಈ ಇಬ್ಬರು ತಮ್ಮ ಅಜ್ಜಿ ಗೀಜಾಬಾಯಿಯೊಂದಿಗೆ ಚಿಕ್ಕ ಒಂದೇ ಕೊಡಠಿಯ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದಾರು.

ಆದರೆ ಹುಡುಗರಿಬ್ಬರೂ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಮಾಡಿ ತಮ್ಮ ಅಜ್ಜಿಯನ್ನು ಸಲುಹುವ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು. ಈ ಇಬ್ಬರು ಬಾಲಕರು ಕಡಿಮೆ ಸಂಬಳದಲ್ಲಿ ತಮ್ಮ ದಿನನಿತ್ಯದ ಅಗತ್ಯಗಳನ್ನು ನಡೆಸಲು ಮತ್ತು ಕೊಠಡಿ ಬಾಡಿಗೆಯನ್ನು ಪಾವತಿಸಲು ಇಬ್ಬರೂ ತಮ್ಮ ವಯಸ್ಸಾದ ಅಜ್ಜಿಯ ಜೊತೆ ಪರದಾಡುವಂತಾ ಪರಿಸ್ಥಿತಿ ಇತ್ತು.
ಆದರೆ ದುರ್ಧೈವ ಎಂದರೆ ಇದ್ದ ಪುಟ್ಟ ಬಾಡಿಗೆ ಮನೆ ಹಾಗೂ ಆಹಾರ ಸಾಮಗ್ರಿಗಳು, ಬಟ್ಟೆ, ಹಾಸಿಗೆ ಎಲ್ಲವು ಬೆಂಕಿ ಅನಾಹುತದಲ್ಲಿ ಕಳೆದುಕೊಂಡು ಅನ್ನಕ್ಕಾಗಿ ಅಲೇದಾಡುವ ಪರಿಸ್ಥಿತಿ ಎದುರಾಯಿತು.
ಅದೃಷ್ಟವಶಾತ್ ಮನೆಯಲ್ಲಿ ಅಡುಗೆಯ ಅನಿಲದ ಗ್ಯಾಸ್ ಸಿಲಿಂಡರ್ ಇದ್ದು, ಇದಕ್ಕೆ ಬೆಂಕಿ ಹತ್ತದೆ ಇರುವದು ಸುದೈವ ಎನ್ನಲಾಗಿದೆ. ನೆರೆಹೊರೆಯವರು ತಕ್ಷಣ ರಕ್ಷಣೆಗೆ ಧಾವಿಸಿದರು. ಬಳಿಕ ಬೀದಿಯಲ್ಲಿರುವ ಈ ಕುಟುಂಬಕ್ಕೆ ನೆರೆಹೊರೆಯವರು ಸ್ಥಳಾಂತರಗೊಳ್ಳಲು ಮತ್ತು ಉಳಿದುಕೊಳ್ಳಲು ತಾತ್ಕಾಲಿಕ ಕೊಠಡಿಯನ್ನು ವ್ಯವಸ್ಥೆಗೊಳಿಸಿದ್ದಾರೆ.
ಈ ವಿಷಯವನ್ನು ಐಪಿಎಸ್ ಅಧಿಕಾರಿ ಹಾಗೂ ಡಿಸಿಆರ್ ಇ ಎಸ್ ಪಿ ರವೀಂದ್ರ ಗಡಾಡಿ ಅವರ ಗಮನಕ್ಕೆ ಬೆಳಗಾವಿ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡದ ಸಂತೋಷ್ ದಾರೆಕರ್, ಅವಧೂತ್ ತುಡವೇಕರ್, ನಾರು ನೀಲಜಕರ್, ಅತೀಶ ಇವರು ತಿಳಿಸಿದ್ದಾರೆ.
ರವೀಂದ್ರ ಗಡಾಡಿ ಅವರ ಕಛೇರಿಯು ಶಿವಾಜಿ ನಗರದ ಈ ರಸ್ತೆಯ ಸಮೀಪದಲ್ಲಿದೆ. ಇದರಿಂದ ಗಡಾದಿ ಅವರು ತಕ್ಷಣ ಹುಡುಗರನ್ನು ತಮ್ಮ ಕಚೇರಿಗೆ ಕರೆದು 3ರಿಂದ 4 ತಿಂಗಳ ವರೆಗೆ ಆಗುವಷ್ಟು ದಿನಸಿಯನ್ನು ನೀಡಿದ್ದಾರೆ.
ಅಲ್ಲದೆ ಈ ಬಡ ಕುಟುಂಬಕ್ಕೆ ಸಹಾಯ ಹಸ್ತ ನೀಡುವಂತೆ ಎಲ್ಲಾ ಶಿವಾಜಿನಗರ ನಾಗರಿಕರಿಗೆ ಮತ್ತು FFC ಪಾರುಗಾಣಿಕಾ ತಂಡಕ್ಕೆ ಮನವಿ ಮಾಡಿದರು.