ಬಳ್ಳಾರಿ

ರೈತ ಸಂಪರ್ಕ ಕೇಂದ್ರಕ್ಕೆ ಮಂಜೂರಾದ ಹುದ್ದೆ ಭರ್ತಿ ಮಾಡಿ

ರೈತ ಸಂಪರ್ಕ ಕೇಂದ್ರಕ್ಕೆ ಮಂಜೂರಾದ ಹುದ್ದೆ ಭರ್ತಿ ಮಾಡಿ

ಕಂಪ್ಲಿ 15: ತಾಲೂಕು ಕೇಂದ್ರವಾಗಿ ಎರಡು ವರ್ಷಗಳಾದರು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ರೈತರ ತಮ್ಮ ಕೆಲಸ ಬಿಟ್ಟು ಕಚೇರಿ ಅಲೆದಾಡುವ ಪರಿಸ್ಥಿತಿ ಒದಗಿ ಬಂದಿದೆ. ಅದರೆ ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಹೆಚ್ಚುವರಿಯಾಗಿ ಮಂಜೂರಾದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ಪಿ.ನಾರಾಯಣರೆಡ್ಡಿ ಆಗ್ರಹಿಸಿದರು.

ತಹಸೀಲ್ದಾರ್ ಗೌಸಿಯಾಬೇಗಂ ಅವರಿಗೆ ಸೋಮವಾರ ಮನವಿ ಸಲ್ಲಿಸಿ, ರೈತ ಸಂಪರ್ಕಕೇಂದ್ರದಲ್ಲಿ ನಾಲ್ವರು ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಹೆಚ್ಚುವರಿಯಾಗಿ ಎಮ್ಮಿಗನೂರು, ನೆಲ್ಲೂಡಿ ಗ್ರಾಪಂ.ಗಳಲ್ಲಿ ಸಿಬ್ಬಂದಿಗಳೇ ಇಲ್ಲ. ಮೇಲ್ದರ್ಜೆಗೇರಿದ ರೈತ ಸಂಪರ್ಕ ಕೇಂದ್ರಕ್ಕೆ ಇಬ್ಬರು ಕೃಷಿ ಅಧಿಕಾರಿಗಳು, ಐವರು ಸಹಾಯಕ ಕೃಷಿ ಅಧಿಕಾರಿಗಳು, ಇಬ್ಬರು ಅಕೌಂಟೆಂಟ್, ಇಬ್ಬರು ಎಟಿಎಂ ಹುದ್ದೆಗಳು ಮಂಜೂರಾಗಿದ್ದು ಈ ಎಲ್ಲಾ ಹುದ್ದೆಗಳು ಖಾಲಿ ಇವೆ. ಅಲ್ಲದೆ, ತಾಲೂಕು ಕೇಂದ್ರದಲ್ಲಿ ಕೃಷಿ ನಿರ್ದೇಶಕರ ಕಚೇರಿ ಆರಂಭಗೊಳ್ಳಬೇಕಾಗಿದ್ದು ನೌಕರರನ್ನು ನೇಮಿಸಬೇಕಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ಹುದ್ದೆಗಳು ಖಾಲಿ ಇರುವುದರಿಂದಾಗಿ ತಮ್ಮ ಕೆಲಸ ಬಿಟ್ಟು ಕಚೇರಿ ಅಲೆದಾಡುವ ಪರಿಸ್ಥಿತಿ ಒದಗಿ ಬಂದಿದೆ ಅದರೆ ರೈತರಿಗೆ ಸಮಸ್ಯೆಯಾಗಿ ತಲೆದೋರಿದೆ ಸಕಾಲಕ್ಕೆ ಕೆಲಸಗಳಾಗುತ್ತಿಲ್ಲ. ಹದಿನೈದು ದಿನದೊಳಗಾಗಿ ಮಂಜೂರಾದ ಹುದ್ದೆಗಳನ್ನು ತಾತ್ಕಾಲಿಕವಾಗಿ ಇಲ್ಲವೇ ಖಾಯಂ ಆಗಿ ನೇಮಕಗೊಳಿಸದಿದ್ದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಚ್ಚರಿಕೆ ನೀಡಿದರು. 

ಮನವಿ ಸಲ್ಲಿಸುವಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಗೌಡ, ಜಿಲ್ಲಾ ಉಪಾಧ್ಯಕ್ಷ ವಿ.ಟಿ.ನಾಗರಾಜ, ನಗರ ಘಟಕ ಅಧ್ಯಕ್ಷ ಕೊಟ್ಟೂರು ರಮೇಶ್ ಸೇರಿ  ಅನೇಕ ರೈತರಿದ್ದರು.

ಸುದ್ದಿ ಓದಿ