ವಿಜಯಪುರ

ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿದ ಕ್ಷೇತ್ರ ಅಧಿಕಾರಿಗಳು ಶ್ರೀಧರ ನಡಗಡ್ಡಿ

ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿದ ಕ್ಷೇತ್ರ ಅಧಿಕಾರಿಗಳು ಶ್ರೀಧರ ನಡಗಡ್ಡಿ


        ತಾಂಬಾ 10 :  ಶಿಕ್ಷಣ ಸಂಸ್ಥೆಗಳು ಮಕ್ಕಳ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕಾರ್ಯ ನಿರಂತರವಾಗಿ ಮಾಡುತ್ತವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನಿಡುವ ಜೋತೆಗೆ ಸಂಸ್ಕಾರ, ಸಂಂಸ್ಕೃತಿ ಹಾಗೂ ಮಾನವಿಯ ಮೌಲ್ಯ ಅಳವಡಿಸಿಕೊಳ್ಳುವ ಮನೋಬಾವ ಬೆಳಿಸಬೇಕು ಎಂದು ಎಸ್‌ವ್ಹಿವ್ಹಿ ಸಂಘದ ನಿದೇರ್ಶಕ ಅಪ್ಪಣ್ಣ ಕಲ್ಲೂರ ಹೇಳಿದರು. 

ಗ್ರಾಮದ ಶ್ರೀಮಹಾಲಕ್ಮೀ ಕನ್ನಡ ಹೀರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಗಳು ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನ, ಶಿಸ್ತು, ಮತ್ತು ಕೌಶಲ್ಯ ಅಭೀವೃದ್ದಿಯ ಮೂಲಕ ಮಕ್ಕಳನ್ನು ಸಭಲ ನಾಗರಿಕರನ್ನಾಗಿ ರೂಪಿಸು ಅಡಿಪಾಯದ ಕೇಂದ್ರಗಳಾಗಿವೆ ಎಂದರು. 

ಉದ್ಘಾಟಕರಾದ ಕ್ಷೇತ್ರ ಸಮನ್ವಯಾಧೀಕಾರಿ ಶ್ರೀಧರ ನಡಗಡ್ಡಿ ಮಾತನಾಡಿ ಮನೆಯೇ ಮೋದಲ ಪಾಠಶಾಲೆ ಎಂಬ ಮಾತಿನಂತೆ ತಂದೆ-ತಾಯಿಗಳು ಮಕ್ಕಳಿಗೆ ಮನೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕು ಮಕ್ಕಳ ಕೈಯಲ್ಲಿ ಪಾಲಕರು ಮೋಬೈಲ್ ನೀಡಬಾರದು ಜೋತೆಗೆ ಮಕ್ಕಳ ಮುಂದೆಯೋ ಪಾಲಕರು ಮೋಬೈಲ್ ನೋಡುವದನ್ನು ಆದಷ್ಟು ಕಡಿಮೆ ಮಾಡಬೇಕು ಎಂದರು. ಸಾನಿಧ್ಯ ವಹಿಸಿದ ಮಲ್ಲಯ್ಯ ಸಾರಂಗಮಠ ಮಾತನಾಡಿದರು.  

ಗ್ರಾಪಂ ಅಧ್ಯಕ್ಷರಾಧ ಆಸ್ಮಾ ರಜಾಕ ಚಿಕ್ಕಗಸಿ ಅಧ್ಯಕ್ಷತೆ ವಹಿಸಿದ್ದರು, ಉಪಾದ್ಯಕ್ಷ ರಾಮಚಂದ್ರ ದೊಡ್ಡಮನಿ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಮಲಕಪ್ಪ ಮ್ಯಾಗೇರಿ, ಕಾಮೇಶ ಉಕ್ಕಲಿ, ರಾಚಪ್ಪ ಗಳೇದ, ಗುರುಸಂಗಪ್ಪ ಬಾಗಲಕೋಟ, ಶ್ರೀಮಂತ ಚಟ್ಟರಕಿ, ಎಮ್‌.ಜಿ.ಪಾಟೀಲ, ಪುಟ್ಟುಗೌಡ ಪಾಟೀಲ, ರವಿ ಮುಂಜಿ, ಪರಸು ಬೀಸನಾಳ, ಶ್ರೀಶೈಲ್ ನಿಂಗಮನಿ, ಶ್ರೀಧರ ಅವಟಿ ಇದ್ದರು. ವೇಧಿಕೆಯ ಮೇಲೆ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಬೀರ​‍್ಪ ವಗ್ಗಿ ಹಾಗೂ 10ನೇ ವರ್ಗದಲ್ಲಿ ಪ್ರಥಮಸ್ಥಾನ ಪಡೇದ ವಿದ್ಯಾರ್ಥಿನಿ ಶ್ರೇಯಾ ಬಡಿಗೇರ ಅವರನ್ನು ಮುಖ್ಯಗುರುಗಳಾದ ಶ್ರೀಧರ ಉಕ್ಕಲಿ ಅವರು ಸನ್ಮಾನಿಸಿ ಗೌರವಿಸಿದರು. ಶಿಕ್ಷಕರಾದ ಎಸ್‌.ಬಿ.ಬೀರಾದಾರ, ಎಸ್‌.ಬಿ.ಬಾಗಲಕೋಟ ಕಾರ್ಯಕ್ರಮ ನಿರ್ವಹಿಸಿದರು.  


ಸುದ್ದಿ ಓದಿ