ಹೆಣ್ಣು ನಮ್ಮೆಲ್ಲರ ಬದುಕಿನ ಕಣ್ಣು
ಬಳ್ಳಾರಿ 15: ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ಜೊತೆಗೆ ಬರುವ ಹೆಣ್ಣು ನಮ್ಮೆಲ್ಲರ ಬದುಕಿನ ಕಣ್ಣು. ಹೆಣ್ಣು, ಜನನ, ವಿದ್ಯೆ, ಕಾನೂನಿನ ದೇವತೆಯ ಪ್ರತಿರೂಪವಾಗಿದ್ದಾಳೆ. ದೇವರ ಪ್ರೀತಿ ಸಿಗುವುದು ಅಂತರಾಷ್ಟ್ರಿ ಮಹಿಳಾ ದಿನಾಚರಣೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಮಹಿಳಾ ಆಯೋಗದಿಂದ ವಿಜ್ರಂಭಣೆಯಿಂದ ನಡೆಸಲಾಯಿತು. ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಪರಮಪೂಜ್ಯ ಬಿಷಪ್ ಹೆನ್ರಿ ಡಿಸೋಜಾ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕಳಾವತಿ ಹಾಗೂ ಗಂಗಮ್ಮರವರು ಈ ಕಾರ್ಯಕ್ರಮದ ಅತಿಥಿಗಳ ಸ್ಥಾನವನ್ನು ಅಲಂಕರಿಸಿದರು. ಸಂತ ಅಂತೋನಿಯವರ ಪ್ರಧಾನ ದೇವಾಲಯದ ಶ್ರೇಷ್ಠ ಗುರುಗಳಾದ ಫಾ. ಅಂತೋನಿರಾಜ್ರವರು, ಪಬ್ಲೀಕ್ ರಿಲೇಷನ್ ಆಫೀಸರ್ ಫಾ. ಐವನ್ ಪಿಂಟೊ, ಎಸ್ಟೇಟ್ ಮ್ಯಾನೇಜರ್ ಫಾ. ಸಿರಿಲ್ರವರು ಉಪಸ್ಥಿತರಿದ್ದರು.
ಪ್ರಥಮವಾಗಿ ಪ್ರಾರ್ಥನೆಯನ್ನು ಸಂತ ಜೋಸಫರ ಬಾಲಕಿಯರ ಶಿಕ್ಷಕಿಯರಿಂದ ನಡೆಸಿಕೊಡಲಾಯಿತು. ಫಾ. ಐವನ್ ಪಿಂಟೊರವರು, ಪ್ರಾರ್ಥಿಸುತ್ತಾ ಹೆಣ್ಣು ಹಲವಾರು ಸಂಬಂಧಗಳ ರೂಪ, ತಾಯಿಯನ್ನು ಎಷ್ಟೇ ಸಂಪತ್ತು ಕೊಟ್ಟರೂ ಪಡೆಯಲು ಅಸಾಧ್ಯ. ಹೇಗೆ ಪ್ರಭು ಕ್ರಿಸ್ತಯೇಸು ಎಲ್ಲಾ ಸಂದರ್ಭದಲ್ಲೂ ನಮ್ಮ ಜೊತೆಗಿದ್ದು ನಡೆಸುತ್ತಾರೋ, ಹಾಗೆಯೇ ತಾಯಿ ಸಹ ತನ್ನ ಮಕ್ಕಳ ಜನನದಿಂದ ಹಿಡಿದು ಕೊನೆಯವರೆಗೂ ಅವರಿಗೆ ಆಧಾರವಾಗಿರುತ್ತಾಳೇ, ಎಂದೂ ಹೇಳುತ್ತಾ ಸಿÉೂಥಯರು ಘನತೆ ಹೆಚ್ಚಿಸಿಕೊಂಡು ಬಾಳಲು ಪ್ರಾರ್ಥಿಸಿದರು. ಶ್ರೀಮತಿ ಸುಮಾರವರು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ನಿಯೋಗದ ಕಾರ್ಯದರ್ಶಿಯಾದ ಮೇರಿ ಗೆಟ್ರೂಡ್ರವರು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾದ ತಮ್ಮ ಭಾಷಣದಲ್ಲಿ ಕಳೆದು ಹೋದ ಮಗು ಹಾಗೂ ಅನಾಥ ಮಕ್ಕಳ ರಕ್ಷಣೆ, ಪೆÇೀಷಣೆಯನ್ನು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಮಿತಿಯವರು ಇದಕ್ಕಾಗಿ ಯಾವ ರೀತಿ ಶ್ರಮಿಸುತ್ತಾರೆ, ಅವರ ದತ್ತು ಪಡೆಯುವಿಕೆಯ ಪ್ರಕ್ರಿಯೆಯನ್ನು ತಿಳಿಸಿ ನೆರೆದಂತಹ ಎಲ್ಲಾ ಮಹಿಳೆಯರಿಗೆ ಶುಭ ಹಾರೈಸಿದರು.ಕಳಾವತಿಯವರು ತಮ್ಮ ಭಾಷಣದಲ್ಲಿ ಅತ್ತೆ ಮತ್ತು ಸೊಸೆಯಂದಿರ ಮಧ್ಯೆ ಸಾಮರಸ್ಯವಿರಬೇಕು. ಸೊಸೆಯನ್ನು ಸ್ವಂತ ಮಗಳಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಫಾದರ್ ಸಿರಿಲ್ರವರು, ತಾಯಿಯು ಹೇಗೆ ದೇವರ ಪ್ರತಿರೂಪ ಎಂದು ಕತೆಯ ಮೂಲಕ ತಿಳಿಸಿದರು. ನಗರದ ಸಂತ ಮೇರಿ ಶಾಲೆಯ ಶಿಕ್ಷಕಿಯರಿಂದ ಮಹಿಳಾ ದಿನಾಚರಣೆಗೆ ಶುಭಾಶಯ ಗೀತೆಯನ್ನು ಸುಮಧರ ಕಂಠದಿಂದ ಹಾಡಿ ರಂಜಿಸಿದರು ಬಳ್ಳಾರಿಯ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಹಿರಿಯ ಮಾತೆಯರಿಗೆ ಅವರ ಪರಿಶ್ರಮವನ್ನು ಶ್ಲಾಘಿಸಿ ಸನ್ಮಾನಿಸಲಾಯಿತು.
ಧರ್ಮಾಧ್ಯಕ್ಷರು ತಮ್ಮ ಭಾಷಣದಲ್ಲಿ ಜನನದಿಂದ ಗಂಡು, ಹೆಣ್ಣು ವ್ಯತ್ಯಾಸವಿದೆ ಆದರೆ ಇಬ್ಬರ ಘನತೆ ಒಂದೇ, ಸಮಾಜದಲ್ಲಿ ಅಸಮಾನತೆಯನ್ನು, ಶೋಷಣೆಯನ್ನು ಖಂಡಿಸಿ, ಧೈರ್ಯದಿಂದ ಹೆಣ್ಣು ಮುನ್ನಡೆಯಬೇಕು, ಎಂದು ತಿಳಿಸುತ್ತಾ ಎಲ್ಲರನ್ನೂ ಆಶೀರ್ವದಿಸಿದರು. ಮಹಿಳಾ ನಿಯೋಗದ ಚೇರ್ ಫರ್ಸನ್ ಆದಂತಹ ಸಿಸ್ಟರ್ ಜಾನ್ಸಿಯವರು ಆಗಮಿಸಿದಂತಹ ಎಲ್ಲಾ ಅತಿಥಿಗಳಿಗೂ, ಸಭಿಕರಿಗೂ ಹಾಗೂ ಸನ್ಮಾನಿತರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು. ಬಂದ ಎಲ್ಲಾ ಜನರಿಗೆ ಬೋಜನವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.