ಮಹಲಿಂಗಪುರ

ಅ.2ರಂದು ಸಂಭ್ರಮದ ಸ್ನೇಹ ಸಂಗಮ ! ಶ್ರೀಗಳಿಂದ ಆಶೀರ್ವಚನ ರಾಷ್ಟ್ರ ಪ್ರಶಸ್ತಿ ಪಡೆದ ಸಪನಾ ಅನಿಗೋಳಗೆ ಸನ್ಮಾನ

ಅ.2ರಂದು ಸಂಭ್ರಮದ ಸ್ನೇಹ ಸಂಗಮ ! ಶ್ರೀಗಳಿಂದ ಆಶೀರ್ವಚನ ರಾಷ್ಟ್ರ ಪ್ರಶಸ್ತಿ ಪಡೆದ ಸಪನಾ ಅನಿಗೋಳಗೆ ಸನ್ಮಾನ

ಮಹಾಲಿಂಗಪುರ 30: ಕಳೆದ ವರ್ಷದ ಗುರು ವಂದನ ಯಶಸ್ವಿ ಕಾರ್ಯಕ್ರಮದ ಪ್ರೇರಣೆಯಲ್ಲಿ ಈ ವರ್ಷವೂ ಸಂಭ್ರಮದ ಸ್ನೇಹ ಸಂಗಮ ಕಾರ್ಯಕ್ರಮ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಅ.2ರಂದು 10ಗಂಟೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

 ಸಮೀಪದ ಚಿಮ್ಮಡ ಗ್ರಾಮದ ವಿರಕ್ತ ಮಠದ ಪ್ರಭು ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮತ್ತು ಮುಧೋಳ ತಾಲೂಕಿನ ಬೆಳಗಲಿ ಪಟ್ಟಣದ ಸಿದ್ಧಾರೂಢ ಮಠದ ಸಿದ್ಧರಾಮ ಶಿವಯೋಗಿಗಳು ಸಾನಿಧ್ಯ ವಹಿಸಿಕ್ಕೊಂಡು ಸಹಪಾಠಿಗಳ ಕುರಿತು ಆಶಿರ್ವಚನ ನೀಡುವರು. 

 ಬೆಳಗಲಿ ವಿದ್ಯಾವರ್ಧಕ ಪ್ರೌಢಶಾಲೆಯ ಕಾರ್ಯದರ್ಶಿ ಹಾಗೂ ಪ್ರಮುಖ ಪಂಡಿತ ಪೂಜಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮುಖ್ಯ ಅತಿಥಿಗಳಾಗಿ ಮಹಾಲಿಂಗಪುರ ಪಟ್ಟಣದ ಠಾಣಾಧಿಕಾರಿ ಪ್ರವೀಣ ಬಿಳಿಗಿ ಮತ್ತು ಕಾರ್ಯ ನಿರತ ಪತ್ರಕರ್ತರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಮಹೇಶ್ ಆರಿ ಆಗಮಿಸಲಿದ್ದಾರೆ,  

ಇದೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ನೀಡಿರುವ ರಾಷ್ಟ್ರ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದ ಮಹಾಲಿಂಗಪುರದ ಶ್ರೀಮತಿ ಸಪನಾ ಶ್ರೀಶೈಲ. ಅನಿಗೋಳ ಅವರನ್ನು ಕಾರ್ಯಕ್ರಮಕ್ಕೆ ವಿಶೇಷ ಸನ್ಮಾನಕ್ಕಾಗಿ ಆಮಂತ್ರಿಸಿ ಎಲ್ಲ ಸಹಪಾಠಿಗಳ ಪರವಾಗಿ ಅವರನ್ನು ಸನ್ಮಾನಿಸಲಾಗುವುದು. 

ಈ ಕಾರ್ಯಕ್ರಮಕ್ಕೆ ಭವ್ಯ ವೇದಿಕೆಯ ರಂಗಸಜ್ಜಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ಇದೆ ವೇದಿಕೆ ಮೂಲಕ ಸಹಪಾಠಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರೆ, ಇನ್ನೂ ಹೆಚ್ಚಿನ ಮನೋರಂಜನೆಗಾಗಿ ಸಪ್ತ ಸ್ವರ ಮೆಲೋಡೀಸ್ ಅವರಿಂದ ಎಂದೂ ಮರೆಯದ ಹಾಡು ತೇಲಿ ಬರಲಿದೆ ಎಂದು ಆಯೋಜಕರು ಪುನರುಚ್ಚರಿಸಿದ್ದಾರೆ. 


ಸುದ್ದಿ ಓದಿ