ರಾಚವಿವಿ ರಾಂಕ್ ವಿಜೇತರಿಗೆ ಸನ್ಮಾನ
ಮಹಾಲಿಂಗಪುರ11: ಒಳ್ಳೆಯ ಆರೋಗ್ಯ ಹೊಂದಿ ನಿರಂತರ ಶ್ರಮದೊಂದಿಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದು ಖಚಿತ ಎಂದು ಬೆಳಗಾವಿಯ ಆರ್.ಸಿ.ಯು ದ ಮೌಲ್ಯಮಾಪನ ಕುಲಸಚಿವ ಡಾ.ಎಸ್.ಎಂ.ಹುರಕಡ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯಲ್ಲಿ ಪರೀಕ್ಷಾ ವಿಭಾಗದ ವತಿಯಿಂದ 2019-20 ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾ್ಯಂಕ್ ವಿಜೇತರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾ್ಯಂಕ್ ವಿಜೇತರಾದ ಆರತಿ ಮುಗಳಿ, ಅಕ್ಷತಾ ಗಿರಿಸಾಗರ, ದಾನೇಶ ಶಿರಹಟ್ಟಿ, ಗಾಯತ್ರಿ ಬಾಗೇವಾಡಿ, ರೂಪಾ ಸುತಾರ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವರು ತಮ್ಮ ಅಭಿಪ್ರಾಯವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಆರ್ಸಿಯುದ ಅಕಾಡೆಮಿಕ ಕೌನ್ಸಿಲ್ನ ಸದಸ್ಯ ಡಾ.ಎಸ್.ಬಿ.ಸೋಮಣ್ಣವರ, ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ಶೈಕ್ಷಣಿಕ ಕಾರ್ಯದರ್ಶಿ ವಿಎಸ್.ಅಂಗಡಿ, ಐಕ್ಯೂಎಸಿ ಸಂಯೋಜಕ ಡಾ.ಕೆಎಂ.ಅವರಾದಿ, ಪರೀಕ್ಷಾ ವಿಭಾಗದ ಆರ್.ಎಸ್.ಪೂಜಾರಿ, ಸಿಎಂಐಗಳಿ, ಎನ್.ಬಿ.ಹೊಸಪೇಟಿ ಇದ್ದರು.
ವಿದ್ಯಾರ್ಥಿನಿ ಸಾವಿತ್ರಿ ಮಾಳಿ ಪ್ರಾರ್ಥಿಸಿ, ಆರ್.ಎಸ್.ಪೂಜಾರಿ ಸ್ವಾಗತಿಸಿ, ಎನ್.ಬಿ.ಹೊಸಪೇಟಿ ವಂದಿಸಿದರು. ಶ್ರೀಯಾ ದಿವಾನಜಿ, ಪೂಜಾ ಕಲ್ಯಾಣಶೆಟ್ಟಿ ಇದ್ದರು.