ಮಹಲಿಂಗಪುರ

ಪಂ.ರವೀಂದ್ರ ಸೊರಗಾವಿಗೆ ಸನ್ಮಾನ

ಪಂ.ರವೀಂದ್ರ ಸೊರಗಾವಿಗೆ ಸನ್ಮಾನ
ಪಂ. ರವೀಂದ್ರ ಸೊರಗಾವಿಯವರನ್ನು ಸನ್ಮಾನಿಸುತ್ತಿರುವುದು. ಇಬ್ರಾಹಿಂ ಸುತಾರ, ಶಾಸಕರಾದ ಸಿದ್ದು ಸವದಿ, ಕೃಷ್ಣರಾಜೇಂದ್ರ

ಮಹಾಲಿಂಗಪುರ 07 : ಇದೇ ದಿ.4ರಂದು ಮಹಾಲಿಂಗಪುರದಲ್ಲಿ ಜರುಗಿದ ‘ಸಂಗೀತ ಶ್ರಾವಣ’ ಕಾರ್ಯಕ್ರಮದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ವಿಜೇತರಾದ ಶ್ರೀಯುತ ಪಂ. ರವೀಂದ್ರ ಸೊರಗಾವಿಯವರು ಸಲ್ಲಿಸಿದ ಸುದೀರ್ಘವಾದ ಸಂಗೀತ ಸೇವೆಯನ್ನು ಪರಿಗಣಿಸಿ ಬೆಳಗಾವಿಯ ತಾಳೂಕರ ಚಿತ್ರಕಲಾ ಮತ್ತು ದೇವಾಂಗ ಸಮಾಜ ಸೇವಾ ಪ್ರತಿಷ್ಠಾನ ವತಿಯಿಂದ ಕೃಷ್ಣರಾಜೇಂದ್ರ ತಾಳೂಕರ ಅವರು  ಭಾರತರತ್ನ ದಿವಂಗತ ಪಂಡಿತ್ ಭೀಮಸೇನ್ ಜೋಶಿ ಅವರ ಹೆಸರಿನ ಪ್ರಶಸ್ತಿಪತ್ರ, ನೆನಪಿನ ಕಾಣಿಕೆ ನೀಡಿ ಶಾಲುಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು. ಸೋರಗಾವಿ ಅವರಿಗೆ ನೀಡಿ ಸನ್ಮಾನಿಸಿ ಶುಭ ಕೋರಲಾಯಿತು.  

ತೇರದಾಳ ಮತಕ್ಷೇತ್ರದ ಶಾಸಕ ಶ್ರೀಯುತ ಸಿದ್ದು ಸವದಿ ಹಾಗೂ ಕನ್ನಡದ ಕಬೀರ ಇಬ್ರಾಹಿಂ ಸುತಾರ ಮುಂತಾದ ಗಣ್ಯರು ಸೋರಗಾವಿ ಅವರಿಗೆ ಶುಭಕೋರಿದರು. 

ಸುದ್ದಿ ಓದಿ