ಕಾಂಗ್ರೆಸ್ ಜಾಲತಾಣಗಳ ಪದಾಧಿಕಾರಿಗಳಿಗೆ ಸನ್ಮಾನ
ಕಿಸಾನ್ ಘಟಕ ಸಂಚಾಲಕರಿಂದ
ಮಹಾಲಿಂಗಪುರ 13: ಭಾರತೀಯ ಕಾಂಗ್ರೆಸ್ ಪಕ್ಷದ ತೇರದಾಳ ಮತಕ್ಷೇತ್ರದ ರಬಕವಿ-ಬನಹಟ್ಟಿ ಹಾಗೂ ಮಹಾಲಿಂಗಪುರ ಬ್ಲಾಕ್ ಗಳಿಗೆ ಇತ್ತೀಚೆಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ರಾಜ್ಯ ಕೆಪಿಸಿಸಿ ಬೆಳಗಾವಿ ವಿಭಾಗ ಕಿಸಾನ್ ಘಟಕ ಸಂಚಾಲಕ ಸಿದ್ದು ಕೊಣ್ಣೂರ ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.
ಅವರು ಮಾತನಾಡಿ ಪಕ್ಷಕ್ಕಾಗಿ ತಾವು ಪ್ರಾಮಾಣಿಕ ಸೇವೆ ಸಲ್ಲಿಸಿ, ಭವಿಷ್ಯದಲ್ಲಿ ತಾವು ಕೂಡ ನಾಯಕರಾಗಿ ಬೆಳೆಯುತ್ತಿರಿ ಎಂದು ಯುವಕರಲ್ಲಿ ನಿಷ್ಠೆ, ಪ್ರಾಮಾಣಿಕತೆಯ ಅರಿವು ಮೂಡಿಸಿದರು.
ತೇರದಾಳ ಮತಕ್ಷೇತ್ರ ಜಾಲತಾಣ ಅಧ್ಯಕ್ಷ ನಾರಾಯಣ ನಿಕ್ಕಂ, ಉಪಾಧ್ಯಕ್ಷ ಮಹಾಲಿಂಗ ಮಾಳಿ, ಕಾರ್ಯದರ್ಶಿ ಸಿಂಧೂರ ಹಲಸಪ್ಪಗೋಳ, ಸಿದ್ದು ನಾವಿ ಮತ್ತು ಯುಥ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಿದ್ದು ಭೂಸನ್ನವರ ಇವರು ಸನ್ಮಾನಿತ ನೂತನ ಪದಾಧಿಕಾರಿಗಳಾಗಿದ್ದಾರೆ. ಸನ್ಮಾನ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ಸನ್ಮಾನಿತರು ಹಿರಿಯರ ಮಾರ್ಗದರ್ಶನದಲ್ಲಿ ನಾವು ಸದಾ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಜಾಲತಾಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ ಸಿಂಪಿ, ಈರ್ಪ ಕಿತ್ತೂರ, ಬಲರಾಮ ಧರೆಪ್ಪನವರ, ಅಲ್ತಾಫ್ ಹಾಗೂ ಇನ್ನಿತರ ಕಾರ್ಯಕರ್ತರಿದ್ದರು.