ಮಹಲಿಂಗಪುರ

ಎಸೆಸೆಲ್ಸಿ ಪರೀಕ್ಷೆಯಲ್ಲಿ ಭಾಗ್ಯಶ್ರೀ ತಾಲೂಕಿಗೆ ಪ್ರಥಮ,ಸನ್ಮಾನ

ಎಸೆಸೆಲ್ಸಿ ಪರೀಕ್ಷೆಯಲ್ಲಿ ಭಾಗ್ಯಶ್ರೀ ತಾಲೂಕಿಗೆ ಪ್ರಥಮ,ಸನ್ಮಾನ

ಮಹಾಲಿಂಗಪುರ 14: ಸಮೀಪದ ಢವಳೇಶ್ವರ ಗ್ರಾಮದ ಜಿ.ಎಚ್‌.ಎಸ್‌. ಹೈಸ್ಕೂಲ್ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಭಾಗ್ಯಶ್ರೀ ಹಿರೇಮಠ 99.68 ಸರಾಸರಿ ಯೊಂದಿಗೆ 625 ಅಂಕಗಳ ಪೈಕಿ 623 ಅಂಕಗಳನ್ನು ಪಡೆದು ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಗ್ರಾಮದ ಹಾಗೂ ಶಾಲೆಯ ಗೌರವ ಹೆಚ್ಚಿಸಿದ್ದಾಳೆ. 

ಇದರ ಪ್ರಯುಕ್ತ ತೇರದಾಳ ಮತಕ್ಷೇತ್ರದ ಮಹೀಳಾ ಮೋರ್ಚಾ ಅಧ್ಯಕ್ಷೆ ಕುಮಾರಿ ಸುವರ್ಣ ಆಸಂಗಿ ಹಾಗೂ ಮಹೀಳಾ ಸಂಘದ ಸದಸ್ಯೆಯರು ಸಾಧಕಿಯನ್ನು ಅವರ ಗ್ರಹದಲ್ಲಿ ಸನ್ಮಾನಿಸಿದರು. 


ಸುದ್ದಿ ಓದಿ