ಮಹಲಿಂಗಪುರ

ಸಾಧಿಸುವುದು ಸಾಮರ್ಥ್ಯಕ್ಕೆ ಸಾಕ್ಷಿ, ಸನ್ಮಾನಿಸುವುದು ಸೌಜನ್ಯಕ್ಕೆ ಸಾಕ್ಷಿ : ಸಿದ್ನಾಳ

ಸಾಧಿಸುವುದು ಸಾಮರ್ಥ್ಯಕ್ಕೆ ಸಾಕ್ಷಿ, ಸನ್ಮಾನಿಸುವುದು ಸೌಜನ್ಯಕ್ಕೆ ಸಾಕ್ಷಿ : ಸಿದ್ನಾಳ
ಮಹಾಲಿಂಗಪುರದ ಗ್ರಾಮದೇವತೆಯ ಸಮುದಾಯಭವನದಲ್ಲಿ ಪುರಸಭೆ ಸದಸ್ಯ ರಾಜು ಚಮಕೇರಿ ತಮ್ಮ ವಾರ್ಡ ಐವರು ಸಾಧಕರಿಗೆ ಸನ್ಮಾನಿಸಿದರ

ಪುರಸಭೆ ಸದಸ್ಯನಿಂದ ಸಾಧಕರಿಗೆ ಸನ್ಮಾನ 

ಮಹಾಲಿಂಗಪುರ10:  ಸಾಧಕರ ಸಾಧನೆ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾದರೆ ಅವರನ್ನು ಗುರುತಿಸಿ ಸನ್ಮಾನಿಸುವುದು ಸೌಜನ್ಯಕ್ಕೆ ಸಾಕ್ಷಿಯಾಗಿದೆ ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.  

ಸ್ಥಳೀಯ ಗ್ರಾಮದೇವತೆಯ ಸಮುದಾಯ ಭವನದಲ್ಲಿ ಪುರಸಭೆ ಸದಸ್ಯ ರಾಜು ಚಮಕೇರಿ ಹಮ್ಮಿಕೊಂಡಿದ್ದ ವಾರ್ಡ್‌ ನಂ.21ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪುರಸಭೆ ಸದಸ್ಯರು ರಸ್ತೆ, ನೀರು, ಚರಂಡಿ ಸೌಲಭ್ಯ ಒದಗಿಸಲು ಮಾತ್ರ ಸೀಮಿತವಾಗದೇ ತಮ್ಮ ವಾರ್ಡ್ನ ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ರಾಜಕೀಯ ಕ್ಷೇತ್ರದಲಿ ಸಾಧನೆ ಮಾಡಿದವರನ್ನೂ ಸಹ ಗುರುತಿಸುವ ಮೂಲಕ ಸಾಂಸ್ಕೃತಿಕ ಜವಾಬ್ದಾರಿಯನ್ನು ತೋರಿದ್ದು ಶ್ಲಾಘನೀಯ ಎಂದರು.  

ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್‌.ಗೊಂಬಿ ಮಾತನಾಡಿ, ಪುರಸಭೆ ಸದಸ್ಯ ತಮ್ಮ ವಾರ್ಡ ಮೂಲ ಅಗತ್ಯಗಳ ಬಗ್ಗೆ ಗಮನ ಹರಿಸುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸೌಜನ್ಯ ಮೆರೆದಿದ್ದಾರೆ ಎಂದರು. 

ವಾರ್ಡ್‌ ನಂ.21ರ ನಿವಾಸಿಗಳಾದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಸಪನಾ ಅನಿಗೋಳ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಎಸ್‌.ಕೆ.ಗಿಂಡೆ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪಡೆದ ಚಿತ್ರಕಲಾವಿದ ವಿನಾಯಕ ಚಿಕ್ಕೋಡಿ, ಜಿಲ್ಲಾ ಅಸಾಧಾರಣ ಪ್ರತಿಭೆ ಅಭಿನವ ಕರಡಿ ಹಾಗೂ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಅವರನ್ನು ವಾರ್ಡ್‌ ಸದಸ್ಯ ರಾಜು ಚಮಕೇರಿ ಸನ್ಮಾನಿಸಿ ಅಭಿನಂದಿಸಿದರು.  

ಸನ್ಮಾನಿತರು ಮಾತನಾಡಿ ಮಕ್ಕಳಿಗೆ ಮತ್ತು ಪಾಲಕರಿಗೆ ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಸಪನಾ ಅನಿಗೋಳ ಸಾಂಕೇತಿಕವಾಗಿ ಕಾಟನ್ ಚೀಲ ವಿತರಿಸಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಮನವಿ ಮಾಡಿದರು. 

ಹಿರಿಯರಾದ ಲಕ್ಕಪ್ಪ ಚಮಕೇರಿ, ಮಹಾಲಿಂಗಯ್ಯ ಮಠಪತಿ, ಮಡಿವಾಳಪ್ಪ ಕರಡಿ, ಬಸವರಾಜ ಬಟಕುರ್ಕಿ, ಕೇದಾರಿ ಹುರಕಡ್ಲಿ, ಈರ​‍್ಪ ಮುದಕವಿ, ಮಲ್ಲು ಯರಡ್ಡಿ, ವಿನಾಯಕ ಬಡಿಗೇರ, ಚನ್ನಬಸು ಯರಗಟ್ಟಿ, ಚನ್ನಪ್ಪ ರಾಮೋಜಿ, ರವಿ ಜವಳಗಿ, ಶೇಖರ ಅಂಗಡಿ, ಅಶೋಕ ಅಂಗಡಿ, ಶಿವಾನಂದ ಅಂಗಡಿ, ಮಹಾದೇವ ಸೋರಗಾಂವಿ, ತುಳಜಪ್ಪ ಮಾಳಿ, ಗಂಗಪ್ಪ ಕರಡಿ, ಸುರೇಶ ಕಲಾಲ, ಪ್ರಭು ಹೆಗ್ಗಾಣಿ, ಮಹಾಲಿಂಗ ಹೂಗಾರ, ಮಹಾಲಿಂಗ ಗುರವ, ಮಹೇಶ ಚಿಂಚಲಿ, ಮನು ಕರಡಿ, ನಾಮದೇವ ಹೂಗಾರ, ಮಾಂತು ಮಡಿವಾಳ, ಮಾಂತು ಮೇಟಿ ಇದ್ದರು. ಪಲ್ಲವಿ ಕರಡಿ ಪ್ರಾರ್ಥನೆ ಹಾಡಿದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ, ಚನ್ನಮಲ್ಲಪ್ಪ ಕರಡಿ ವಂದಿಸಿದರು.  

ಸುದ್ದಿ ಓದಿ