ಬಳ್ಳಾರಿ

ನಿವೃತ್ತ ನೌಕರರ ಸಂಘದಿಂದ ಉಪ್ಪಾರ ಮಲ್ಲಪ್ಪನವರಿಗೆ ಸನ್ಮಾನ

ನಿವೃತ್ತ ನೌಕರರ ಸಂಘದಿಂದ ಉಪ್ಪಾರ ಮಲ್ಲಪ್ಪನವರಿಗೆ ಸನ್ಮಾನ

ಬಳ್ಳಾರಿ 16: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಎಪ್ಪತೈದು ವರ್ಷ ಮೇಲ್ಪಟ್ಟ ಹಿರಿಯ ನೌಕರರು ಹಾಗೂ ಕರ್ನಾಟಕ ಭಗೀರಥ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾದ ಉಪ್ಪಾರ ಮಲ್ಲಪ್ಪನವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ನಗರದ ಬಿ.ಡಿ.ಎ.ಎ ಫುಡ್‌ಬಾಲ್ ಸಭಾಂಗಣದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಚ್ ನೀಲಪ್ಪ ಮತ್ತು ರಾಜ್ಯ ಘಟಕದ ಪದಾಧಿಕಾರಿಗಳಾದ ಟಿ ಎಂ ಮರಿಶಾಂತಕುಮಾರ್ ಇವರುಗಳು ನೇತೃತ್ವದಲ್ಲಿ ಉಪ್ಪಾರ ಮಲ್ಲಪ್ಪನವರ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಮಾಡಿ ನಿವೃತ್ತರಾಗಿರುತ್ತಾರೆ ಮಲ್ಲಪ್ಪನವರು ಈಗಲೂ ತಮ್ಮ ಸಮಾಜಕ್ಕೆ ಮತ್ತು ಬಳ್ಳಾರಿ ತಾಲೂಕು ನೌಕರರ ಸಂಘ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅವಿತರ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷರಾದ ಪಾಲಣ್ಣ, ಮೇಯರ್ ರಾಜೇಶ್ವರಿ ಸುಬ್ಬರಾಯುಡು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶಿವಾಜಿರಾವ್, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಎಂ ಟಿ ಮಲ್ಲೇಶಪ್ಪ, ನಿವೃತ್ತ ಸಂಘದ ಅಧ್ಯಕ್ಷ ನೀಲಪ್ಪ, ಆಶೋಕ್ ದಿನ್ನಿ, ಗಂಗಪ್ಪ, ಎನ್‌.ಡಿ ವೆಂಕಮ್ಮ, ರವೀಂದ್ರಸ್ವಾಮಿ ಮತ್ತು ದೇವೇಂದ್ರ​‍್ಪ ಇದ್ದರು. 


ಸುದ್ದಿ ಓದಿ