ಮಹಲಿಂಗಪುರ

ಮಹಾಲಿಂಗಪುರದಲ್ಲಿ ಫೆ. 2ರಿಂದ ಅದ್ಧೂರಿ ಅಂತರ್ ರಾಜ್ಯ ತೆರಬಂಡಿ ವೈಭವ.

ಮಹಾಲಿಂಗಪುರದಲ್ಲಿ ಫೆ. 2ರಿಂದ ಅದ್ಧೂರಿ ಅಂತರ್ ರಾಜ್ಯ ತೆರಬಂಡಿ ವೈಭವ.

ಮಹಾಲಿಂಗಪುರ: ನಮ್ಮ ಪೂರ್ವಜರಾದ ಬಸಲಿಂಗಗೌಡ್ರು, ಮಹಾಲಿಂಗಗೌಡ್ರು ಆರಂಭಿಸಿದ್ದ ಮಹಾಲಿಂಗಪುರದ ಬಸವೇಶ್ವರ ಜಾತ್ರಾ ತೆರೆ ಬಂಡಿ ಸ್ಪರ್ಧೆ 50 ನೇ ವರ್ಷಕ್ಕೆ ಕಾಲಿಟ್ಟಿದ್ದು ಆ  ಸುವರ್ಣ ಮಹೋತ್ಸವದ ಪ್ರಯುಕ್ತ  ಫೆ. 2 ರಿಂದ 4 ರವರೆಗೆ ಅಂತರ್ ರಾಜ್ಯ ಮಟ್ಟದ ತೆರಬಂಡಿ ವೈಭವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅನ್ನದಾತ ಮತ್ತು ಎತ್ತುಗಳನ್ನು ಗೌರವಿಸುವ ಹಬ್ಬ ಆಚರಿಸುತ್ತಿದ್ದು 31 ವಿಶೇಷ ಬಹುಮಾನ ನೀಡಲಾಗುವುದು ಎಂದು ಜಾತ್ರಾ ಕಮಿಟಿ ಅಧ್ಯಕ್ಷ  ಹಾಗೂ ಪುರಸಭಾ ಸದಸ್ಯ ಯಲ್ಲನಗೌಡ ಪಾಟೀಲ ಹೇಳಿದರು.  

ಸ್ಥಳೀಯ ಡಾ.ಎ.ಆರ್‌.ಬೆಳಗಲಿ ಅವರ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

 ಮಹಾಲಿಂಗಪುರದ ಬಸವೇಶ್ವರ ಜಾತ್ರಾ ಕಮಿಟಿ ವತಿಯಿಂದ  ನಡೆಯುವ ಅಂತರ್ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕ್ವಿಡ್ ಕಾರು, 2 ರಿಂದ 13 ರವರೆಗೆ ತಲಾ ಮೋಟಾರು ಸೈಕಲ್ಲು, ನಂತರ 3 ಬೆಳ್ಳಿ ಗದೆ,  14 ರಿಂದ 31 ರವರೆಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು, ಇಂತಹ ಶ್ರೇಷ್ಠ ಕಾರ್ಯಕ್ಕೆ ದೇಣಿಗೆ ನೀಡಿದ ಡಾ.ಎ.ಆರ್‌.ಬೆಳಗಲಿಯವರಿಗೆ ಹಾಗೂ ಇತರೆ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ, ರಾಜ್ಯ ಮತ್ತು ಹೊರ ರಾಜ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.  ದಾನಿ ಡಾ. ಎ. ಆರ್‌. ಬೆಳಗಲಿ ಮಾತನಾಡಿ, ಜಗತ್ತಿನ ಅನ್ನದಾತನನ್ನು ಪ್ರೋತ್ಸಾಹಿಸುತ್ತಿರುವ ಯಲ್ಲನಗೌಡರ ಕಾರ್ಯ ಶ್ಲಾಘನೀಯ ಎಂದರು. ಎಸ್‌.ಎಂ.ಉಳ್ಳಾಗಡ್ಡಿ ಮಾತನಾಡಿದರು.  

ಪುರಸಭಾ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ, ಕೃಷ್ಣೇಗೌಡ ಪಾಟೀಲ, ಮುಸ್ತಾಕ್ ಚಿಕ್ಕೋಡಿ ಶ್ರೀಶೈಲಗೌಡ ಪಾಟೀಲ, ನಾರಾಯಣಗೌಡ ಪಾಟೀಲ,,  ಸದಾಶಿವ ಗೊಬ್ಬರದ, ಮಹಾಲಿಂಗ ಪಾಟೀಲ, ಮಹಾಲಿಂಗ ಮಾಳಿ, ದೀಲೀಪ ಸುಣಧೋಳಿ,ಕಲ್ಲಪ್ಪ ಹೆಬ್ಬಾಳ, ಶಂಕರ ಹಟ್ಟಿ, ವಿಠಲಗೌಡ ಪಾಟೀಲ, ಅರುಣ ಬೆಳಗಲಿ, ಶ್ರೀನಿವಾಸ ಮಾಲಬಸರಿ,  ಆನಂದ ಬಂಡಿ, ಶಿವಪ್ಪ ಗಿರೆಡ್ಡಿ, ಸಾಯಿ ಉಪ್ಪಾರ, ಸಚಿನ ಪಾಟೀಲ, ವಿಠ್ಠಲ ಪಾಟೀಲ, ಸಂಜು ಪವಾರ, ಸಾಗರ ಹಟ್ಟಿ, ಶಿವಕುಮಾರ ಪಾಟೀಲ, ಶ್ರೀನಿವಾಸ ಪಾಟೀಲ, ಅನಿಲ ದೇಸಾಯಿ, ಯಲ್ಲಪ್ಪ ಹಳ್ಳಿಕಟ್ಟಿ, ಅರ್ಜುನ ಹಟ್ಟಿ, ಮಲ್ಲಪ್ಪ ಖಾರಬ್ಯಾಳಿ, ಇಂತಿಯಾಜ್ ಅಂಬಿ, ಮಹಾಲಿಂಗ ಪಂಚಕಟ್ಟಿಮಠ, ಶಿವನಗೌಡ ಪಾಟೀಲ, ಮಹಾಲಿಂಗ ಹಳಗಣಿ, ಮಹಾಲಿಂಗ ಬುರುಡ, ವಿಠಲ ಪಾಟಿಲ ಇತರರಿದ್ದರು. 


ಸುದ್ದಿ ಓದಿ