ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡು ರಸ್ತೆಯಲ್ಲಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ
ಬೆಳಗಾವಿ : 10ಕ್ಕೂ ಅಧಿಕ ಯುವಕರ ಗುಂಪಿನಿಂದ ಅನ್ಯಕೋಮಿನ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ರವಿವಾರ ತಡರಾತ್ರಿ ಬೆಳಗಾವಿಯ ಆರ್ ಪಿಡಿ ಸರ್ಕಲ್ ನಲ್ಲಿ ನಡೆದಿದೆ.
ಬೆಳಗಾವಿ ನಗರದ ಆರ್ ಪಿಡಿ ಸರ್ಕಲ್ ಬಳಿ ಘಟನೆ ನಡೆದಿದ್ದು, ನಗರದ ಖಾಸಬಾಗ ಪಾಟೀಲ ಗಲ್ಲಿಯಲ್ಲಿ ನೂರ ಬಸೀರ್ ಅಹ್ಮದ್ ಹೊಸಪೇಟ್(35), ಮಂಜೂರ್ ಹೊಸಪೇಟ್ ಎಂಬುವವರ ಮೇಲೆ ದಾಳಿ ಮಾಡಲಾಗಿದೆ.
ಪೋನ ಮೂಲಕ ಈ ಯುವಕರನ್ನು ಕರೆಯಿಸಿ ಅನ್ಯಕೋಮಿನ ಇಬ್ಬರು ಸಹೋದರ ಮೇಲೆ ಹಲ್ಲೆ ಮಾಡಲಾದ ಆರೋಪ ಕೇಳಿ ಬಂದಿದೆ. ತಲೆ, ಬೆನ್ನು, ಮುಖಕ್ಕೆ ಹೊಡೆದು ಹಲ್ಲೆ, ಹಲ್ಲೆಗೊಳಗಾದ ಯುವಕರು ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೈಯಕ್ತಿಕ ದ್ವೇಷ ಹಿನ್ನೆಲೆ ಈ ಗಲಾಟೆ ನಡೆದಿದೆ ಎಂದು ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಯುವಕರನ್ನ ವಶಕ್ಕೆ ಪಡೆಯಲಾಗಿದೆ.
ಹಲ್ಲೆಗೊಳಗಾದ ಇಬ್ಬರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ ಹೇಳಿದ್ದಾರೆ.