ಪ್ರಸಕ್ತ ಸಾಲಿನ ಮುಂಗಾರು ಮಳೆ ವಿಫಲ ಶೀಘ್ರವೇ ರೈತರಿಗೆ ಪರಿಹಾರ ನೀಡಿ. ರೈತ ಮುಖಂಡ ಮುರಗೆಪ್ಪ ಶೆಟ್ಟರ್
ಬ್ಯಾಡಗಿ 27 : ಬ್ಯಾಡಗಿ ತಾಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿ ಬರಗಾಲ ಚಾಯ್ ಇದ್ದು ರೈತರಿಗೆ ಸೂಕ್ತ ಪರಿಹಾರ ಹಾಗೂ 202425ರ ಬೆಳೆ ಪರಿಹಾರ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಹೋರಾಟ ಸಮಿತಿ ಬ್ಯಾಡಗಿ ಇವರು ಇಂದು ಮಾನ್ಯ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಗೆ ಮನವಿ ಪತ್ರವನ್ನು ನೀಡಿದರು ಈ ವೇಳೆ ರೈತ ಹೋರಾಟ ಸಮಿತಿಯ ಗೌರವಾಧ್ಯಕ್ಷ ಮುರಗೆಪ್ಪ ಶೆಟ್ಟರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ವಿಫಲವಾಗಿದ್ದು ತಾಲೂಕಿನ ರೈತರು ಪ್ರತಿವರ್ಷದಂತೆ ಆಶಾಭಾವನೆಯ ಇಂದ ಮುಂಗಾರಿನ ಪ್ರಾರಂಭದಲ್ಲಿ ಆದ ಮಳೆಯಿಂದ ಹುರುಪಿನಿಂದ ತಮ್ಮ ಹೊಲಕ್ಕೆ ಬೀಜ ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದಾರೆ ದುರ್ದೈವದ ಸಂಗತಿ ಏನೆಂದರೆ ಸಮರ್ಕ ಮಳೆ ಆಗದ ಹಿನ್ನೆಲೆಯಲ್ಲಿ ತಾಲೂಕಿನ ಅನೇಕ ರೈತರು ಬಿತ್ತಿದ ಬೆಳೆ ಒಣಗಿದ್ದರಿಂದ ದುಃಖದಿಂದ ಹರಗಿದ್ದಾರೆ ಬಿತ್ತಲು ಎಕರೆಗೆ 10,000 ಖರ್ಚು ಮಾಡಿ ಅತಿವ ಕಷ್ಟದಲ್ಲಿದ್ದು ರೈತರು ದಿಕ್ಕು ತೋಚದಂತಾಗಿದೆ.
ಕಾರಣ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಂಕಷ್ಟದಲ್ಲಿ ಭಾಗಿಯಾಗಿ ಪರಿಹಾರ ಕೊಡಬೇಕು ಇಲ್ಲವಾದಲ್ಲಿ ರೈತರ ಆತ್ಮಹತ್ಯೆಗೆ ಶರಣಾಗಬೇಕಾದ ಪರಿಸ್ಥಿತಿ ಬಂದೋದಗುತ್ತದೆ ಕೂಡಲೇ ಸರ್ಕಾರ ಎಚ್ಚೆತ್ತು ರೈತರ ಕಷ್ಟಕ್ಕೆ ಭಾಗಿಯಾಗಬೇಕು. ಕಳೆದ 2024.25 ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಹಣ ತುಂಬಿದ ರೈತರಿಗೆ ಪರಿಹಾರ ಹಲವಾರು ಗ್ರಾಮದ ರೈತರಿಗೆ ಘೋಷಣೆಯಾಗಿಲ್ಲ ಕೆಲವೇ ಗ್ರಾಮದ ರೈತರಿಗೆ ಪರಿಹಾರ ಘೋಷಣೆಯಾಗಿದ್ದು ಕಾರಣ ಇಂತಹ ರೈತರ ಕಷ್ಟಕಾಲದಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ವಿಮೆ ಕಂಪನಿಯಿಂದ ಬೆಳೆ ವಿಮೆ ಕೊಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ತಾಲೂಕು ಅಧ್ಯಕ್ಷ ನಿಂಗಪ್ಪ ಮಾಗೋಡ್ ಮಾತನಾಡಿ ರೈತರ ಸಾಲ ಮನ್ನಾ ಮಾಡಲಿ. ರೈತರಿಗೆ ಮೇಲಿಂದ ಮೇಲೆ ಅತಿವೃಷ್ಟಿ ಅನಾವೃಷ್ಟಿ ಬರಗಾಲದಿಂದ ತತ್ತರಿಸಿ ನಿರಂತರ ಆತ್ಮಹತ್ಯೆಗಳಾದರೂ ಸರ್ಕಾರ ರೈತರ ಸಂಕಷ್ಟಕ್ಕೆ ಬರುತ್ತಿಲ್ಲ ದೇಶದ ಬೇರೆ ರಾಜ್ಯಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಸಾಲ ಮನ್ನಾ ಘೋಷಣೆ ಮಾಡುತ್ತಿವೆ.
ಇಂತಹ ಸಮಯದಲ್ಲಿ ನಮ್ಮ ರಾಜ್ಯದಲ್ಲಿಯೂ ರೈತರ ಸಾಲ ಮನ್ನಾ ಘೋಷಣೆ ಮಾಡಿ ರೈತರಿಗೆ ನೀಡುತ್ತಿರುವ ಗೊಬ್ಬರದಲ್ಲಿ ವಿಶೇಷವಾಗಿ ಯೂರಿಯಾ ಗೊಬ್ಬರ ಎಕರೆ ಗೆ ಒಂದು ಚೀಲ ಕೊಡುತ್ತಿದ್ದು ರೈತರಿಗೆ ಸಾಕಾಗುತ್ತಿಲ್ಲ ಪ್ರತಿ ಎಕರೆಗೆ ಎರಡು ಯೂರಿಯ ನೀಡಬೇಕು ಕೂಡಲೇ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಉಪಾಧ್ಯಕ್ಷರಾದ ಈರ್ಪ ಸಂಕಣ್ಣನವರ್. ಬಸಯ್ಯ ಹಿರೇಮಠ. ಸತೀಶ್ ಬೆಳಕಿನ ಕೊಂಡ. ಶಶಿಧರಯ್ಯ ಗೊಲ್ಲರಹಳ್ಳಿ .ಗೋಣೆಪ್ಪ ಸಂಕಣ್ಣನವರ್. ಮಲಕಪ್ಪ ಸಂಕಣ್ಣನವರ್. ರುದ್ರ್ಪ ಹೊಸಮನಿ. ಪ್ರಕಾಶ್ ಮಾಮನಿ.ಗುಡ್ಡಪ್ಪ ಬುಡಪ್ಪನಹಳ್ಳಿ. ಚಂದ್ರ್ಪ ಮಾಗೋಡ್. ಚಂದ್ರ್ಪ ಸಂಕಣ್ಣನವರ್. ಬಸವರಾಜ್ ಸಂಕಣ್ಣನವರ್. ಮುರಿಗೆಪ್ಪ ಚನ್ನಗೌಡ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.