ಮೂಡಲಗಿ

ಮೂಡಲಗಿ ತಾಲೂಕು ಬರಗಾಲ ಘೋಷಣೆಗೆ ರೈತ ಸೇನೆ ಆಗ್ರಹ

ಮೂಡಲಗಿ ತಾಲೂಕು ಬರಗಾಲ ಘೋಷಣೆಗೆ ರೈತ ಸೇನೆ ಆಗ್ರಹ

ಲೋಕದರ್ಶನ ವರದಿ

ಗುರ್ಲಾಪೂರ 28: ಪ್ರತಿ ವರ್ಷ ರೈತನಿಗೆ ಜೂನ ತಿಂಗಳ ಆಗಮಿಸುತ್ತಿದ್ದಂತೆ ಸಂತೋಷದಿಂದ ಕೃಷಿ ಕಾಯಕ ಮಾಡಲು ಭೂತಾಯಿ ಮಡಿಲನ್ನು ತುಂಬುವ ತವಕದಿಂದ ಸಾಲ ಸೋಲ ಮಾಡಿಯಾದರೂ ಬೀಜ ಗೊಬ್ಬರ ಖರೀದಿಸಿ ರೈತರು ಕೃಷಿ ಕೆಲಸಕ್ಕೆ ಮುಂದಾಗುತ್ತಾರೆ. 

ಅದರಂತೆ ಈ ವರ್ಷವು ರೈತನು ಬಿತ್ತನೆ ಮಾಡಿದ್ದರೂ ಮುಂಗಾರು ಮಳೆರಾಯ ಕೈಕೊಟ್ಟು ರೈತನ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾನೆ. ಅಲ್ಲ ಸ್ವಲ್ಪ ಮಳೆಯಲ್ಲಿ ಬಿತ್ತನೆ ಮಾಡಿದ  ಬೀಜಗಳು ಮೊಳಕೆ ಒಡೆದು ಸ್ವಲ್ಪ ಪ್ರಮಾಣದಲ್ಲಿ ಬಳೆ ಬರಬಹುದು ಎಂದು ತಿಳಿದು ರೈತನಿಗೆ ಆಘಾತವಾಗಿದೆ. ಮತ್ತೆ ಬಿಸಿಲಿನ ತಾಪದಿಂದ ಬಂದ ಬೆಳೆ ಬತ್ತಿ ಒಣಗಿ ಹೋಗುವಂತಾಗಿದೆ. ಆದ್ದರಿಂದ ಕೃಷಿ ಅಧಿಕಾರಿಗಳೂ ಜನ ಪ್ರತಿನಿಧಿಗಳೂ ಮೂಡಲಗಿ ತಾಲೂಕಿನ ಪ್ರತಿ ಹಳ್ಳಿಗಳ ಸರ್ವೇ ಕಾರ್ಯ ಮಾಡಿ ರೈತನು ಬದುಕುವ ಸಲುವಾಗಿ ಸರಕಾರ ಸಹಾಯ ಸೌಲತ್ತುಗಳನು ಒದಗಿಸಬೇಕು. ಮೂಡಲಗಿ ತಾಲೂಕನ್ನು ಸಂಪೂರ್ಣ ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಗ್ರಾಮದ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಮೂಡಲಗಿ ತಾಲೂಕ ಘಟಕದ ಅಧ್ಯಕ್ಷ ಹನಮಂತ ಮುಗಳಖೋಡ, ಉಪಾಧ್ಯಕ್ಷ ಶಿವಬಸು ನೇಮಗೌಡರ ಸರಕಾರವನ್ನು ಆಗ್ರಹಿಸಿದ್ದಾರೆ 

ಸುದ್ದಿ ಓದಿ