ಮಹಲಿಂಗಪುರ

ರೈತ ವಿಧ್ಯಾನಿಧಿ ಜಾಗೃತಿ ಕಾರ್ಯಕ್ರಮ

ರೈತ ವಿಧ್ಯಾನಿಧಿ ಜಾಗೃತಿ ಕಾರ್ಯಕ್ರಮ
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪದವಿ ಕಾಲೇಜಿನಲ್ಲಿ ರೈತ ವಿಧ್ಯಾನಿಧಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮುಧೋ

ಮಹಾಲಿಂಗಪುರ11:  ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಅರ್ಜಿಗಾಗಿ ಅಗತ್ಯವಿರುವ ಮಾಹಿತಿಗಳು ಮತ್ತು ದಾಖಲೆಗಳ ಕುರಿತು ಮಾಹಿತಿಯನ್ನು ಮುಧೋಳದ ಕೃಷಿ ಅಧಿಕಾರಿ ಟಿ. ಎಮ್‌. ಡಾಂಗೆ ಅವರು ನೀಡಿದರು.  

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯಲ್ಲಿ ಅರ್ಥಶಾಸ್ತ್ರ ಮತ್ತು ಕೃಷಿ ಮಾರುಕಟ್ಟೆ ವಿಭಾಗ ಹಾಗೂ ರಬಕವಿ-ಬನಹಟ್ಟಿ ಕೃಷಿ ವಿಭಾಗದ ಸಂಯುಕ್ತಾಶ್ರಯದಲ್ಲಿ ರೈತ ವಿಧ್ಯಾನಿಧಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಮ್‌. ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಎಸ್‌.ಡಿ. ಸೋರಗಾಂವಿ, ಕೃಷಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಡಾ. ಕೆ.ಎಮ್‌. ಅವರಾದಿ, ದೈಹಿಕ ಶಿಕ್ಷಣ ನಿರ್ದೇಶಕ ವಿ.ಎಸ್‌. ಅಂಗಡಿ, ಉಪನ್ಯಾಸಕಿ ಡಾ. ಜಿ.ಎನ್‌. ಪಾಟೀಲ ಉಪಸ್ಥಿತರಿದ್ದರು. 

ಸುದ್ದಿ ಓದಿ