ಗಂಭೀರ ಸ್ವರೂಪ ಪಡೆದ ರೈತ ಹೋರಾಟ : ಪೊಲೀಸ್ ಬಸ್, ವಾಹನಗಳ ಮೇಲೆ ಕಲ್ಲು ತೂರಾಟ
ಬೆಳಗಾವಿ : ಕಬ್ಬಿನ ಬೆಳೆಗೆ 3500 ರೂ. ಬೆಲೆ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಧರಣಿ ವೇಳೆ ಪೊಲೀಸ ವಾಹನ ಸೇರಿದಂತೆ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಹುಕ್ಕೇರಿ ತಾಲೂಕಿನ ಹತ್ತರಗಿಯ ಟೋಲ್ ನಾಕಾ ಬಳಿ ಇಂದು ನಡೆದಿದೆ.
ಹುಕ್ಕೇರಿ ತಾಲೂಕಿನ ಹತ್ತರಗಿಯ ಟೋಲ್ ನಾಕಾ ಬಳಿಯಲ್ಲಿ ರೈತರು ಜಮಾವಣೆಗೊಂಡು ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸುತ್ತಿದ್ದರು.
ಈ ವೇಳೆಯಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಹಾಗೂ ಸಾರಿಗೆ ಸಂಸ್ಥೆಯ ಬಸ್ ಗಳು ಹಾಗೂ ಹೊರ ರಾಜ್ಯದಿಂದ ಹೊರಟಿದ್ದ ಕೆಲ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇದರಿಂದ ಕೆಲವಾಹನ ಗಾಜು ಪುಡಿ ಪುಡಿಯಾಗಿವೆ. ಅಲ್ಲದೆ ಕೆಲ ವಾಹನಗಳ ಜಖಂಗೊಂಡಿವೆ. ಇದರಿಂದ ಸ್ಥಳದಲ್ಲಿ ಕೆಲಹೊತ್ತು ತ್ವೇಶಮಯ ವಾತಾವರಣ ನಿರ್ಮಾಣವಾಯಿಗಿದೆ.