ಕಬ್ಬಿನ ಬೆಲೆ ನಿಗದಿಗಾಗಿ ಹೆಚ್ವಿದ ರೈತರ ಕಿಚ್ಚು : ರಸ್ತೆ ತಡೆದು ಪ್ರತಿಭಟನೆ, ಪ್ರಯಾಣಿಕರ ಪರದಾಟ

ಕಬ್ಬಿನ ಬೆಲೆ ನಿಗದಿಗಾಗಿ ಹೆಚ್ವಿದ ರೈತರ ಕಿಚ್ಚು : ರಸ್ತೆ ತಡೆದು ಪ್ರತಿಭಟನೆ, ಪ್ರಯಾಣಿಕರ ಪರದಾಟ

ಬೆಳಗಾವಿ : ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬೆಳೆಗೆ ಬೆಲೆ ನಿಗದಿ ಮಾಡದಿರುವದು ಖಂಡಿಸಿ ಹಾಗೂ ಯೋಗ್ಯ ಬೆಲೆ ನೀಡುವಂತೆ ಒತ್ತಾಯಿಸಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ಘಟನೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಹಾಗೂ ಕೂಚರಿ ಗ್ರಾಮದ ಬಳಿ ನಡೆದಿದೆ. 

     ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಯೋಗ್ಯ ಬೆಲೆ ನೀಡುತ್ತಿಲ್ಲ ಹಾಗೂ ಈ ವರೆಗೆ ಕಬ್ಬು ಬೆಲೆ ನಿಗದಿ ಮಾಡದಿರುವದನ್ನು‌ ಖಂಡಿಸಿ ಹುಕ್ಕೇರಿ ತಾಲೂಕಿನ ಕನತನೂರ ಗೇಟ್ ಹಾಗೂ ಕೋಚರಿ ಗ್ರಾಮದ ಬಳಿ ರಸ್ತೆಗೀಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

     ರೈತರ ಈ ಪ್ರತಿಭಟನೆಯಿಂದ ಈ ರಸ್ತೆಯಲ್ಲಿ ಸಂಚರಿಸಬೇಕಿದ್ದ ಪ್ರಯಾಣಿಕರು ದಾರಿ ಇಲ್ಲದೆ ಪರದಾಡುವಂತಾಗಿದೆ. ಸಂಕೇಶ್ವರ ಪಟ್ಟಣದಿಂದ ಹುಕ್ಕೇರಿ ಕಡೆ ಹಾಗೂ ಚಿಕ್ಕೋಡಿಯಿಂದ ಬೆಳಗಾವಿ ಕಡೆಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. 

      

ಸುದ್ದಿ ಓದಿ