ಹಗರಿಬೊಮ್ಮನಹಳ್ಳಿ

ರೈತ ಕುಟುಂಬಕ್ಕೆ ಉದ್ಯೋಗ ನೀಡವಂತೆ ರೈತ ಸಂಘ ಆಗ್ರಹ

ರೈತ ಕುಟುಂಬಕ್ಕೆ ಉದ್ಯೋಗ ನೀಡವಂತೆ ರೈತ ಸಂಘ ಆಗ್ರಹ

ಹಗರಿಬೊಮ್ಮನಹಳ್ಳಿ 09: ತಾಲೂಕ ವ್ಯಾಪ್ತಿಯಲ್ಲಿ ಬರುವ ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಗೆ ಭೂಮಿ ನೀಡುವ ಉದ್ದೇಶದಿಂದ ಮದ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆ ವಿವಿಧ ಸರ್ವೇ ನಂಬರ್‍ವುಳ್ಳ 24 ಎಕರೆ ಭೂಮಿ ಖರೀದಿಸಿ ಹೆಚ್ಚಿನ ಬೆಲೆಗೆ ಕಂಪನಿಗೆ ಮಾರಾಟ ಮಾಡಿ ಕಡಿಮೆ ಬೆಲೆಯಲ್ಲಿ ಪಟ್ಟಣದ ಸಬ್ ರೀಜಿಸ್ಟರ್ ಕಛೇರಿಯಲ್ಲಿ ಕಡಿಮೆ ಫೀಜ್ ನೀಡಿ ರಿಜಿಸ್ಟರ್ ಮಾಡಿಸುವ ಮೂಲಕ ರೈತವರ್ಗ ಹಾಗೂ ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ರೈತ ಸಂಘದ  ಪದಾಧಿಕಾರಿಗಳು ತಹಶೀಲ್ದಾರ್ ಶರಣಮ್ಮ ಅವರಿಗೆ ಮನವಿ ಸಲ್ಲಿಸಿದರು. 

ಸಬ್ ರೀಜೀಸ್ಟರ್ ಆರೋಪಿಸಿ ಇಂದಿನ ಬೆಲೆ ಎಕರೆಗೆ 20 ಲಕ್ಷ ರೈತರಿಗೆ ನೀಡಿ ಎಸ್ ಎಲ್ ಆರ್ ಕಂಪನಿ ಹೆಸರಿಗೆ ರಿಜೀಸ್ಟೇಶನ್ ಮಾಡಿಸಬೇಕು ಭೂಮಿ ನೀಡಿದ ರೈತ ಕುಟುಂಬಗಳಿಗೆ ಕಂಪನಿಯಲ್ಲಿ ಕೆಲಸ ನೀಡುವ ಮೂಲಕ ಜೀವನ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಹೆಚ್ ಮಂಜುನಾಥ ಬಣದ ರಾಜ್ಯ ಪ್ರಧಾನ ಕಾರ್ಯದಶಿ ಕೆ.ಪರುಶುರಾಮ,ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಗೋಣ ಬಸಪ್ಪ, ತಾಲೂಕ ಅಧ್ಯಕ್ಷ ಸಿದ್ದನ್‍ಗೌಡ, ಗುರುಬಸವರಾಜ, ವಿರೇಶ್ ರಾಜ, ಸಣ್ಣಪ್ಪ ಇತರರಿದ್ದರು.

ಸುದ್ದಿ ಓದಿ