ಚಿಂತಲಗೇರಾ ಗ್ರಾಮದಲ್ಲಿ ಹಾವು ಕಚ್ಚಿ ರೈತ ಮರಣ ಹಿ ಕುಟುಂಬಕ್ಕೆ ಸಾಂತ್ವನ, ಧನ ಸಹಾಯ
ಬೀದರ್ 05: ದಕ್ಷಿಣ ಕ್ಷೇತ್ರದ ಚಿಂತಲಗೇರಾ ಗ್ರಾಮದಲ್ಲಿ ಈತ್ತಿಚೇಗೆ ರೈತ ವಿದ್ಯಾಸಾಗರ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಹಾವು ಕಚ್ಚಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ ಹಿನ್ನೆಲೆಯಲ್ಲಿ ಈ ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣವನ್ನು ಉಂಟುಮಾಡಿದೆ.ಘಟನೆ ಕುರಿತು ತಿಳಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಇಂದು ಮೃತರ ನಿವಾಸಕ್ಕೆ ಭೇಟಿ ನೀಡಿದ ಅವರು, ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ವೈಯಕ್ತಿಕ ಧನ ಸಹಾಯವನ್ನು ನೀಡಿದರು. ಸರ್ಕಾರದಿಂದ ಶೀಘ್ರದಲ್ಲೇ ಸೂಕ್ತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಟುಂಬದವರಿಗೆ ಭರವಸೆ ನೀಡಿದ್ದೇನೆ ಸಂಬಂಧಿತ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿ, ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚನೆ ನೀಡಿದ್ದೇನೆ.ನಾವು ರೈತರ ಶ್ರಮದಿಂದಲೇ ಬದುಕುತ್ತಿರುವ ಸಮಾಜ. ಅವರ ಸುರಕ್ಷತೆ ಮತ್ತು ಕಲ್ಯಾಣ ನಮ್ಮೆಲ್ಲರ ಜವಾಬ್ದಾರಿ. ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸುವುದು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯ.ಭಗವಂತರು ನಿಧನರಾದ ವಿದ್ಯಾಸಾಗರ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೀರೀಶ ಕುಲಕರ್ಣಿ, ಶಂಕರಾವ ಕೊಟರಕಿ, ಹಾವಶೆಟ್ಟಿ ಪಾಟೀಲ್, ಜಗದೀಶ್ ಖೂಬಾ, ಚಂದ್ರಶೇಖರ ನಿಟ್ಟೂರೆ, ಕೃಷ್ಣ ಬಚ್ಚೆ ಗೋಪಾಲ ರೆಡ್ಡಿ, ಜಗನ್ ರೆಡ್ಡಿ, ಶಿವಗೊಂಡ ಮತ್ತಿತರರು ಉಪಸ್ಥಿತರಿದ್ದರು.