ಖಾನಾಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಅನ್ನದಾತ ದುರ್ಮರಣ
ಬೆಳಗಾವಿ : ರೈತರೊಬ್ಬರಿಗೆ ವಿದ್ಯುತ್ ತಗುಲಿ ಮೃತಪಟ್ಟ ಅಘಾತಕಾರಿ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದಲ್ಲಿ ವರದಿಯಾಗಿದೆ.
ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದ ರೈತ ಧ್ಯಾನೇಶ್ವರ ಮಾಳವಿ (34) ವಿದ್ಯುತ್ ಸ್ಪರ್ಶಿಸಿ ಬುಧವಾರ ಮೃತಪಟ್ಟಿದ್ದಾರೆ.
ಬೇಕವಾಡದಲ್ಲಿ ಘಟನೆ ನಡೆದಿದ್ದು,
ಹೊಲದಲ್ಲಿ ಮೆಣಸಿನಕಾಯಿ ಕೃಷಿ ಮಾಡುತ್ತಿದ್ದಾಗ ಬೋರ್ ವೆಲ್ ಪ್ರಾರಂಭವಾಗದ ಕಾರಣ ವಿದ್ಯುತ್ ಬಟನ್ ಮತ್ತು ಸ್ಟಾರ್ಟರ್ ತಪಾಸಣೆ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಏಕಾಏಕಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ, ತಂದೆ- ತಾಯಿ ಇದ್ದಾರೆಂದು ಹೇಳಲಾಗಿದೆ.