ಟ್ಯ್ರಾಕ್ಟರ್ ಕೆಳಗೆ ಸಿಲುಕಿ ರೈತ ಸಾವು : ಖಾನಾಪುರ ತಾಲೂಕಿನಲ್ಲಿ ಘಟನೆ
ಖಾನಾಪುರ, ಬೆಳಗಾವಿ : ಬತ್ತದ ಗದ್ದೆಯಲ್ಲಿ ಮಿನಿ ಟ್ರ್ಯಾಕ್ಟರ್ ನಿಂದ ರೂಟರ್ ಹಾಯಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ (ರೂಟರ್) ಪಲ್ಟಿಯಾಗಿ ರೈತನೋರ್ವ ಮೃತಪಟ್ಟಿರುವ ಘಟನೆ ಖಾನಾಪುರ ತಾಲೂಕಿನ ತೇರೇಗಾಳಿ ಗ್ರಾಮದ ಬಳಿ ಇಂದು ನಡೆದಿದೆ.
ಖಾನಾಪುರ ತಾಲೂಕಿನ ತಿವೋಲಿ ಗ್ರಾಮದ ರೈತ, ನಿವೃತ್ತ ಶಿಕ್ಷಕ ಪಾಂಡುರಂಗ ಈತ (61) ಮೃತ ರೈತನಾಗಿದ್ದಾನೆ. ಕೃಷಿ ಭೂಮಿಯಲ್ಲಿ ರೂಟರ್ ಯಂತ್ರ ಚಲಾಯಿಸುತ್ತಿದ್ದ ವೇಳೆಯಲ್ಲಿ (ಯಂತ್ರ) ಟ್ರ್ಯಾಕ್ಟರ್ ಪಲ್ಟಿಯಾದ ಕಾರಣ ಚಲಾಯಿಸುತ್ತಿದ್ದ ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುದ್ದಿ ತಿಳಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ ಹಾಗೂ ಮಾಜಿ ಶಾಸಕರಾದ ಅಂಜಲಿ ನಿಂಬಾಳಕರ್, ಅರವಿಂದ್ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂದರ್ಭದಲ್ಲಿ ಸದಾನಂದ ಪಾಟೀಲ, ಭರಮಾಣ್ಣಿ ಪಾಟೀಲ, ರವಿ ಪಾಟೀಲ ಹಾಗೂ ಪೊಲೀಸರು ಉಪಸ್ಥಿತರಿದ್ದರು.