ಮೂಡಲಗಿ

ರೈತರ ಮರಣ ಶಾಸನ ಕಾನೂನುಗಳು ಜಾರಿ: ಚೂನಪ್ಪ ಪೂಜೇರಿ ಆಕ್ರೋಶ

ರೈತರ ಮರಣ ಶಾಸನ ಕಾನೂನುಗಳು ಜಾರಿ: ಚೂನಪ್ಪ ಪೂಜೇರಿ ಆಕ್ರೋಶ
ಮೂಡಲಗಿ: ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡರು ಭಾಗವಹಿಸಿದ್ದರು.

ಮೂಡಲಗಿ 23: ಮೋದಿ ಸರ್ಕಾರ ರೈತರ ಪರವಾಗಿ ನಿಂತು ರೈತರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುವ ಮೂಲಕ ರೈತ ಸಮುದಾಯಕ್ಕೆ ಒಳ್ಳೆಯ ಕೂಡುಗೆಗಳನ್ನು ನೀಡುತ್ತಾರೆ ಎಂಬ ಆಶಾಭಾವನೆಯಿಂದ ಮತ ನೀಡಿದಕ್ಕೆ ರೈತರ ಮರಣ ಶಾಸನ ಮಾಡುವಂತ ಕಾನೂನಗಳನ್ನು ಜಾರಿಗೆ ತಂದಿದ್ದಾರೆ ಎಂದು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.

ಸೋಮವಾರದಂದು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮನೆಯ ಒಳಗೆ ಬೆಳವ ಹಕ್ಕಿ ಬಂದರೆ ಹೇಗೆ ಮನೆಯನ್ನು ಬಿಡುವ ಪರಸ್ಥಿತಿ ಬರುತ್ತದೆ ಹಾಗೆ ಮೋದಿಯವರು ಕೂಡಾ ದೇಶದ ರೈತರ ಪಾಲಿಗೆ ಬೆಳವ ಹಕ್ಕಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮೋದಿಯವರು ಚಹಾ ಮಾರಿದ್ದರೆ ರೈತರಿಗೆ ಇವತ್ತು ಬೀದಿಯಲ್ಲಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅದಲ್ಲದೆ ಮೋದಿಯವರು ಅದಾನಿ, ಅಂಬಾನಿಯಂತಹ ಕಾಪೋರೆಟರಗಳಿಗೆ ಚುನಾವಣೆಯಲ್ಲಿ ಗೆದ್ದು ಬಂದ ನಂತರ ನಿಮ್ಮ ಕೈಗೆ ದೇಶ ಕೊಡುತ್ತೇನೆಂದು ಮಾತು ಕೊಟ್ಟಿರಬಹುದು ಅದಕ್ಕಾಗಿಯೆ ಮೋದಿಯವರು ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆಯುತ್ತಿಲ್ಲವೆಂದು ಹೇಳಿದರು.

ಮೋದಿಯವರು ಹಿಂದುತ್ವ ಎಂಬ ಅಜೆಂಡಾ ಇಟ್ಟುಕೊಂಡು ಇವತ್ತು ನಮ್ಮನ್ನೆ ದಿವಾಳಿ ಮಾಡಿದ್ದಾರೆ, ಅನಾವಶ್ಯಕವಾದ ಕಾಯಿದೆಗಳನ್ನು ತಂದು ಹಳ್ಳಿಗಳಲ್ಲಿ ನೆಮ್ಮದಿ ಜೀವನ ಮಾಡುತ್ತಿರುವ ನಮ್ಮ ಜೀವನವನ್ನು ಹಾಳು ಮಾಡುತಿದ್ದಾರೆ, ಪ್ರಣಾಳಿಕೆಯಲ್ಲಿ ಹೇಳಿದವುಗಳನ್ನು ಅವರೆ ಕಾರ್ಯರೂಪಕ್ಕೆ ತರುತ್ತಿಲ್ಲ. ಮುಂದಿನ ತಿಂಗಳಲ್ಲಿ ನಡೆಯುವ ಉಪಚುನಾವಣೆ ಒಳಗಾಗಿ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯದೇ ಹೋದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಉಪಚುನಾವಣೆಯಲ್ಲಿ ಮತದಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಾರ್ಚ 31 ರಂದು ಬೆಳಗಾವಿಯಲ್ಲಿ ನಡೆಯುವ ರೈತ ಸಮಾವೇಶದಲ್ಲಿ ದೆಹಲಿ ಹೋರಾಟದ ಪ್ರಮುಖ ಮುಖಂಡ ರಾಕೇಶ ಟಿಕಾಯತ್‍ಜೀ, ಯುಧವೀರ್ ಸಿಂಗ್‍ಜೀ, ದರ್ಶನ ಪಾಲ್, ರಾಜು ಶೆಟ್ಟಿ ಭಾಗವಹಿಸುವರು. ಅವರ ಜೊತೆ ಚರ್ಚಿಸಿ ಮತ ಚಲಾಯಿಸುವ ಬಗ್ಗೆ ತಿರ್ಮಾನ ಮಾಡುತ್ತೇವೆ, ಪಕ್ಷ ವಿರೋಧ ಮಾಡಿಯಾದರು ರೈತ ವಿರೋಧ ಕಾಯಿದೆಗಳನ್ನು ತಂದಿರುವ ಪಕ್ಷಕೆ ಲೊಕಸಭಾ ಉಪಚುನಾವಣೆಯಲ್ಲಿ ನೊಟಾ ಮತ ಚಲಾಯಿಸುತ್ತೇವೆಂದು ಹೇಳಿ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ, ವಿಯಜಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳ ರೈತರು ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.

ಸಂಘಟನೆಯ ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ, ಪಾಂಡು ಬೀರನಗಡ್ಡಿ, ವೀರಣ್ಣ ಸಸಾಲಟ್ಟಿ, ಗುರುನಾಥ ಹುಕ್ಕೇರಿ, ಪ್ರಕಾಶ ತೇರದಾಳ, ಪದ್ಮಣ್ಣಾ ಉಂದ್ರಿ, ರವಿ ನುಚ್ಚುಂಡಿ, ನಂದೆಪ್ಪ ನೇಸೂರ, ಶಿವಲಿಂಗಪ್ಪ ಮೂಲಿಮನಿ ಹಾಗೂ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ