ಮಳೆ ನೀರಿನ ಸೆಳೆತಕ್ಕೆ ಕಿತ್ತು ಹೋದ ತೋಟದ ರಸ್ತೆ : ಮಕ್ಕಳು ಶಾಲೆಗೆ ಬರಲು ಪರದಾಟ
ಸಂಕೇಶ್ವರ : ಮಳೆರಾಯನ ಆರ್ಭಟಕ್ಕೆ ರೈತರ ತೋಟಕ್ಕೆ (ಜಮೀನುಗೆ) ಸಾಗಬೇಕಾದ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು ತೋಟದ ಮನೆಗಳಿಂದ ಶಾಲೆಗೆ ಆಗಮಿಸುವ ಮಕ್ಕಳು ರಸ್ತೆ ಇಲ್ಲದೆ ಪರದಾಡುವಂತಾ ಸನ್ನಿವೇಶ ಬಂದೊದಗಿದೆ.
ಹೌದು ಓದುಗರೇ ಸಂಕೇಶ್ವರ ಪಟ್ಟಣಧ ಹೊರ ವಲಯದಲ್ಲಿ ಬರುವ ಸಂಕೇಶ್ವರ ಹಿಟ್ನಿ ರಸ್ತೆಯು ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಕಿತ್ತು ಹೋಗಿದೆ. ಇದರಿಂದ ಆ ಭಾಗದ ತೋಟದ ಮನೆಗಳಿಂದ ಸಂಕೇಶ್ವರ ಪಟ್ಟಣಕ್ಕೆ ಶಿಕ್ಷಣ ಪಡೆಯಲು ಶಾಲೆಗೆ ಆಗಮಿಸಬೇಕಾದ ಸಣ್ಣ ಮಕ್ಕಳು ರಸ್ತೆ ಇಲ್ಲದೆ ಶಾಲೆಗೆ ಬರಲು ಆಗದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಕಡೆಗೆ ಸ್ವಲ್ಪ ಗಮನ ಹರಿಸಿ ತೋಟದ ಮನೆಗಳಿಂದ ಬರುವ ಶಾಲ ಮಕ್ಕಳಿಗೆ ರಸ್ತೆ ಕಲ್ಪಿಸಿ ಅನುವು ಮಾಡಿ ಕೊಡಬೇಕೇಂದು ಈ ಭಾಗ ರೈತರು ಒತ್ತಾಯಿಸಿದ್ದಾರೆ.