ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಂಜುನಾಥಗೆ ಬೀಳ್ಕೊಡುಗೆ
ಮಹಾಲಿಂಗಪುರ 08: ಗ್ರಾಹಕರನ್ನು ಗೌರವದಿಂದ ಕಂಡು, ಬ್ಯಾಂಕ ಸೌಲಭ್ಯಗಳ ಮಾಹಿತಿ ನೀಡಿ, ಆಗ ಸಿಬ್ಬಂದಿಗಳ ಮೇಲೆ ಅವರ ವಿಶ್ವಾಸ ಹೆಚ್ಚಿ ಬ್ಯಾಂಕ್ ಅಭಿವೃದ್ಧಿ ಹೊಂದುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ಮುಖ್ಯ ವ್ಯವಸ್ಥಾಪಕ ಮಂಜುನಾಥ ಎ. ನುಡಿದರು.
ಅವರು ಸ್ಥಳೀಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಎಜಿಎಂ ಆಗಿ ಪದನ್ನೋತಿ ಹೊಂದಿ ಮಂಗಳೂರಿಗೆ ವರ್ಗಾವಣೆಗೊಂಡ ಈ ಸಮಯದಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರು ಏರಿ್ಡಸಿದ ಆಧರದ ಬೀಳ್ಕೋಡುಗೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ ಪ್ರಗತಿಪರ ರೈತರಾದ ಬಿ.ಜಿ.ಹೊಸೂರ ಮಾತನಾಡಿ, ವಿಜಯ ಬ್ಯಾಂಕ ಪಟ್ಟಣಕ್ಕೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ನೀಡಿದ ಕೊಡುಗೆ ಅಪಾರ ಎಂದರು. ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿ, ವಿಜಯ ಬ್ಯಾಂಕಿನ ಸೇವೆ ಬ್ಯಾಂಕ್ ಆಫ್ ಬರೋಡಾ ಆಗಿ ಪರಿವರ್ತನೆಗೊಂಡು ದೇಶದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಮತ್ತು ಸದರಿ ಬ್ಯಾಂಕಿನ ಆರ್ಥಿಕ ನೆರವು ಮಹಾಲಿಂಗಪುರ ವಾಣಿಜ್ಯ ನಗರವಾಗಿ ಬೆಳೆಯಲೂ ಕಾರಣವಾಗಿದೆ ಎಂದರು.
ಉಪ ವ್ಯವಸ್ಥಾಪಕ ಪ್ರದೀಪ ಕುಮಾರ, ಪ್ರೇಮ ರಾಮಟೇಕ್, ಪ್ರಶಾಂತ ಚನ್ನಾಳ, ಚಂದನ ಶಹಾ, ಕಮಲೇಶ ಕುಮಾರ, ಕರಣಿಕರಾದ ನಂದಕುಮಾರ ಬೆಲ್ಲದ, ಭರತ ಹಲ್ಯಾಳ, ಧೀರೆಂದ್ರ ಮದ್ದಿನಮಠ, ಪ್ರಶಾಂತ ಆಲೂರ, ಹಿರಿಯ ವ್ಯವಸ್ಥಾಪಕರು ಮಂಗಳೂರಿಗೆ ಎಜಿಎಂ ಆಗಿ ತೆರಳುತ್ತಿರುವುದು ಸಂತೋಷ ಎನಿಸುತ್ತದೆ ಎಂದು ಮಂಜುನಾಥ ಅವರ ಗುಣಗಾನ ಮಾಡಿದರು.
ಶಶಿಧರ ರಾವ್, ಯಾಸೀನ ಮಾಲದಾರ, ಬ್ಯಾಂಕಿನ ಗ್ರಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.