ನಿವೃತ್ತ ಶಿಕ್ಷಕನಿಗೆ ಅಭಿಮಾನದ ಬೀಳ್ಕೊಡುಗೆ
ಮಹಾಲಿಂಗಪುರ 03: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯಲ್ಲಿ ಎರಡೂವರೆ ದಶಕಗಳವರೆಗೆ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಕ ಸಿ.ಎಸ್.ಕೊಣ್ಣೂರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲೆ ವತಿಯಿಂದ ಹಾಗೂ ವೈಯಕ್ತಿಕವಾಗಿ ಉಡುಗೊರೆ ನೀಡಿ ಅಭಿಮಾನದ ಮಾತುಗಳನ್ನಾಡಿ, ನಿವೃತ್ತ ಜೀವನ ಸುಖಕರವಾಗಿರಲೆಂದು ಹಾರೈಸಲಾಯಿತು.