ಬಿಳ್ಕೋಡುಗೆ ಸಮಾರಂಭ
ಮಹಾಲಿಂಗಪುರ02: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಎಸ್.ಎಂ.ಬನ್ನೂರ, ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ಆಶಾರಾಣಿ ಚಿನಗುಂಡಿ ಅವರಿಗೆ ಸನ್ಮಾನ ಮಾಡುವುದರ ಮೂಲಕ ಬೀಳ್ಕೋಡಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ನಿಪ್ಪಾಣಿ ಕೆ.ಎಲ್.ಇ ಸಂಸ್ಥೆಯ ಪ್ರಾಚಾರ್ಯ ಡಾ.ಮಹಾಂತೇಶ ಹುರಳಿ, ಪ್ರಾಧ್ಯಾಪಕ ಎಂ.ಜಿ.ಯರನಾಳ ಹಲವರು ಇದ್ದರು.