ಮಹಲಿಂಗಪುರ

ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ಖ್ಯಾತ ಕ್ರಿಕೆಟಿಗ ಕೆ ಎಲ್‌. ರಾಹುಲ್ ನೆರವು

ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ಖ್ಯಾತ ಕ್ರಿಕೆಟಿಗ ಕೆ ಎಲ್‌. ರಾಹುಲ್ ನೆರವು

 ಸ್ಥಳೀಯ ಸಾರ್ವಜನಿಕರಿಂದ ಪ್ರಶಂಸೆ. 

ಮಹಾಲಿಂಗಪುರ 13 : ಪಟ್ಟಣದ ಬಡ ವಿಧ್ಯಾರ್ಥಿ ಅಮೃತ ಮಾವಿನಕಟ್ಟಿ ವಿದ್ಯಾಭ್ಯಾಸಕ್ಕೆ ಭಾರತೀಯ ತಂಡದ ಕ್ರಿಕೆಟ್ ಆಟಗಾರರಾದ ಕೆ ಎಲ್‌. ರಾಹುಲ್ ಅವರು ಸಹಕಾರ ನೀಡಿ ಬಡ ಕುಟುಂಬಕ್ಕೆ ಆಸರೆಯಾಗಿ ಸ್ಥಳೀಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಮಹಾಲಿಂಗಪುರದ ಅಯೋಧ್ಯ ನಗರದ ನಿವಾಸಿ ಅಮೃತ ದಾನಪ್ಪ. ಮಾವಿನಕಟ್ಟಿ ಇನ್ನೋರ್ವ ಸಹೋದರ ಅಮಿತ ದಶಕದ ಹಿಂದೆ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾದರು. ಆಗ ದೊಡ್ಡಪ್ಪ ಶ್ರೀಶೈಲ ವೀರಸಂಗಪ್ಪ ಸಬರದ ಮತ್ತು ಧರ್ಮಪತ್ನಿ ಶೋಭಾ ಎರಡು ಮಕ್ಕಳ ಶಿಕ್ಷಣದ ಜೊತೆಗೆ ಅವರ ಬದುಕಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ.  

ಅದರಂತೆ ಅವರಿಗೆ ತಮಗೆ ದೊರಕುವ ಅಲ್ಪ ಸಂಬಳದಲ್ಲಿ ಪಿಯುಸಿ ಎರಡನೇ ವರ್ಷದವರೆಗೆ ಶಿಕ್ಷಣವನ್ನು ಕೂಡ ಕೊಡಿಸುತ್ತಾರೆ. ಆತ ಎಸ್ ಆರ್ ಎ. ಕಾಲೇಜ್ ನಲ್ಲಿ ಕಾಮರ್ಸ್‌ ದ್ವಿತೀಯ ವರ್ಷವನ್ನು ಪೂರೈಸಿ 600ಅಂಕಗಳ ಪೈಕಿ 571 ಅಂಕಗಳನ್ನು ಪಡೆಯುತ್ತಾನೆ. ಇವನ ಸಾಧನೆಯನ್ನು ಗಮನಿಸಿದ ಪೋಷಕರು ಹೆಚ್ಚಿನ ವ್ಯಾಸಂಗ ಮಾಡಿಸುವ ನಿಟ್ಟಿನಲ್ಲಿ ಯೋಚಿಸುತ್ತಾರೆ.  

ಮುಂದಿನ ಬಿಕಾಂ ಜೊತೆ ಸಿಎ ಅಧ್ಯಯನವಿರುವ ಹುಬ್ಬಳ್ಳಿಯ ಕೆಎಲ್‌ಇ  ಸಂಸ್ಥೆಯ ಭೂಮರೆಡ್ಡಿ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಅನಿಯಾದಾಗ ಅಲ್ಲಿಯ ಶಿಕ್ಷಣ ಶುಲ್ಕ ಹೊರೆ ಎನಿಸುತ್ತದೆ. ಆಗ ಕೈಯಲ್ಲಿರುವ ಅಲ್ಪ ಹಣವನ್ನು ತೆಗೆದುಕೊಂಡು ಮತ್ತೆ ಊರಿಗೆ ಮರಳುತ್ತಾರೆ. 

ಆಗ ಸಹೋದರನ ಗೆಳೆಯ ನಿತಿನ ಸಹಕಾರದಿಂದ ಹುಬ್ಬಳ್ಳಿಯಲ್ಲಿರುವ ಸಮಾಜ ಸೇವಕ ರಾಜಕೀಯ ಧುರೀಣರಾದ ಮಂಜುನಾಥ್ ಹೆಬ್ಸೂರ್ ಮೂಲಕ ಭಾರತೀಯ ತಂಡದ ಖ್ಯಾತ ಕ್ರಿಕೆಟಿಗರಾದ ಕೆ ಎಲ್‌. ರಾಹುಲ್ ಅವರಿಂದ ಮೂರು ವರ್ಷದ ಶಿಕ್ಷಣದ ವೆಚ್ಚ ಭರಿಸುವ ವಾಗ್ದಾನದೊಂದಿಗೆ, ಮುಂಗಡವಾಗಿ 75ಸಾವಿರ ನಗದು ಹಣವನ್ನು ಅಮೃತ ಖಾತೆಗೆ ಜಮಾ ಮಾಡಿಸುತ್ತಾರೆ. ಮಾನವೀಯತೆ ಮೆರೆದ ಕ್ರಿಕೆಟಿಗನ ಸಹಕಾರ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಖತ್ ಪ್ರಸಿದ್ಧಿ ಪಡೆದುಕೊಂಡಿದೆ. ಸಕಾಲಕ್ಕೆ ನೆರವಿಗೆ ಬಂದ ಇವರಿಗೆ ಅಮೃತ ಮಾವಿನಕಟ್ಟಿ ಮತ್ತು ಪೋಷಕರು ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತಾರೆ. 

ಹುಬ್ಬಳ್ಳಿಯ ಮಂಜುನಾಥ್ ಹೆಬ್ಸೂರ್ ಸಾಮಾಜಿಕವಾಗಿ ನೊಂದ ಜೀವಗಳಿಗೆ ಆಸರೆಯಾಗುವಂತ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಕೊರೋನ ಕಾಲದಲ್ಲಿ ಸ್ವತಃ 8ಲಕ್ಷ ಮತ್ತು ಇನ್ನಿತರ ದಾನಿಗಳಿಂದ ಬಂದ ಹಣದಿಂದ 38 ದಿವಸಗಳವರೆಗೆ ಹುಬ್ಬಳ್ಳಿ ಮತ್ತು ಧಾರವಾಡ ತಾಲೂಕು ಭಾಗಗಳ ಪ್ರದೇಶಗಳಲ್ಲಿ ಆಹಾರ ಮತ್ತು ಓಷಧಿ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. 

 ಈ ಕಾರ್ಯದಿಂದ ಪ್ರಖ್ಯಾತಿ ಪಡೆದ ಇವರಿಗೆ ಭಾರತೀಯ ತಂಡದ ಅನೇಕ ಖ್ಯಾತನಾಮ ಕ್ರಿಕೆಟ್ ಆಟಗಾರರಾದ ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮಹಿಳಾ ತಂಡದ ವೇದಾ ಕೃಷ್ಣಮೂರ್ತಿ ಕೂಡ ಚಿರಪರಿಚಿತರಾಗಿ ಇಂತಹ ಪುಣ್ಯ ಕಾರ್ಯದಲ್ಲಿ ಅವರೂ ಸಹ ಹಣ ಒದಗಿಸಿದ್ದಾರೆ ಎಂದು ಸಂತೋಷದಿಂದ ತಿಳಿಸಿ ಅವರಿಗೆ ಕೃತಜ್ಞತೆ ಅರ​‍್ಿಸುತ್ತಾರೆ.  

ಭಾರತೀಯ ತಂಡದ ಖ್ಯಾತ ಕ್ರಿಕೆಟಿಗರಾದ ಕೆ ಎಲ್‌. ರಾಹುಲ್ ಸರ್ ಬಿಕಾಂ ಮತ್ತು ಸಿಎ ಮಾಡುವ ನನ್ನ ವಿದ್ಯಾಭ್ಯಾಸದ ನೆರವಿಗೆ ಬಂದಿರುವುದಕ್ಕೆಅವರಿಗೆ ನಾನು ಮತ್ತು ನನ್ನ ಪೋಷಕರ ಪರವಾಗಿ ಅನಂತ ಅನಂತ ಧನ್ಯವಾದಗಳು ತಿಳಿಸುತ್ತೇನೆ. 

ವಿದ್ಯಾರ್ಥಿ, ಅಮೃತ ಮಾವಿನಕಟ್ಟಿ, ಮಹಾಲಿಂಗಪುರ. 


ಸುದ್ದಿ ಓದಿ