ಬೆಳಗಾವಿಯಲ್ಲಿ ಹೆಚ್ಚಾಯಿತು ನಕಲಿ ಆಧಾರ್ ಕಾರ್ಡುಗಳ ಹಾವಳಿ : ಅಲೇಮಾರಿ ವ್ಯಾಪಾರಿಗಳ ಕಡೆ ನಕಲಿ ಆಧಾರ್ ಪತ್ತೆ, ವಿಡಿಯೋ ವೈರಲ್
ಪಾರೇಶ ಭೋಸಲೆ
ಬೆಳಗಾವಿ : ಮೂರು ರಾಜ್ಯಗಳಿಗೆ ಸಂಪರ್ಕದ ಕೊಂಡಿಯಾಗಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಕಲಿ ಆಧಾರ ಕಾರ್ಡುಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ವಿಡಿಯೋ ಒಂದು ಸಾಮಾಜಿಕ ಅಂತರ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸದ್ದು ಮಾಡುತ್ತಿದೆ. ಈ ಕುರಿತು ಬೆಳಗಾವಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಚಾರಣೆ ನಡೆಸಿ ನಕಲಿ ಆಧಾರಗಳಿಗೆ ಕಡಿವಾಣ ಹಾಕಬೇಕಾದ ಅನಿವರ‍್ಯತೆ ಇದೆ.
ಹೌದು ಓದುಗರೇ... ಮೂರು ರಾಜ್ಯಗಳ ನಡುವೆ ಸಂಪರ್ಕ ಜೋಡಣೆಯ ಕೊಂಡಿಯAತಾಗಿರುವ ಬೆಳಗಾವಿಯಲ್ಲಿ ದಿನ ನಿತ್ಯ ಅನೇಕ ರ‍್ಯಾಜ್ಯದ ಜನರು ತಮ್ಮ ವ್ಯಾಪಾರ ವಹಿವಾಟಕ್ಕೆ ಹಾಗೂ ಕೆಲ ಪದಾರ್ಥಗಳ ಖರೀದಿಗಾಗಿ ಬೆಳಗಾವಿಗೆ ಆಗಮಿಸುತ್ತಾರೆ. ಆದರೆ ರಾಜ್ಯದ ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಈಗ ಕೆಲ ಅಲೇಮಾರಿ ಸಣ್ಣಪುಟ್ಟ ವ್ಯಾಪಾರಸ್ಥರ ಬಳಿಯಲ್ಲಿ ನಕಲಿ ಆಧಾರ ಕಾರ್ಡುಗಳು ಪತ್ತೆಯಾಗಿದ್ದು, ಈ ಕುರಿತು ಸಾಮಾಜಿಕ ಅಂತರಜಾಲದಲ್ಲಿ ನಕಲಿ ಆಧಾರ್ ಪತ್ತೆಯಾಗಿರುವ ಚಿತ್ರಿಕರಣದ ದೃಶ್ಯ (ವಿಡಿಯೋ) ಒಂದು ವೈರಲ್ ಆಗುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಬೆಳಗಾವಿ ನಗರ ಸೇರಿದಂತೆ ತಾಲೂಕಿನ ಪ್ರದೇಶಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದು ನೆಲೆಸಿರುವ ಅಲೇಮಾರಿ ಚಿಕ್ಕಪುಟ್ಟ ವ್ಯಾಪಾರಿಗಳ ಕಡೆಗೆ ನಕಲಿ ಆಧಾರ್ ಕಾರ್ಡುಗಳು ಪತ್ತೆಯಾಗಿವೆ. ಈ ಕುರಿತು ಓರ್ವ ಅಲೇಮಾರಿ ಬಟ್ಟೆ ವ್ಯಾಪಾರಿಯನ್ನು ತಡೆದಿರುವ ವ್ಯಕ್ತಿಯೋರ್ವ ಆತನಿಂದ ನಕಲಿ ಆಧಾರ್ ಕಾರ್ಡನ್ನು ವಶಕ್ಕೆ ಪಡೆದು ಅದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ಮೂಲಕ ಈ ವ್ಯಾಪಾರಿಗಳ ಬಗ್ಗೆ ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎನ್ನುವ ಕುರಿತು ಚಿತ್ರಿಕರಣ ಮಾಡಿದ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಅಂತರಜಾಲದಲ್ಲಿ ವೈರಲ್ ಮಾಡಿದ್ದಾರೆ.
ತನಗೆ ಇಂತಹ ಹೊರರಾಜ್ಯದ ನಕಲಿ ವ್ಯಾಪಾರಿಗಳ ಕಡೆಗೆ ಇಲ್ಲಿಯವರೆಗೆ 4 ನಕಲಿ ಆಧಾರ್ ಕಾರ್ಡುಗಳು ದೊರೆತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎನ್ನುವ ಬಗ್ಗೆ ಆ ವಿಡಿಯೋದಲ್ಲಿ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಈ ನಕಲಿ ಆಧಾರ್ ಕಾರ್ಡುಗಳನ್ನು ಯಾರು ತಯಾರಿಸಿದ್ದಾರೆ. ವ್ಯಾಪಾರಿಗಳಿಗೆ ಯಾರು ನೀಡಿದ್ದಾರೆ ಎನ್ನುವ ಸತ್ಯಾಸತ್ಯತೆಯನ್ನು ಹೊರಗೇಳೆದು ಕ್ರಮಕೈಗೊಳ್ಳಬೇಕಾಗಿದೆ ಎನ್ನುವ ಒತ್ತಾಯ ಮಾಡಲಾಗಿದೆ. ಆದರೆ ಈ ಕುರಿತು ಜಿಲ್ಲಾಡಳಿತ ಯಾವ ಕ್ರಮಕೈಗೊಳ್ಳುತ್ತದೆ ಎನ್ನುವದನ್ನು ಇಲ್ಲಿ ಕಾದು ನೋಡಬೇಕಿದೆ.