ರೋಣ

ಗ್ರಾಮೀಣ ಭಾಗದ ಜನರಿಗೆ ಸೌಲಭ್ಯಗಳು ತಲುಪಬೇಕು: ಶಾಸಕ ಜಿ.ಎಸ್‌.ಪಾಟೀಲ

ಗ್ರಾಮೀಣ ಭಾಗದ ಜನರಿಗೆ ಸೌಲಭ್ಯಗಳು ತಲುಪಬೇಕು: ಶಾಸಕ ಜಿ.ಎಸ್‌.ಪಾಟೀಲ

ರೋಣ 27: ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ನೇರವಾಗಿ ಸೌಲಭ್ಯಗಳು ತಲುಪಬೇಕು. ಅಂಚೆ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಅಂಚೆ ಇಲಾಖೆಯು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್‌.ಪಾಟೀಲ ಹೇಳಿದರು.ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಭಾರತೀಯ ಅಂಚೆ ಇಲಾಖೆ, ಅಂಚೆ ಅಧೀಕ್ಷಕರ ಕಾರ್ಯಾಲಯ ವಿಭಾಗ ಗದಗ ಇವರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.   

ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಯದ ಪ್ರಾಚಾರ್ಯರು ಬಿ.ಎಸ್‌.ಮಾನೇದ ಮಾತನಾಡಿ  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಚೆ ಇಲಾಖೆಯು ಜನ ಸೇವೆ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಓದು ಮುಖ್ಯ ಅಲ್ಲ, ಸೃಜನಾತ್ಮಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಸೇವೆಗೆ ಅಂಚೆ ಇಲಾಖೆ ತೆಗೆಯಲಾಗಿದೆ.ರಾಜ್ಯದಲ್ಲಿ 1ಲಕ್ಷ 56 ಸಾವಿರ ಅಂಚೆ ಕಚೇರಿಗಳು ಸಾರ್ವಜನಿಕ ಸೇವೆ ಮಾಡುತ್ತಿವೆ ಎಂದು ಹೇಳಿದರು.    

ಇದೇ ಸಂದರ್ಭದಲ್ಲಿ ತಹಶಿಲ್ದಾರರ ವಾಣಿ ಉಂಕಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ, ಅಂಚೆ ಇಲಾಖೆ ಅಧೀಕ್ಷಕ ಎನ್‌.ಜಿ.ಭಂಗಿಗೌಡ್ರು, ರವೀಂದ್ರಗೌಡ ಪಾಟೀಲ, ಬಿ.ಎಸ್‌.ಮಾನೇದ, ಎಲ್‌.ಕೆ.ಜೂಲಕಟ್ಟಿ, ಆನಂದ ಸಾಗರ, ಚೇತನ ಹಾದಿಮನಿ, ಎಮ್‌.ಎ.ಫನಿಬಂದ, ಲಕ್ಷ್ಮಣ ಗಡಗಿ, ಯುಸೂಪ್ ಇಟಗಿ, ಶ್ರೀಕಾಂತ ಮಾಡಲಗೇರಿ ಸೇರಿದಂತೆ ಅಂಚೆ ಇಲಾಖೆ ಸಿಬ್ಬಂದಿಗಳು ಹಾಗೂ ಇತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ