ಖಾನಾಪೂರ ತಾಲೂಕಿನ ಹೊಡೆದಾಟ ಪ್ರಕಣ : 80 ಜನರ ಮೇಲೆ ಎಫ್.ಐಆರ್ ದಾಖಲು : ಗ್ರಾಮದಲ್ಲಿ ಬಿಗಿ ಪೊಲೀಸ ಬಂದೋಬಸ್ತ್
ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚಿಗುಳೆ ಗ್ರಾಮದಲ್ಲಿ ದೇವಸ್ಥಾನ ಆಸ್ತಿ ವಿಷಯವಾಗಿ ನಡೆದ ಎರಡು ಗುಂಪುಗಳಲ್ಲಿ ಹೊಡೆದಾಟಕ್ಕೆ ಸಂಬಂಧಿಸಿದಂತೆ 80 ಜನರ ವಿರುದ್ದ ದೂರು ದಾಖಲಾಗಿದ್ದು ಸದ್ಯ 8 ಜನರನ್ನು ವಶಕ್ಕೆ ಪಡೆಯಲಾಗಿದೆ.
ಖಾನಾಪೂರ ತಾಲೂಕಿನ ಚಿಗುಳೆ ಗ್ರಾಮದಲ್ಲಿ ನಡೆದ ಈ ಹೊಡೆದಾಟ ಹಿನ್ನೆಲೆಯಲ್ಲಿ ಗ್ರಾಮದ ಮಾವುಲಿ ದೇವಾಲಯದ ಬಳಿ ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಎರಡೂ ಗುಂಪಿನ ತಲಾ 40 ಸೇರಿದಂತೆ ಒಟ್ಟು 80 ಜನರ ಮೇಲೆ ದೂರು ದಾಖಲಾಗಿದೆ. ಅದರಲ್ಲಿ 8 ಜನರನ್ನು ಬಂಧಿಸಲಾಗಿದೆ. ಇನ್ನೂ 47 ಜನ ತಲೆಮರೆಸಿಕೊಂಡಿದ್ದಾರೆ. 25 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.