ಕೇದ್ರ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಗೆ 40ನೇ ದಿನ : ಮಾತುಕತೆಯತ್ತ ಎಲ್ಲರ ಚಿತ್ತ
ನವದೆಹಲಿ, ಜ 04 : ಕೇಂದ್ರ ಸರ್ಕಾರ ಜಾರಿಗೊಳಸಿರುವ ಕೃಷಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿಯ ಸಿಂಗು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ ಸರ್ಕಾರದ ಜತೆಗಿನ 8ನೇ ಸುತ್ತಿನ ಮಾತುಕತೆಯತ್ತ ಎಲ್ಲರ ಚಿತ್ತ ನೆಟ್ಟಿದೆ.ಕಳೆದ ಒಂದೆರಡು ದಿನಗಳಿಂದ ವಿಪರೀತ ಶೀತ ಮತ್ತು ಮಳೆಯಿದ್ದಾಗ್ಯೂ, ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ರೈತರು ಪ್ರತಿಪಾದಿಸಿದರು. ಏತನ್ಮಧ್ಯೆ, ವಿವಿಧ ವರ್ಗದ ಜನರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಿಂಗು ಗಡಿಯಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ರೈತರೊಂದಿಗೆ ವರ್ಷದ ಮೊದಲ ದಿನವನ್ನು ಗುರುತಿಸಲು ಹಲವಾರು ಜನರು ಬಂದಿದ್ದರೆ, ಅನೇಕ ಸಾಮಾಜಿಕ ಗುಂಪುಗಳು ರೈತರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೇವೆಗಳನ್ನು ವಿಸ್ತರಿಸುತ್ತಿವೆ. ಕೋಲಾಹಲ ತೀವ್ರಗೊಳ್ಳುವುದರೊಂದಿಗೆ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮತ್ತು ಇತರ ಭಾಗಗಳಿಂದ ಹೆಚ್ಚಿನ ರೈತರು ಸಿಂಗ್ ತಲುಪಿದ್ದಾರೆ.
ರಾಜಸ್ಥಾನದ ರೈತರು ದೆಹಲಿಗೆ ಸಮೀಪವಿರುವ ಹರಿಯಾಣ ಮತ್ತು ರಾಜಸ್ಥಾನ ಗಡಿಗಳನ್ನು ತಲುಪಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಆಂದೋಲನವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಮತ್ತು ಜನವರಿ 26 ರವರೆಗೆ ಯಾವುದೇ ಪರಿಹಾರವಿಲ್ಲದಿದ್ದರೆ, ರೈತರು ತಮ್ಮ ಟ್ರಾಕ್ಟರುಗಳೊಂದಿಗೆ ಗಣರಾಜ್ಯೋತ್ಸವದಂದು ರಾಜಧಾನಿಗೆ ಮೆರವಣಿಗೆ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ.