ಹಗರಿಬೊಮ್ಮನಹಳ್ಳಿ

ಮಾಜಿ ಶಾಸಕರ ಆಪ್ತರಿಂದ ಗಂಗಾ ಕಲ್ಯಾಣ, ಐಎಸ್ಬಿ ಸೌಲಭ್ಯಕ್ಕೆ ಹಣ ವಸೂಲಿ

ಮಾಜಿ ಶಾಸಕರ ಆಪ್ತರಿಂದ ಗಂಗಾ ಕಲ್ಯಾಣ, ಐಎಸ್ಬಿ ಸೌಲಭ್ಯಕ್ಕೆ ಹಣ ವಸೂಲಿ

ಶಾಸಕ ಎಸ್.ಭೀಮಾನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ಆರೋಪ

ಹಗರಿಬೊಮ್ಮನಹಳ್ಳಿ.ನ.01 : ಕ್ಷೇತ್ರದಲ್ಲಿ ದೀನ ದಲಿತರ ಬಡವರ ಪಾಲಿನ ಸರಕಾರದ ಗಂಗಾ ಕಲ್ಯಾಣ ಹಾಗೂ ಐಎಸ್ಬಿ ಸೌಲಭ್ಯ ನೀಡುವಂತೆ 50ಸಾವಿರ ಹಾಗೂ 1ಲಕ್ಷ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕ ಎಸ್.ಭಿಮಾನಾಯ್ಕ್ ಆರೋಪಿಸಿದರು.

ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕ್ಷೇತ್ರದಲ್ಲಿ ಕಳೆದ ಒಂಭತ್ತೂ ವರೆ ವರ್ಷಗಳಿಂದ ಅರ್ಹ ಫಲಾನುಭವಿಗಳಿಗೆ ಸರಕಾರ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ಬಿಜೆಪಿ ಪಕ್ಷದ ಇಲ್ಲಿನ ಮಾಜಿ ಶಾಸಕರ ಆಪ್ತರು ಗಂಗಾ ಕಲ್ಯಾಣಕ್ಕೆ 50ಸಾವಿರ ಹಾಗೂ ಈಎಸ್ಬಿ ಸೌಲಭ್ಯಕ್ಕೆ 1ಲಕ್ಷ ಹಣವನ್ನು ಪಡಯುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಅದನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುವುದರ ಜೊತೆ ಲೋಕಾಯುಕ್ತಕ್ಕೆ ಲಿಖಿತ ದೂರನ್ನು ನೀಡುವುದಾಗಿ ತಿಳಿಸಿದ್ದಾರೆ. 

ಈ ಬಗ್ಗೆ ಈಗಾಗಲೆ ಫಲಾನುಭವಿಗಳ ಪಟ್ಟಿಯು ಸಂಭಂಧಿಸಿದ ಇಲಾಖೆಯ ಸಚಿವರ ಕೈ ಮುಟ್ಟಿದೆ ಈ ಬಗ್ಗೆ ಫಲಾನುಭವಿಗಳ ಹೆಸರನ್ನು ನೀಡಲು ನಾನು ಸಿದ್ಧಬೇಕಿದ್ದರೆ ಕರೆ ಮಾಡಿ ಹಣ ನೀಡಿರುವುದರ ಬಗ್ಗೆ ವಿಚಾರಿಸಿಕೊಳ್ಳಿ ಎಂದು ಆರೋಪ ಮಾಡಿದ್ದಾರೆ. ಬಡವರಿಗೆ ಬರಬೇಕಾದ ವಿವಿಧ ಸೌಲಭ್ಯಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿರುವುದು ನಿಜಕ್ಕೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕೆಲವರು ಇಂತಹ ಕೆಲಸಕ್ಕೆ ಕೈಹಾಕಿದ್ದಾರೆ ಇದು ಕೋಟಿಗಟ್ಟಲೇ ಅವ್ಯವಹಾರವಾಗಿದೆ ಮಾಜಿ ಶಾಸಕರ ಆಪ್ತರಾಗಿದ್ದಾರೆ ಎಂದು ಪರೋಕ್ಷವಾಗಿ ಹೆಸರು ಹೇಳದೇ ಆರೋಪಿಸಿದರು.

 

ಸುದ್ದಿ ಓದಿ