ಶಿಗ್ಗಾವ್

ಎಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿರಿ : ಡಾ.ಲಕ್ಷ್ಮಣ ನಾಯ್ಕ

ಎಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿರಿ : ಡಾ.ಲಕ್ಷ್ಮಣ ನಾಯ್ಕ

ಶಿಗ್ಗಾವಿ,23 : ರಕ್ತ ಎಲ್ಲಿಯೂ ಉತ್ಪಾದನೆ ಆಗುವುದಿಲ್ಲ ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಡಾ.ಲಕ್ಷ್ಮಣ ನಾಯ್ಕ ಹೇಳಿದರು.  

ಪಟ್ಟಣದ ಡಾ.ಅಂಬೇಡ್ಕರ ಸಂಕೀರ್ಣಗಳ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಭಂದಕ ಮತ್ತು ನಿಯಂತ್ರಣ ಘಟಕ ಹಾವೇರಿ, ಜಿಲ್ಲಾ ರಕ್ತನಿಧಿ ಕೇಂದ್ರ, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ ಮತ್ತು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮೊದಲಿಗೇ ರಕ್ತದ ತೊಂದರೆ ತಾಲೂಕಿನಲ್ಲಿ ಇತ್ತು ಇವಾಗ ಆ ತೊಂದರೆಯನ್ನು ನಾವು ಅನುಭವಸುತ್ತಿಲ್ಲ ಅದಕ್ಕೆ ಎಲ್ಲರ ಶ್ರಮ ಮುಖ್ಯಕಾರಣ ಎಂದರು.  

ರಕ್ತನಿಧಿ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಮಾತನಾಡಿ ನಾವು ಎನು ಗಳಿಸಿದ್ದೇವೆ ಅದರಲ್ಲಿ ಸ್ವಲ್ಪ ಸಮಾಜಸೇವೆ ಮಾಡಿ ಅಂದರೆ ನೀವು ಸ್ವಯಂಪ್ರೇರಿತವಾಗಿ ವರ್ಷಕ್ಕೊಮ್ಮೆ ಭಾರಿಯಾದರೂ ರಕ್ತದಾನ ಮಾಡಬೇಕು. ರಕ್ತದಾನ ಮಾಡಲು ಮುಂದೇ ಇರಬೇಕು, ಯಾವುದೇ ಹಾನಿ ಇರುವುದಿಲ್ಲ, ಕೊಲೆಸ್ಟರಾಲ್ ಎಂಬ ವಿಷ ಹೊರಗೆ ಹೋಗುತ್ತದೆ, ರಕ್ತ ತಪಾಸಣೆಯ ಜೊತೆಗೆ ಉಚಿತವಾಗಿ ಕೆಲವು ರಕ್ತ ಪರೀಕ್ಷೆಗಳು ಮಾಡುತ್ತೇವೆ ಹಾಗೂ ಯಾರು ರಕ್ತದಾನ ಮಾಡುವುದಿಲ್ಲ ಅವರಿಗೆ ಪಾಲಿಸಿಟಿಮಿಯಾ ಕಾಯಿಲೆಗೆ ಒಳಗಾಗುತ್ತಿದ್ದಾರೆ ಮತ್ತು ಎಲ್ಲ ಇಲಾಖೆಗಳ ಸಂಯೋಗದೊಂದಿಗೆ ರಕ್ತ ಸಂಗ್ರಹಣೆ ಮಾಡಿ ಎಂದು ಕಿವಿ ಮಾತು ಹೇಳಿದರು. 

ಕಾರ್ಯಕ್ರಮಾಧಿಕಾರಿ ಡಾ.ಸರೀತಾ ಮಾತನಾಡಿ ಹೆಚ್ಚು ಹೆಚ್ಚು ಭಾರಿ ರಕ್ತದಾನ ಮಾಡಿ ಎಲ್ಲರ ಜೀವವನ್ನು ಉಳಿಸಿ ಇತರರಿಗೆ ಮಾದರಿಯಾಗಿ ಎಂದರು.   

ಅಧ್ಯಕ್ಷತೆವಹಿಸಿ ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ ಮಾತನಾಡಿ  ನಿಮ್ಮೇಲ್ಲರ ಸಹಕಾರದಿಂದ ಅಕ್ಟೋಬರ 1 ರಂದು ನಡೆಯುವ ಅಂತರ ರಾಷ್ಟ್ರೀಯ ರಕ್ತದಾನಿಗಳ ದಿನಾಚರಣೆ ದಿನ ಎಲ್ಲರೂ ಒಗ್ಗಟಾಗಿ ಸುಮಾರು 200-300 ಸಿಬ್ಬಂದಿಗಳು ರಕ್ತದಾನ ಮಾಡಲು ಸಂಕಲ್ಪ ಮಾಡೋಣ ಎಂದರು.  

ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಜಾಥಾ ಕಾರ್ಯಕ್ರಮಕ್ಕೆ ಆಡಳಿತ ವೈದ್ಯಾಧಿಕಾರಿ ಡಾ .ಲಕ್ಮಣ ನಾಯ್ಕ ಹಾಗೂ ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ ಎ.ಆರ್ ಚಾಲನೆ ನೀಡಿದರು. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಶರಣಪ್ಪ ಬಿಂದಲಗಿ, ಅಶೋಕ ಓಲೇಕಾರ, ಡಾ.ಮನೋಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.   ಈ ಸಂದರ್ಭದಲ್ಲಿ ಡಾ.ಮನೋಜ ನಾಯ್ಕ, ಡಾ.ನಾಗೇಶ ಗುಂಗಿ, ಜಿಲ್ಲಾ ಮೇಲ್ವಿಚಾರಕ ಸತೀಶ ಹೊಸಮನಿ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಪ್ರಕಾಶ ಕಿತ್ತೂರ, ಬಸವರಾಜ ಕಮತರ,ಸೌಭಾಗ್ಯ ದೊಡ್ಡಮನಿ, ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ, ಗುರು ಹಾಗಲೂರ, ಮಂಜುನಾಥ ಹಟ್ಟಿ, ರೇಣುಕಾ ಹೊಸಮನಿ, ವಿಜಯ ವಾಯ.ಬಿ, ಶಮ್ಸ ತಬರೀಜ, ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ವೆಂಕಮ್ಮ ಬಂಡಿವಡ್ಡರ ಪ್ರಾರ್ಥಿಸಿದರು. ವಿರಾಜ ಸುಣಗಾರ ಕಾರ್ಯಕ್ರಮ ನಿರ್ವಹಿಸಿದರು, ಸುಧಾಕರ ದೈವಜ್ಞ ವಂದಿಸಿದರು. 


ಸುದ್ದಿ ಓದಿ