ಪ್ರತಿಯೊಬ್ಬರು ಆರೋಗ್ಯದಾಯಕ ಜೀವನ ನಡೆಸಬೇಕು : ದಿವಾಣಿ ನ್ಯಾಯಾಧೀಶ
Everyone should lead a healthy life: Civil Judge
ರಾಯಬಾಗ 16: ನಮಗೆ ರೋಗ ಬರುವ ಮುಂಚಿತ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ರೋಗ ಬರದಂತೆ ನೋಡಿಕೊಂಡು ಆರೋಗ್ಯದಾಯಕ ಜೀವನ ನಡೆಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.ಗುರುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಾಖೆ ರಾಯಬಾಗ ಮತ್ತು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜನರ ಜೀವ ಉಳಿಸುವ ವೈದ್ಯರ ಸೇವೆ ಸಮಾಜದಲ್ಲಿ ಅತ್ಯಂತ ಶ್ರೇಷ್ಠವಾಗಿದೆ.
ಪ್ರತಿಯೊಬ್ಬರು ಪ್ರತಿ ವರ್ಷ ನಮ್ಮ ದೇಹದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.ಬಿಮ್ಸ್ ವೈದ್ಯ ಡಾ.ಎ.ಎಸ್.ನಾಗಲಿಕರ ಮಾತನಾಡಿ, ಬಿಮ್ಸ್ ವತಿಯಿಂದ ಪ್ರಥಮ ಬಾರಿಗೆ ನ್ಯಾಯಾಲಯದ ಆವರಣದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವ ನಮಗೆ ಹೆಮ್ಮೆಯಾಗಿದೆ. ಆರೋಗ್ಯವಂತ ಶರೀರ ಹೊಂದಲು ಮನೆಯ ಊಟ ಮಾಡುವುದು ಉತ್ತಮ. ಮನುಷ್ಯ ಸತ್ತ ನಂತರ ಆಸ್ಪತ್ರೆಗೆ ದೇಹ ದಾನ ಮಾಡಿದರೆ, ಅನೇಕ ಅಂಗಾಂಗ ವೈಕಲ್ಯ ಇರುವ ಜೀವಗಳನ್ನು ಉಳಿಸಬಹದು. ಪ್ರತಿಯೊಬ್ಬರು ಈ ಶಿಬಿರದ ಪ್ರಯೋಜನ ಪಡೆದು ಆರೋಗ್ಯದಾಯಕ ಜೀವನ ನಡೆಸಬೇಕೆಂದರು.
ಅಧ್ಯಕ್ಷತೆಯನ್ನು ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರೀಯಾ ಭಟ್ಟಡ ವಹಿಸಿದ್ದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ದಾನಪ್ಪ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಉಮೇಶ ಪೋಳ, ಸಿಪಿಐ ಎಮ್.ಎಮ್.ಡಪ್ಪಿನ, ಬೆಳಗಾವಿ ಬಿಮ್ಸ್ ನಾಮ ನಿರ್ದೇಶನ ಸದಸ್ಯ ಆರ್.ಎಸ್.ಶಿರಗಾಂವೆ, ವೈದ್ಯರಾದ ಡಾ.ಸಿ.ಬಿ.ಪಾಟೀಲ, ಡಾ.ರವಿ ಅಜೂರ, ಡಾ.ಸುಕುಮಾರ ನಾವ್ಹಿ, ಡಾ.ಪ್ರಶಾಂತ, ತಾ.ಪಂ.ಇಒ ಅರುಣ ಮಾಚಕನೂರ, ಬಿ.ಸಿ.ಎಮ್ ಅಧಿಕಾರಿ ಕಲ್ಪನಾ ಕಾಂಬಳೆ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಲ್.ಕೆರೂರೆ, ಕಾರ್ಯದರ್ಶಿ ಆರ್.ಎಸ್.ಹಳಪ್ಪಗೋಳ, ಸಹ ಕಾರ್ಯದರ್ಶಿ ಎಮ್.ಬಿ.ಬಂತೆ, ಖಜಾಂಚಿ ಸವಿತಾ ಸಂಗೋಟೆ, ವಿನೋದ ಚವ್ಹಾನ, ಮಲ್ಲಿಕ ಕೊರಬು, ಬಿಮ್ಸ್ ವೈದ್ಯರು, ವಕೀಲರು, ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 