ರೋಣ

ನೂಲಿಯ ಚಂದಯ್ಯರವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿ: ಮಿಥುನ ಪಾಟೀಲ

ನೂಲಿಯ ಚಂದಯ್ಯರವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿ: ಮಿಥುನ ಪಾಟೀಲ

ರೋಣ14:  ನೂಲಿಯ ಚಂದಯ್ಯ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕೆಲಸದ ಮೇಲೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು. ಪಟ್ಟಣದಲ್ಲಿ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಶರಣ ನೂಲಿಯ ಚಂದಯ್ಯ ಕ್ಷೇಮಾಭಿವೃದ್ಧಿ ಸಂಘ ಹಾಗೂ  ಭಜೇಂತ್ರಿ  ಸಮಾಜ ವತಿಯಿಂದ ಕಾಯಕ ಯೋಗಿ ಶ್ರೀ ನೂಲಿಯ ಚಂದಯ್ಯ ಅವರ 916 ನೇ ಜಯಂತ್ಯೋತ್ಸವ ಅಂಗವಾಗಿ ಶಾಸಕ ಜಿ.ಎಸ್‌.ಪಾಟೀಲ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ  ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುರ ಜೊತೆಗೆ ಒಳ್ಳೆಯ ಸಂಸ್ಕಾರದಲ್ಲಿ ಬೆಳಸಬೇಕು ಎಂದರು.       

ನೂಲಿಯ ಚಂದಯ್ಯ ಅವರ ಭಾವಚಿತ್ರವನ್ನು ಡೊಳ್ಳು ಕುಣಿತ ವಾದ್ಯ ಮೇಳೆಗಳೊಂದಿಗೆ ಪಟ್ಟಣದ ಸಿದ್ಧಾರೂಡ ಮಠದಿಂದ ಅಕ್ಕಮಹಾದೇವಿ ಕಲ್ಯಾಣ ಮಂಟಪದ ವರೆಗೂ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ಹಾಗೂ ಋಷಭೇಂದ್ರ ನೂಲಿಯ ಚಂದೇಶ್ವರ ಸ್ವಾಮಿಗಳು ವಹಿಸಿದ್ದರು. ಡಾ.ವಾಯ್‌.ಎಮ್‌. ಭಜೇಂತ್ರಿ,ರಂಗವ್ವ ಭಜೇಂತ್ರಿ,ಬಾಳಪ್ಪ ಭಜೇಂತ್ರಿ,ಪಾಂಡುರಂಗ ಮಾನಪಡೆ, ಸರೋಜಿನಿ ಹೊಸಕೇರಿ,ಕ್ರೇಜಿ ಯಶೋದಕೃಷ್ಣ ಶಿವಾನಂದ ರೋಣದ,ಹನಮಂಮತಪ್ಪ ಭಜೇಂತ್ರಿ, ಪರಶುರಾಮ ಭಜೇಂತ್ರಿ,ಬಸಮ್ಮ ಭಜೇಂತ್ರಿ, ತಿಪ್ಪಣ್ಣ ಭಜೇಂತ್ರಿ, ಬಾಬು ಭಜೇಂತ್ರಿ,ಪಾಂಡುರಂಗ ಭಜೇಂತ್ರಿ, ರಾಮು ಭಜೇಂತ್ರಿ, ಭೀಮಪ್ಪ ಭಜೇಂತ್ರಿ, ಲಕ್ಮ್ಮಣ ಭಜೇಂತ್ರಿ  ಸೇರಿದಂತೆ ಸಮಾಜ ಮುಖಂಡರು ಹಾಗೂ ಗುರು-ಹಿರಿಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ