ಸಿಂಧಗಿ

ಪ್ರತಿಯೊಬ್ಬರು ಕೋವಿಡ್ ನಿಯಮವನ್ನು ಪಾಲಿಸಿ

ಪ್ರತಿಯೊಬ್ಬರು ಕೋವಿಡ್ ನಿಯಮವನ್ನು ಪಾಲಿಸಿ
ಪಟ್ಟಣದ ಪ್ರೇರಣಾ ಪಭ್ಲಿಕ್ ಆಂಗ್ಲ ಮಾಧ್ಯಮ ಸ್ಕೂಲ್‌ನಲ್ಲಿ 15 ರಿಂದ 18ನೇ ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯ

ಕ್ಷೇತ್ರಶಿಕ್ಷಣಾಧಿಕಾರಿ ಎಚ್‌.ಎಂ. ಹರನಾಳ ಸೂಚನೆ: ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ  

ಸಿಂದಗಿ 07: ಕೊರೊನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಚ್‌.ಎಂ. ಹರನಾಳ ಹೇಳಿದರು. 

ಪಟ್ಟಣದ ಪ್ರೇರಣಾ ಪಭ್ಲಿಕ್ ಆಂಗ್ಲ ಮಾಧ್ಯಮ ಸ್ಕೂಲ್‌ನಲ್ಲಿ ಜಿಲ್ಲಾ ಪಂಚಾಯತ ವಿಜಯಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾ ಆಡಳಿತ, ತಾಲೂಕು ಪಂಚಾಯತಿ, ತಾಲೂಕಾ ಆರೋಗ್ಯ ಇಲಾಖೆ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ 15 ರಿಂದ 18ನೇ ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಈ ಮೊದಲು ಲಸಿಕೆ ಹಾಕಿಸಿಕೊಳ್ಳು ಆಸ್ಪತ್ರೆಗೆ ಹೋಗಬೇಕಾಗಿತ್ತು. ಲಸಿಕೆ ಕಡಿಮೆ ಬಿದ್ದು ಎಷ್ಟೋ ಜನ ನಿರಾಶೆಹೊಂದಿ ಮರುಳಿ ಹೋಗುತ್ತಿದ್ದರು. ಮುಂದಿನ ವಾರಸುದಾರರು ಮಕ್ಕಳು. ನಿಮ್ಮಲ್ಲಿಗೆ ಬಂದು ಲಸಿಕೆ ಹಾಕುತ್ತಿರುವುದು ಆರೋಗ್ಯ ಇಲಾಖೆಯ ಕಾರ್ಯ ಶ್ಲಾಘನೀಯ. ಲಸಿಕೆ ತೆಗೆದುಕೊಳ್ಳುವದರಿಂದ ಯಾವುದೇ ಅಪಾಯಕಾರಿಯಲ್ಲ. ಎಲ್ಲರೂ ಆರೋಗ್ಯವಂತರಾಗಿರಬೇಕು. ಶುದ್ಧ ಆಹಾರ ಸೇವನೆ ಮಾಡಬೇಕು. ವ್ಯಾಯಾಮ ಮಾಡಬೇಕು. ಒಳ್ಳೆ ಸಾಧಕರಾಗಬೇಕು. ನೀವು ಲಸಿಕೆ ಹಾಕಿಕೊಳ್ಳುವ ಜೊತೆಗೆ ಇತರರಿಗೂ ಲಸಿಕೆ ಹಾಕಿಸಿಕೊಳ್ಳಲು ಪ್ರೆರಣೆಮಾಡಬೇಕು ಎಂದು ಹೇಳಿದರು. 

ಆಯುಷ ವೈದ್ಯಾಧಿಕಾರಿ ಡಾ.ಮಹಾಂತೇಶ ಹಿರೇಮಠ ಮಾತನಾಡಿ, ಕೋವಿಡ್ ಮೊದಲ ಹಂತದ ಸಂದರ್ಭದಲ್ಲಿ ಮೊದಲಿಗೆ ಪ್ರಂಟ್ ವಾರಿಯರ​‍್ಸ‌ಗೆ ನಂತರ ಹಿರಿಯ ನಾಗರಿಕರಿಗೆ, 18 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಲಸಿಕೆ ನೀಡಲಾಗಿತ್ತು. ಈಗ ಮೂರನೆ ಅಲೆ ಆರಂಭವಾಗಿದೆ. ಪ್ರತಿ ಮನುಷ್ಯನಲ್ಲಿ ಹ್ಯೂಮಿನಿಟಿ ಪಾವರ ಇರುತ್ತದೆ. ಆರೋಗ್ಯಕರ ಆಹಾರ, ವ್ಯಾಯಾಮ ಮಾಡಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ನಿತ್ಯ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ನಿನ್ನೆ ಕೋವಿಡ್, ಈಗ ಒಮೊಕ್ರೊನ್, ನಾಳೆ ಮತ್ತೊಂದು. ಹಿಗೆ ವೈರಾಣುಗಳು ಬರುತ್ತವೆ. ಅವುಗಳನ್ನು ತಡೆದುಕೊಳ್ಳುವ ಸಾಮರ್ಥ ಬೆಳೆಸೊಕೊಳ್ಳಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯವಂತರಾಗಬೇಕು. ಮೊದಲು ಆರೋಗ್ಯವಂತರಾಗಬೇಕು. ಸುಸಂಸ್ಕೃತ ರಾಗಬೇಕು. ಲಸಿಕೆ ಹಾಕಿಕೊಳ್ಳುವದರಿಂದ ಯಾವುದೆ ತೊಂದರೆ ಆಗುವುದಿಲ್ಲ. ಸರ್ಕಾರದ ಯೋಜನೆಯನ್ನು ಯಶಸ್ವಿ ಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. 

ಸಂಸ್ಥೆಯ ಅಧ್ಯಕ್ಷ ಆರ್‌.ಡಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಪಿ ಎಸ್‌.ಕೆ. ಗುಗ್ಗರಿ, ಮುಖ್ಯೋಗುರುಮಾತೆ  ಸಾವಿತ್ರಿ ಅಸ್ಕಿ, ತಾಲೂಕಾ ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ. ಕುಲಕರ್ಣಿ ವೇದಿಕೆ ಮೇಲೆ ಇದ್ದರು. 

ಯರಗಲ್ ಬಿ.ಕೆ. : ತಾಲೂಕಿನ ಯರಗಲ್ ಬಿ.ಕೆ. ಗ್ರಾಮದಲ್ಲಿನ ಸಿದ್ಧಶಂಕರಾನಂದ ಸ್ವಾಮೀಜಿ ಪ್ರೌಢಶಾಲೆಯಲ್ಲಿ 15 ರಿಂದ 18ನೇ ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯೋಧ್ಯಾಪಕ ಎ.ಕೆ. ನಾಯ್ಕೋಡಿ ಮಾತನಾಡಿ, ದೇಶದಲ್ಲಿ ಮೂರನೇ ಅಲೆಯ ಭೀತಿ ಇನ್ನೂ ಶಮನವಾಗಿಲ್ಲ. ಮೂರನೇ ಅಲೆಯಲ್ಲಿ ಕೊರೊನಾ ವೈರಸ್ ಮಕ್ಕಳಿಗೆ ಹೆಚ್ಚು ಅಪಾಯ ತಂದೊಡ್ಡಲಿದೆ ಎಂದು ಅನೇಕ ತಜ್ಞರು ಹೇಳಿದ್ದಾರೆ. ಹೀಗಾಗಿ ಮಕ್ಕಳನ್ನು ರಕ್ಷಿಸಲು ಅವರಿಗೆ ಲಸಿಕೆ ನೀಡುವುದು ತುರ್ತು ಅಗತ್ಯ. ಕೋವಿಡ್ ಲಸಿಕೆಯನ್ನು 15-18 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ. ಈ ಲಸಿಕೆಯು ಎಲ್ಲ ಅರ್ಹ ವಿದ್ಯಾರ್ಥಿಗಳು ಹಾಕಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು. 

ಸಿಆರ್‌ಪಿ ಶಾಂತು ಕರಾಬಿ, ಮಾತನಾಡಿ, ವಿದ್ಯಾರ್ಥಿಗಳು ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಆರೋಗ್ಯ ಕಾರ್ಯಕರ್ತೆ ಬಿ.ಎಸ್‌. ಬಿರಾದಾರ, ಆಶಾ ಕಾರ್ಯಕರ್ತೆ ಎ.ಎ. ಕೋಣಶಿರಸಗಿ, ಜಿ.ಎನ್‌. ಬಿರಾದಾರ, ಎಸ್‌.ಸಿ. ಕುದರಗೊಂಡ, ಶಿಕ್ಷಕರಾದ ಜಿ.ಎನ್‌. ಬಿರಾದಾರ, ಎಸ್‌.ಕೆ. ಚವ್ಹಾಣ, ಆರ್‌.ಬಿ. ಬಿರಾದಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಲಕಣ್ಣ ಪರಗೊಂಡ, ಶರೀನಾ ನದಾಫ್ ಹಾಗೂ ವಿದ್ಯಾರ್ಥಿಗಳು ಇದ್ದರು.  

ಸುದ್ದಿ ಓದಿ