ಸೌಂದತ್ತಿ

ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು: ವ್ಹಿ ಎಸ್ ಹಿರೇಮಠ

ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು: ವ್ಹಿ ಎಸ್ ಹಿರೇಮಠ

ಉಗರಗೋಳ 24: ನಾವು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕಾದರೆ, ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ವ್ಹಿ ಎಸ್ ಹಿರೇಮಠ ಹೇಳಿದರು. 

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶ್ರೀ ರೇಣುಕಾ(ಯಲ್ಲಮ್ಮ)ದೇವಿ ಪ್ರೌಢ ಶಾಲೆ ಮೈದಾನದಲ್ಲಿ ಶ್ರೀ ರೇ, ಅ, ಹಳಮನಿ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆ ಉಗರಗೋಳ(1989 ರ 7ನೇ ತರಗತಿ)ಮತ್ತು ಶ್ರೀ ರೇಣುಕಾ(ಯಲ್ಲಮ್ಮ)ದೇವಿ ಪ್ರೌಢ ಶಾಲೆ ಉಗರಗೋಳ(1992 ರ ಎಸ್‌ಎಸ್‌ಎಲ್‌ಸಿ)ವಿದ್ಯಾರ್ಥಿಗಳಿಂದ “ಗುರುವಂದನಾ ಹಾಗೂ ಸ್ನೇಹ ಸಂಗಮ-2023 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಕ ಗಳಿಕೆಗೆ ಮಾತ್ರವಲ್ಲ; ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಿ ಓದಬೇಕು ಎಂದು ಕರೆ ನೀಡಿದರು. 

ನಿವೃತ್ತ ಮುಖ್ಯೋಪಾಧ್ಯಾಯ ವಾಯ್ ಆರ್ ಚನ್ನಪ್ಪಗೌಡ್ರ ಮಾತನಾಡಿ ಶಿಕ್ಷಣದಿಂದ ಎಷ್ಟೋ ಬಡ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳು ನಮ್ಮ ಮುಂದಿವೆ.  ಹಾಗಾಗಿ ಯಾರೊಬ್ಬರೂ ಶಿಕ್ಷಣದಿಂದ ವಂಚಿತವಾಗಬಾರದು.  ಬಡತನದ ಮಧ್ಯೆಯೂ ಕಲಿತು ಉನ್ನತ ಹುದ್ದೆಗೇರಿದ ನಂತರ ತಾವು ಕಲಿತ ಶಾಲೆ ಸುಧಾರಣೆಗೆ ಕೈಜೋಡಿಸಬೇಕು ಎಂದರು. 

ಸಾನಿಧ್ಯ ಉಗರಗೋಳ ರಾಮಾರೂಢ ಮಠದ ಬ್ರಹ್ಮಾರೂಢ ಶ್ರೀಗಳು, ಉಗರಗೋಳ ನಿರ್ವಾಣೇಶ್ವರ ಮಠದ ಗುರುಮಹಾಂತ ಶ್ರೀಗಳು ವಹಿಸಿಕೊಳ್ಳವರು. ಕುಮಾರಿ ಆರ್ ಪಿ ಪವಾರ, ಶಿಕ್ಷಕರುಗಳಾದ ಜಿ ಬಿ ಅಂಬಿಗೇರ, ಎಮ್ ಆರ್ ಪಾಟೀಲ, ಎನ್ ಎಸ್ ಚಿನಗುಡಿ, ವ್ಹಿ ಎಸ್ ಪಾಟೀಲ, ಶ್ರೀಮತಿ ಎನ್ ಸಿ ತೇಗೂರ, ಶ್ರೀಮತಿ ಜಿ ಎಮ್ ಸುಂಬಳಿ, ವಿ ಎಲ್ ಸಂಗೊಳ್ಳಿ, ಸಿ ಜಿ ಶೀಗಿಹಳ್ಳಿ, ಜಿ ಜಿ ಹಿರೇಗೌಡ್ರ ಹಾಗೂ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಶಾಲಾ ವಿಧ್ಯಾರ್ಥಿ-ವಿದ್ಯಾರ್ಥಿನಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ