ರೋಣ

ಕ್ರೀಡೆಯಿಂದ ಪ್ರತಿಯೊಬ್ಬರು ದೈಹಿಕವಾಗಿ ಸಧೃಡವಾಗಿರಬಹುದು: ತಳವಾರ

ಕ್ರೀಡೆಯಿಂದ ಪ್ರತಿಯೊಬ್ಬರು ದೈಹಿಕವಾಗಿ ಸಧೃಡವಾಗಿರಬಹುದು: ತಳವಾರ

ಲೋಕದರ್ಶನ ವರದಿ 

ರೋಣ 25:  ತಾಲೂಕಿನ ಗ್ರಾಮ ಪಂಚಾಯತ ಕಾರ್ಯಾಲಯ ಹುನಗುಂಡಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುನಗುಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಬಸವಂತಪ್ಪ ಎಚ್ ತಳವಾರ ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯು ದೈಹಿಕ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಅಧಿಕ ಆಸಕ್ತಿ ಬೆಳೆಸಿಕೊಂಡು ಮುನ್ನಡೆಯಬೇಕಿದೆ ಎಂದರು.          

ಕ್ರೀಡೆಯಿಂದ ಪ್ರತಿಯೊಬ್ಬರು ದೈಹಿಕವಾಗಿ ಸಧೃಡವಾಗಿರಬಹುದು ಕ್ರೀಡೆಗಳು ಕ್ರೀಡಾ ಉತ್ಸವದ ಮೂಲಕ ಸ್ನೇಹಮಯ ವಾತಾವರಣ ನಿರ್ಮಿಸಿತ್ತದೆ. ಆಧುನಿಕ ಜೀವನ ಶೈಲಿಯಲ್ಲಿ ಕ್ರೀಡೆಗಳಿಗೆ ತುಂಬಾ ಮಹತ್ವವಿದೆ.ಕ್ರೀಡೆಗಳಲ್ಲಿ  ಪಾಲ್ಗೊಂಡು ದೈಹಿಕ ಸಧೃಡತೆ ಕಾಪಾಡಿಕೊಳ್ಳಬೇಕು ಕ್ರೀಡೆಯಿಲ್ಲದ ಜೀವನ ಕೀಟತಿಂದ ಹಣ್ಣಿನಂತಾಗಲಿದೆ ಈ ಕ್ರೀಡೆಯಲ್ಲಿ ಸೊಲು-ಗೆಲುವು ಇರುವುದು ಸಹಜ ಎಲ್ಲರು ಸಂತೋಷದಿಂದ ಹೋಗಬೇಕು.         

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಎಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.ಈ ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ನೇತ್ರಾ ಹ ಕಡಿಯವರ ಜ್ಯೋತಿಯನ್ನು ಬೆಳಗಿಸಿದರು. ಅಮರ​‍್ಪಗೌಡ ಸ ಗೌಡರ ಎಸ್,ಡಿ,ಎಮ್,ಸಿ ಅಧ್ಯಕ್ಷರು ಮುಖ್ಯ ಅಥಿತಿಗಳಾಗಿ ಲಲಿತಾ ದೇ ಕೊರಣ್ಣವರ ಗ್ರಾ.ಪಂ ಉಪಾಧ್ಯಕ್ಷರು  ಜಿ.ಎಸ್‌.ಮಂಡಸೊಪ್ಪಿ ಗ್ರಾ,ಪಂ,ಸದಸ್ಯರು ಆರಿ​‍್ಬ, ಗೂಳಪ್ಪನವರ ಗ್ರಾ,ಪಂ,ಸದಸ್ಯರು, ಬಸವಪ್ರಭು ವಸ್ತ್ರದ, ಮಲ್ಲಿಕಾರ್ಜುನ ಮಲ್ಲನಗೌಡ್ರ ಪಿ.ಡಿ.ಓ. ಕೆ,ಬಿ,ಇರಸಣ್ಣವರ, ಎಮ್,ಹೆಚ್,ಜಂತ್ಲಿ, ಪ್ರಧಾನ ಗುರುಗಳಾದ ಎಮ್‌.ವಾಯ್,ಜಕ್ಕರಸಾನಿ ಎಲ್,ಡಿ, ರಂಗಸ್ವಾಮಿ,ಎನ್‌.ಪಿ.ಅಂಗಡಿ, ಎಲ್,ಎಸ್,ಪಾಟೀಲ, ಹೆಚ್‌.ಎಲ್‌. ರಂಗನಗೌಡ್ರ. ಮಂಜು ಹೂಗಾರ,ಎಮ್,ಎಸ್, ಮಡಿವಾಳರ ಹಾಗೂ ಹೂಗಾರ ಗುರುಗಳು ಎಸ್,ಐ,ಕುರುಡಗಿಮಠ ಶೋಧಾ ಚಿನ್ನಿ, ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಸುಮಂಗಲಾ ವಸ್ತ್ರದ, ನಿರ್ಮಲಾ ಕೊಡತಗೆರಿ ಹಾಗೂ ಗ್ರಾ,ಪಂ,ಸಿಬ್ಬಂದ್ದಿ ವರ್ಗದವರು ಪ್ರಾಥಮಿಕಶಾಲೆಯ ಶಿಕ್ಷಕ/ಶಿಕ್ಷಕಿಯರು, ದೈಹಿಕ ಶಿಕ್ಷಕರು ಬಿ,ಎ, ಮುಕಾಶಿಮಠ, ಜೆ,ಎಸ್,ಪಾಟೀಲ,ಎಸ್,ಎನ್,ಭರಮಗೌಡ್ರ ಸೇರಿದಂತೆ ಮುಂತಾದವರು ಸಭೆಯಲ್ಲಿದ್ದರು.ವಂದನಾರೆ​‍್ಣ ಎನ್‌.ಪಿ.ಅಂಗಡಿ ನೆರವೆರಿಸಿದರು. 


ಸುದ್ದಿ ಓದಿ