ಬಳ್ಳಾರಿ

ಬಳ್ಳಾರಿ ಮೇಯರ್ ಸ್ಥಾನಕ್ಕೆ ಎಲ್ಲರ ಅಭಿಪ್ರಾಯ ಮುಖ್ಯವಾಗಿದೆ: ಎಚ್ ಎಮ್ ರೇವಣ್ಣ

ಬಳ್ಳಾರಿ ಮೇಯರ್ ಸ್ಥಾನಕ್ಕೆ ಎಲ್ಲರ ಅಭಿಪ್ರಾಯ ಮುಖ್ಯವಾಗಿದೆ: ಎಚ್ ಎಮ್ ರೇವಣ್ಣ

ಬಳ್ಳಾರಿ 15: ತಿಂಗಳು ದಿನಾಂಕ 19ಕ್ಕೆ  ನಡೆಯಲಿರುವ ಮಹಾನಗರ, ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ. ಅದಕ್ಕಾಗಿ ಸದಸ್ಯರಿಗೆ ವಿಪ್ ಜಾರಿಮಾಡಲಿದೆಂದು ಹಾಗೂ  ನಮ್ಮ ಪಕ್ಷದ ಆಕಾಂಕ್ಷಿಗಳಾಗಿ ಪಕ್ಷದ ಇಬ್ಬರು ಮತ್ತೊಬ್ಬರು ಸಹ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆಗೆ ಇಂದಿನ ಸಭೆಗೆ ಬಂದ 18 ಜನರು ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರ ಎಂದಿದ್ದಾರೆ.ನಗರದ ಅನಂತಪುರ ರಸ್ತೆಯ ಸರ್ಕಾರದ ಅತಿಥಿಗೃಹದಲ್ಲಿ ಎಚ್ ಎಂ ರೇವಣ್ಣ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.  

ಚುನಾವಣೆ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಚಿವ ಎಚ್ ಎಮ್ ರೇವಣ್ಣ ರವರು ಮಾತನಾಡುತ್ತಾ,  ಡಿ.18 ಕ್ಕೆ ಮತ್ತೊಂದು ಸಭೆ ಮಾಡಲಿದ್ದೇವೆ, ಅಂದು ಪಕ್ಷದ ಅಭ್ಯರ್ಥಿ ಯಾರೆಂದು ನಿರ್ಧರಿಸಿ ವಿಪ್ ಜಾರಿ ಮಾಡಲಿದೆ. ಎಲ್ಲರ ಅಭಿಪ್ರಾಯವನ್ನು ಇಂದು ಪಡೆದಿದ್ದೇವೆ. ನಾಳೆ ವರಿಷ್ಠರಿಗೆ ವರದಿ ನೀಡಲಿದ್ದೇವೆ. ಒಟ್ಟಾರೆ ಕಾಂಗ್ರೆಸ್ ಸದಸ್ಯರೇ ಮೇಯರ್ ಆಗಲಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ವೀಕ್ಷಕರಾಗಿ ಆಗಮಿಸಿದ ವಿ ವೆಂಕಟೇಶ್, ಸೇರಿದಂತೆ ವಿ ಎಸ್ ಉಗ್ರ​‍್ಪ, ಕಲ್ಲು ಕಂಬ ಪಂಪಾಪತಿ, ಮಾಧ್ಯಮ ವಕ್ತರರಾದ  ವೆಂಕಟೇಶ್ ಹೆಗಡೆ, ಬಿ ಎಂ ಪಾಟೀಲ್, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ