ಶ್ರದ್ಧೆ, ಒಗ್ಗಟ್ಟಿನಿಂದ ಪ್ರತಿಯೊಂದು ಕಾರ್ಯ ಯಶಸ್ವಿ
ಚಿಮ್ಮಡದ ಬನಶಂಕರಿ ದೇವಸ್ಥಾನದಲ್ಲಿ ಪ್ರಭಾವಳಿ ಅರಾ್ಣ ಕಾರ್ಯಕ್ರಮದಲ್ಲಿ ಪ್ರಭು ಶ್ರೀ
ಮಹಾಲಿಂಗಪುರ 29: ಶ್ರದ್ಧೆ ಹಾಗೂ ಒಗ್ಗಟ್ಟು ಇದ್ದರೆ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವೆಂದು ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.
ಚಿಮ್ಮಡ ಗ್ರಾಮದ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪ್ರಭಾವಳಿ ಅರಾ್ಣ ಹಾಗೂ ಪ್ರಸಾದ ಪೂಜಾ ಕಾರ್ಯಕ್ರಮದ ನಂತರ ನಡೆದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಯಾವುದೇ ಜಾತಿ, ಮತ, ಪಂಥಗಳನ್ನು ನೋಡದೆ ಪ್ರತಿಯೊಂದು ಸಮುದಾಯವನ್ನು ಒಟ್ಟಿಗೆ ಸೇರಿಸಿಕೊಂಡು ನಡೆಸುತ್ತಿರುವ ಇಂಥ ಜಾತ್ರೆ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾದದ್ದು ಶ್ರದ್ಧೆ, ಭಕ್ತಿಯೊಂದಿಗೆ ಒಗ್ಗಟ್ಟು ಸೇರಿದರೆ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆಂದರು.
ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಮಾತನಾಡಿ ಹಬ್ಬ ಹರಿದಿನಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ಪ್ರತಿಯೊಂದು ಹಬ್ಬದ ಮೂಲ ಪ್ರಕೃತಿದತ್ತವಾಗಿ ಬಂದಿವೆ ಎಂದರು.
ಅಧ್ಯಕ್ಷತೆಯನ್ನು ಹಟಗಾರ ಸಮಾಜದ ಪ್ರಮುಖ ಶ್ರೀಕಾಂತ ಜಾಡಗೌಡರ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ, ಗ್ರಾ.ಪಂ. ಅಧ್ಯಕ್ಷೆ ಮಾಲಾ ಅಶೋಕ ಮೋಟಗಿ, ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪಾ ಹಳಿಂಗಳಿ, ಬಿ.ಎಸ್. ಪಾಟೀಲ, ಗುರಲಿಂಗಪ್ಪಾ ಪೂಜಾರಿ, ಗುರಾ್ಪ ಬಳಗಾರ, ಉಮೇಶ ಪೂಜಾರಿ, ರಾಚಯ್ಯ ಮಠಪತಿ, ಈಶ್ವರ ಬಡಿಗೇರ ಇಲಾಹಿ ಜಮಖಂಡಿ ವೇದಿಕೆಯಲ್ಲಿದ್ದರು. ಬನಶಂಕರಿದೇವಿ ಸೇವಾ ಸಮೀತಿಯ ಕಾರ್ಯದರ್ಶೀ ಅಶೋಕ ಧಡೂತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕಲ್ಲಪ್ಪ ವಿಜಾಪೂರ ನಿರೂಪಿಸಿ ವಂದಿಸಿದರು.
ಇದೇ ಸಂಧರ್ಬದಲ್ಲಿ ಬನಶಂಕರಿ ದೇವಿಗೆ ಸುಮಾರು ಐವತ್ತು ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ಪ್ರಭಾವಳಿ ಅರ್ಿಸಿದ ದೇವಪ್ಪಾ ಹಾದಿಮನಿ ಸೇರಿದಂತೆ ಹಲವು ದಾನಿಗಳನ್ನು ಸತ್ಕರಿಸಲಾಯಿತು.