ಬಳ್ಳಾರಿ

ಪ್ರತಿಯೊಬ್ಬ ವಿದ್ಯಾರ್ಥಿ ಒಳ್ಳೆ ಸಂಸ್ಕಾರವಂತರಾಗಬೇಕಾದರೆ ಗುರುವಿನ ಮಾರ್ಗದರ್ಶನ ಬೇಕು

ಪ್ರತಿಯೊಬ್ಬ ವಿದ್ಯಾರ್ಥಿ ಒಳ್ಳೆ ಸಂಸ್ಕಾರವಂತರಾಗಬೇಕಾದರೆ ಗುರುವಿನ ಮಾರ್ಗದರ್ಶನ ಬೇಕು

ಬಳ್ಳಾರಿ 22: ಕರಾಟೆ ತರಬೇತಿ ಶಿಬಿರವನ್ನು ದಿ.21ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವನ್ನು ಸತ್‌ಚಿದಾನಂದ ಭಾರತಿ ಸ್ವಾಮಿಗಳು ಸಿದ್ದರೂಡ ಮಠ, ಹುಬ್ಬಳ್ಳಿ ಇವರು ವಹಿಸಿದ್ದರು. ಪೂಜ್ಯರು ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಪ್ರತಿಯೊಬ್ಬ ವಿದ್ಯಾರ್ಥಿ ಒಳ್ಳೆ 

ಸಂಸ್ಕಾರವಂತರಾಗಬೇಕಾದರೆ ಶ್ರೇಷ್ಠ ಗುರುವಿನ ಮಾರ್ಗದರ್ಶನ ಬೇಕು. ಗುರುವು ಸಾಕ್ಷತ್ 

ಶಿವನ ಇನ್ನೊಂದು ರೂಪವಾಗಿದ್ದು, ನಮ್ಮಲ್ಲಿರುವ ಕತ್ತಲೆಯನ್ನು, ಅಜ್ಞಾನವನ್ನು ಕಳೆದು ಜ್ಞಾನವನ್ನು ನೀಡುತ್ತಾನೆ ಎಂದು ತಿಳಿಸಿದರು. ಟ್ರಸ್ಟ್‌ ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಉಚಿತವಾಗಿ ಕರಾಟೆ, ಯೋಗ, ದ್ಯಾನ ಕಲಿಸುತ್ತಿರುವುದು ಒಳ್ಳೆಯ ಕೆಲಸ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ. ದೊಡ್ಡಕೇಶವ ರೆಡ್ಡಿ, ಕೊರ‌್ಲಗುಂದಿ ಅಧ್ಯಕ್ಷರು ಪಿ.ಎಲ್‌.ಡಿ ಬ್ಯಾಂಕ್ ಇವರು ವಹಿಸಿದರು. ಇವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿ ಗುರುವಿನಲ್ಲಿ ಶ್ರದ್ದೆ, ಭಕ್ತಿಯಿಂದ ನಡೆದುಕೊಂಡು ಒಳ್ಳೆಯ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ತಿಳಿಸಿದರು. 

ಕಾರ್ಯಕ್ರಮವನ್ನು ಜಿ.ಕೆ. ವಿಜಯಕುಮಾರ್ ಸಂಸ್ಥಾಪಕರು, ಅಧ್ಯಕ್ಷರು ಜಿ.ಕೆಫೌಂಡೇಶನ್ ಬಳ್ಳಾರಿ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಇವರು ಮಾತನಾಡಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಗುರುವಿನಲ್ಲಿ ವಿದೆಯತೆಯಿಂದ ನಡೆದುಕೊಂಡು ಸಾಧನೆ ಮಾಡಬೇಕು. ಅಂತವರು ಶ್ರೇಷ್ಠ ಸಾಧಕರಾಗುತ್ತಾರೆ ಎಂದು ತಿಳಿಸಿದರು. ಮತ್ತು ಟ್ರಸ್ಟ್‌ ಒಳ್ಳೆಯ ಕೆಲಸ ಮಾಡುತ್ತಿದ್ದು, ಟ್ರಸ್ಟ್‌ ಮಾಡುವ ಎಲ್ಲಾ ಕಾರ್ಯಗಳಿಗೆ ನಮ್ಮ ಸಹಾಯ ಇರುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುರುಮೂರ್ತಿ ಮುಖಂಡರು, ಬಳ್ಳಾರಿ ಜೆ.ವಿ. ಮಂಜುನಾಥ್ ಸಮಾಜಿಕ ಹೋರಾಟಗಾರರು, ಕೆ. ಹನುಮನ ಗೌಡ್ರು, ಗುತ್ತಿಗೆದಾರರು, ತಿಪ್ಪೇಸ್ವಾಮಿ, ಕೋಳೂರು ಪಾಲಾಕ್ಷಿ ಗೌಡ್ರು, ಗಾಜುಲು ಆನಂದ, ಮುಖಂಡರು ಬಳ್ಳಾರಿ, ವಿಶ್ವನಾಥ್ ಸ್ವಾಮಿ ಮುಂತಾದವರು ಇದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕರಾಟೆ ಶಿಕ್ಷಕರಾದ ಹನ್ಸಿ ಅನ್ನಪ್ಪ ಮಾರ್ಕಲ್ ರವರನ್ನು ಸನ್ಮಾನಿಸಲಾಯಿತು. ಮತ್ತು ರಾಜ್ಯ ಮಟ್ಟದಲ್ಲಿ ಬಂಗಾರ ಪಡೆದು ಉತ್ತರಕಾಂಡ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಉತ್ತಮ ಸಾಧನೆ ಮಾಡಿದ ಟ್ರಸ್ಟ್‌ನ ವಿದ್ಯಾರ್ಥಿಯಾದ ಗಗನ್ ಹೆಗ್ಡೆಯನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಕುಮಾರಿ ದೀಕ್ಷಾ ಸ್ವಾಮಿ, ಶ್ರೇಯ ಸ್ವಾಮಿ ಪ್ರಾರ್ಥನೆ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಟ್ರಸ್ಟ್‌ನ ಅಧ್ಯಕ್ಷರಾದ ಬಂಡ್ರಾಳ್ ಎಂ. ಮೃತುಂಜಯ ಸ್ವಾಮಿ ಮಾತನಾಡಿದರು. ಕಾರ್ಯಕ್ರಮವನ್ನು ಹೆಚ್‌.ಎಂ. ರವೀಂದ್ರ ಉಪನ್ಯಾಸಕರು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು. ವಿಶೇಷ ಕರಾಟೆ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 


ಸುದ್ದಿ ಓದಿ