ಪ್ರತಿಯೊಬ್ಬ ಕಾರ್ಮಿಕನು ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು: ಪತ್ತಾರ
ಮುಂಡರಗಿ 02: ಪ್ರತಿಯೊಬ್ಬ ಕಾರ್ಮಿಕನು ತಮ್ಮ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಜೊತೆಗೆ ನಮ್ಮ ಇಲಾಖೆಯಲ್ಲಿ ಬರುವ ಎಲ್ಲಾ ಯೋಜನೆಗಳನ್ನುಸಮರ್ಪಕವಾಗಿ ಬಳಸಿಕೊಂಡು ನೀವು ಕೂಡಾ ಉತ್ತಮ ಜೀವನವನ್ನು ಸಾಗಿಸಿಕೊಳ್ಳಲು ಮುಂದಾಗಬೇಕು. ಅಲ್ಲದೇ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಶ್ರಮಿಸಬೇಕು ಎಂದು ಕಾರ್ಮಿಕ ನೀರೀಕ್ಷಕ ಭಾಗ್ಯವಂತ ಪತ್ತಾರ ಹೇಳಿದರು.
ಪಟ್ಟಣದ ಕಾರ್ಮಿಕ ಇಲಾಖೆಯಿಂದ ಏರ್ಪಡಿಸಿದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರು ತಾವು ಯಾವುದೇ ಕೆಲಸ ಮಾಡುವಲ್ಲಿ ಶ್ರದ್ಧೆಯಿಂದ ಮಾಡಲು ಪ್ರಯತ್ನಿಸಬೇಕು. ಹಾಗೂ ಯಾವತ್ತು ದುಡ್ಡಿನ ಹಿಂದೆ ಹೋಗಬೇಡಿ, ಬದಲಾಗಿ ಕಾಯಕವೆಂದು ಹೋಗಬೇಕು ಅಂದಾಗ ನಿಮ್ಮ ಕಾಯಕದಿಂದ ಕೈಲಾಸವನ್ನು ಕಾಣಲು ಸಾಧ್ಯವಾಗುತ್ತದೆ. ಹಾಗೂ ಮತದಾನ ಎಂಬುದು ಪ್ರಜಾಪ್ರಭುತ್ವದಲ್ಲಿ ದೊಡ್ಡ ಅಸ್ತ್ರವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಕಾರ್ಮಿಕ ಮುಖಂಡ ಅಡಿವೆಪ್ಪ ಛಲವಾದಿ ಮಾತನಾಡಿ, ನಮ್ಮ ಕಾರ್ಮಿಕರೆಲ್ಲರೂ ನಾವು ಯಾವುದೇ ಕೆಲಸವನ್ನು ಮಾಡುವಲ್ಲಿ ನಿಷ್ಠೆ ಹಾಗೂ ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಮುಖ್ಯವಾಗಿ ಕಾರ್ಮಿಕ ಇಲಾಖೆಯ ಕಾಯ್ದೆಗಳನ್ನು ಹಾಗೂ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಆ ಮೂಲಕ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವಲ್ಲಿ ಮುಂದಾಗಬೇಕು. ಅಂದಾಗ ಮಾತ್ರ ಕಾರ್ಮಿಕರು ತಮ್ಮ ದುಡಿಮೆಯಲ್ಲಿ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆದರೆ ಕಟ್ಟಡ ಕಾರ್ಮಿಕರ ಬೆವರಿನ ಪ್ರತಿಫಲವನ್ನು ಕಿತ್ತುಕೊಳ್ಳುವ ಬಂಡವಾಳಶಾಹಿ ಶಕ್ತಿಗಳು ಕಾರ್ಮಿಕ ಇಲಾಖೆಯ ಹಲವು ಯೋಜನೆಗಳನ್ನು ಹಾಳು ಮಾಡುತ್ತಿವೆ. ಮದ್ಯವರ್ತಿಗಳು, ದಲ್ಲಾಳಿಗಳು, ಅಂದುಕೊಳ್ಳುವ ಕೆಲವರು ಗುಟ್ಟಾಗಿ ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಕೊಂಡಿರುತ್ತಾರೆ. ಸಾಕಷ್ಟು ಅನೀತಿಗಳು ರಾರಾಜಿಸುತ್ತಿರುವಾಗ ನೈಜ ಕಟ್ಟಡ ಕಾರ್ಮಿಕರ ಗತಿ ಅದೋಗತಿಗೆ ತಲುಪಿದೆ ಎಂದು ಕಿಡಿಕಾರಿದರು. ಕಾರ್ಮಿಕರಿಗೆ ಅನೇಕ ಕಷ್ಟಗಳು ಬಂದೊದಗಿವೆ. ಕನಿಷ್ಠ ವೇತನ ಕಾಯ್ದೆ ಜಾರಿಯಲ್ಲಿದ್ದರೂ ಸಹ ಅದೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸೌಲಭ್ಯಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಅಸಂಘಟಿತ ಕಾರ್ಮಿಕರು ಸಂಘಟಿಕರಾಗಬೇಕಿದೆ. ಅಂದಾಗಲೇ ಸರ್ಕಾರದ ಯೋಜನೆಗಳು ಸಮರ್ಕವಾಗಿ ತಲುಪುತ್ತವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾ.ಬಿ.ಆರ್ ಅಂಬೇಡ್ಕರ ಮಹನೀಯರ ಭಾವಚಿತ್ರಕ್ಕೆ ಪುಷ್ಪಗುಚ್ಚ ಸಮರ್ಿಸಿ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಮಿಕ ನೀರೀಕ್ಷಕ ಭಾಗ್ಯವಂತ ಪತ್ತಾರ ಅವರು ಕಡ್ಡಾಯ ಮತದಾನ ಮಾಡುವದಾಗಿ ಪ್ರತಿಜ್ಞಾವಿಧಿ ಭೋದಿಸಿದರು. ಭೀಮರಾವ್ ಹಾದಿಮನಿ ಕಾರ್ಯಕ್ರಮವನ್ನು ನಿರೂಪಿಸಿ ವಂಧಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಡಿ.ಇ.ಓ ಭೀಮರಾವ್ ಹಾದಿಮನಿ ಹಾಗೂ ಕಾರ್ಮಿಕರಾದ ಬಸಯ್ಯ ಡಂಬಳಮಠ, ವೀರ್ಪ ಮೆಣಸಗಿ, ಯಲ್ಲಪಂಪ ಭಜಂತ್ರಿ, ಮಂಜುನಾಥ ಕಟ್ಟಿಮನಿ, ರಹಿಮಾನ್ ಸಾಬ ಒಂಟಿ, ಮೈಬು ನಾಗನೂರ, ಹಸನ್ ಅಳವಂಡಿ, ಹುಸೇನಸಾಬ ಅಬ್ಬಿಗೇರಿ, ದಾವಲಸಾಬ ಡಂಬಳ, ಕೇಶವ ರಾಯಬಾಗಿ, ಲಕ್ಷ್ಮವ್ವ ಹಡಪದ, ಸುಜಾತ ಸೇರಿದಂತೆ ಹಲವಾರು ಮಹಿಳೆಯರು ಇದ್ದರು.