ವೇದಿಕೆ ನಾಶವಾದರೂ ಪಟ್ಟು ಬಿಡದ ಹೋರಾಟ .
ಬಿಸಿಲ ಬೇಗೆಗೆ ಸೆಡ್ಡು ಹೊಡೆದ ಹೋರಾಟಗಾರರು.
ಹನಮಂತ ಏಚ್ ನಾವಿ
ಮಹಾಲಿಂಗಪುರ: ಗುರುವಾರ ರಾತ್ರಿ ಬೀಸಿದ ಭಾರೀ ಗಾಳಿ ಪಟ್ಟಣದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದ್ದು, ಜೀವ ಬಿಟ್ಟೇವು ತಾಲೂಕು ಬಿಡೆವು ಎಂಬ ನಿಲುವಿನೊಂದಿಗೆ ಸ್ಥಳೀಯ ಚೆನ್ನಮ್ಮ ವೃತ್ತದಲ್ಲಿ ಕಳೆದ 416 ದಿನಗಳಿಂದ ನಿರಂತರ ಮುಷ್ಕರ ನಿರತರಾಗಿರುವ ತಾಲೂಕ ಹೋರಾಟ ಸಮಿತಿಯ ಮುಷ್ಕರ ವೇದಿಕೆಯನ್ನು ನೆಲಸಮ ಮಾಡಿದೆ.
ಗಾಳಿ ಮತ್ತು ಮಳೆಯಿಂದ ವೇದಿಕೆಯು ಸಂಪೂರ್ಣ ನಾಶವಾಗಿದ್ದರೂ ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು ಬಿಸಿಲ ಬೇಗೆ, ಮಳೆ, ಗಾಳಿ ಲೆಕ್ಕಿಸದೆ ಬಿರು ಬಿಸಿಲಿನಲ್ಲಿಯೂ ಸತ್ಯಾಗ್ರಹದಲ್ಲಿ ತೊಡಗಿ ತಾಲೂಕು ಘೋಷಣೆಯಾಗುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲದು ಎಂಬ ದಿಟ್ಟ ಸಂದೇಶ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ ತಲೆ ಸಿಡಿಯುವಷ್ಟು ಪ್ರಖರ ಬಿಸಿಲಿದ್ದರೂ ಹೋರಾಟಗಾರರು ಮಾತ್ರ ಬಿಸಿಲ ಬೇಗೆಗೆ ಸೆಡ್ಡು ಹೊಡೆದು ಹೋರಾಟದಲ್ಲಿ ತೊಡಗಿ, ತಾಲೂಕು ಘೋಷಣೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವುದು ಕಂಡು ಬಂತು.
ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಕಾರ್ಯದಶರ್ಿ ಸಿದ್ದು ಶಿರೋಳ, ರಫೀಕ್ ಮಾಲದಾರ,ರಾಜು ತೇರದಾಳ, ವಿಜಯ ದೇಸಾಯಿ,ಮಲ್ಲು ಮಿರ್ಜಿ ,ದುಂಡಪ್ಪ ಇಟ್ನಾಳ, ದಾನಯ್ಯ ಹಿರೇಮಠ,ಮುತ್ತು ಕೊಣ್ಣೂರ, ಭೀಮಶಿ ನಾಯಕ ಇತರರಿದ್ದರು