ಸ್ವಾತಂತ್ರ ಬಂದು 78 ವರ್ಷವಾದರೂ ಅಸ್ಪೃಶ್ಯತೆ ನಿರ್ನಾಮವಾಗಿಲ್ಲ: ಪೃಥ್ವಿರಾಜ್
ಬಳ್ಳಾರಿ 24: ಜಿಲ್ಲಾದಿಕಾರಿ ಕಛೇರಿ ಮುಂದೆ ಕರ್ನಾಟಕ ಸಮತಾ ಸೈನಿಕ ದಳ ವತಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾದಿಕಾರಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು. ಇದೆ ವೇಳೆಯಲ್ಲಿ ಜಿಲ್ಲಾ ಸಮಿತಿ ಗುಲ್ಬರ್ಗ ವಿಭಾಗೀಯ ಕಾರ್ಯಧ್ಯಕ್ಷರು ಕೆ ಪೃಥ್ವಿರಾಜ್ ಮಾತನಾಡಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಯುವಕನ ಕೊಲೆ ಮಾಡಿದ ಅಪರಾಧ ಕೃತ್ಯಕ್ಕೆ ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಅಲ್ಲದೆ ಕ್ಷೌರಿಕನ ಆಸ್ತಿ ಪಸ್ತಿಗಳು ಮುಟ್ಟುಗೊಲು ಹಾಕಿಕೊಂಡು ಆತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಮತ್ತು ನಿಯಮಾನುಸಾರ ಅನ್ವಯಿಸುವ ಕಠಿಣ ಶಿಕ್ಷೆಗೆ ಗಿರಿ ಪಡಿಸಬೇಕು. ನಮ್ಮ ದೇಶವು ಸ್ವತಂತ್ರವಾಗಿ 78 ವರ್ಷವಾದರೂ ಕೂಡ ಅಸ್ಪೃಶ್ಯ ನಿರ್ನಾಮವಾಗಿಲ್ಲ ಎಂಬುದು ಈ ಕೃತ್ಯದಿಂದ ಕಂಡುಬರುತ್ತದೆ.ಆದುದರಿಂದ ಮೃತರ ಕುಟುಂಬಕ್ಕೆ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು. ಕಾನೂನು ಸೇವೆಗಳ ಪ್ರಕಾರದಿಂದ 50 ಲಕ್ಷಗಳ ಮರಣ ಪರಿಹಾರ ಧನವನ್ನು ಮಂಜೂರು ಮಾಡಬೇಕು.
ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಪರಿಹಾರ ನಿಧಿಯಿಂದ ಕೂಡ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.ಒಂದು ವೇಳೆ ವಿಳಂಬವಾದರೆ ನಮ್ಮ ಸಂಘಟನೆಯ ವತಿಯಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡುತ್ತಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಮಾರುತಿ ಬಿಸಿ ಸುಧೀರ್ ವೆಂಕಟೇಶ್ ಅಂಬರೀಶ್ ಜಾನ್ ಪಾಲ್ ಶ್ರೀನಿವಾಸ್ ಹಾಗೂ ಸಂಘಟನೆಯ ವಿವಿದ ಪದಾಧಿಕಾರಿಗಳು ಇತರರು ಆಗಮಿಸಿದ್ದರು.