43 ವರ್ಷ ಗತಿಸಿದರೂ ಹಿಡಕಲ್ ಹಿನ್ನಿರಿನ ಜಮೀನು ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ : ಸರ್ಕಾರಗಳ ವಿರುದ್ಧ ಸಂತ್ರಸ್ತರ ಹಿಡಿಶಾಪ

43 ವರ್ಷ ಗತಿಸಿದರೂ ಹಿಡಕಲ್ ಹಿನ್ನಿರಿನ ಜಮೀನು ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ : ಸರ್ಕಾರಗಳ ವಿರುದ್ಧ ಸಂತ್ರಸ್ತರ ಹಿಡಿಶಾಪ

ಪಾರೇಶ ಭೋಸಲೆ

ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಹಿಡಕಲ್ ಜಲಾಶಯದ ಹಿನ್ನಿರಿನಲ್ಲಿ 58ಕ್ಕು ಅಧಿಕ ಬಡ ರೈತ ಕುಟುಂಬಗಳು ಜಮೀನು ಕಳೆದುಕೊಂಡು 43 ವರ್ಷಗಳು ಗತಿಸಿ ಬೀದಿ ಪಾಲಾಗಿದ್ದರೂ ಈ ಸಂತ್ರಸ್ತರಿಗೆ ಇಲ್ಲಿ ವರೆಗೆ ಪರಿಹಾರ ಅಥವಾ ಪರ‍್ಯಾಯ ಜಮೀನು ಸಿಗದೆ ಇರುವದು ದುರ್ಧೈವದ ಸಂಗತಿಯಾಗಿದ್ದು, ಸಂತ್ರಸ್ತರಿಗೆ ಸರ್ಕಾರದಿಂದ ಭೂ ಮಂಜೂರಾತಿ ಆದೇಶವಾಗಿ 43 ವರ್ಷ ಕಳೆದಿದ್ದರು ಅವರ ಹೆಸರಿನಿಂದ ಪಹಣಿ ಪತ್ರಿಕೆಗಳು ತಯಾರಾಗಿಲ್ಲ. ಮಂಜೂರಾದ ಜಮೀನುಗಳು ಮತ್ತು ನಿವೇಶನಗಳು ಎಲ್ಲಿ ಇವೆ ಎಂಬುದರ ಬಗ್ಗೆ ನಿರಾಶ್ರಿತ ಕುಟುಂಬಗಳಿಗೆ ಸರಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ತೋರಿಸದೆ ಇರುವದು ದುರಂದ ಎಂದು ಹೇಳಲಾಗಿದೆ.

    ಹೌದು ಓದುಗರೇ.... ಸರಕಾರದ ವಿರುದ್ದ ಕೆಂಡ ಕಾರಿರುವ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರು ಈಗ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿರುವದು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಬಿಸಿತುಪ್ಪವಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳು ಗೊಚರಿಸತೊಡಗಿವೆ. ಊರಿಗೆ ಉಪಕಾರಿ, ಪರರಿಗೆ ಪರೋಪಕಾರಿ ಎನ್ನುವ ಮಾತಿನಂತೆ ಹಿಡಕಲ್ ಜಲಾಶಯದಿಂದ ಹುಕ್ಕೇರಿ ತಾಲೂಕಿನ ಗ್ರಾಮಸ್ಥರಿಗೆ ವರದಾನವಾಗಬೇಕಿದ್ದ ಹಿಡಕಲ್ ಜಲಾಶಯವು ಜಮೀನು ಕಳೆದಕೊಂಡ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಹಿಡಕಲ್ ಜಲಾಶಯ ನಿರ್ಮಾಣ ವೇಳೆಯಲ್ಲಿ ಹಿನ್ನೀರಿನಲ್ಲಿ ಹುಕ್ಕೇರಿ ತಾಲೂಕಿನ ಕೆಲ ಗ್ರಾಮಗಳ ಗ್ರಾಮಸ್ಥರು ತಮ್ಮ ಬಳಿ ಇದ್ದ ಜಮೀನು, ಮನೆಗಳನ್ನು ಕಳೆದುಕೊಂಡು ಅತಂತ್ರವಾಗಿದ್ದರು.

     ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡಿರುವ ಸುಮಾರು 58ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದಿಂದ ಭೂ ಮಂಜೂರಾತಿ ಆದೇಶವಾಗಿ 43 ವರ್ಷಗಳು ಗತಿಸಿದ್ದರು ಇಲ್ಲಿಯ ವರೆಗೆ ಸಂತ್ರಸ್ತರ ಹೆಸರಿನಿಂದ ಪಹಣಿ ಪತ್ರಿಕೆಗಳು ತಯಾರಾಗಿಲ್ಲ ಎನ್ನುವದು ದುರಂತವಾಗಿದೆ. ಅಲ್ಲದೇ ಇವರಿಗೆ ಮಂಜೂರು ಮಾಡಿದ ಜಮೀನುಗಳು ಮತ್ತು ನಿವೇಶನಗಳು ಎಲ್ಲಿ ಇವೆ ಎಂಬುದನ್ನು ಸಹ ಜಮೀನು ಕಳೆದುಕೊಂಡ ನಿರಾಶ್ರಿತ ಕುಟುಂಬಗಳಿಗೆ ಅಧಿಕಾರಿಗಳು ಇಲ್ಲಿಯವರೆಗೂ ತಿಳಿಸಿರುವುದಿಲ್ಲ.

   ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್, ಬೀರನಹೊಳಿ, ಮನಗುತ್ತಿ, ಇಸ್ಲಾಂಪೂರ, ಗುಡನಟ್ಟಿ, ಹಳೆವಂಟಮೂರಿ, ಹುನ್ನೂರು, ಮಸ್ತಿ, ಸಿಡ್ಲಾö್ಯಳ್, ಜಿನರಾಳ, ಬೇಡರಟ್ಟಿ, ಕಾಟಾಬಳಿ, ಅರಳಿಕಟ್ಟಿ ಸೇರಿದಂತೆ ಒಟ್ಟು 24 ಗ್ರಾಮಗಳ ಬಡ ಕುಟುಂಬಗಳು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ತಮ್ಮ ಫಲವತ್ತಾದ ಜಮೀನುಗಳನ್ನು ಕಳೆದುಕೊಂಡಿವೆ. ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಪ್ರದೇಶದ ಜನರಿಗೆ ಹಂಚಿಕೆ ಮಾಡುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಜಮೀನವನ್ನು ಕಾಯ್ದಿರಿಸಿದೆ. ಆದರೆ ಕಳೆದ 43 ವರ್ಷಗಳಿಂದ ಈವರೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರಗಳ, ಮತ್ತು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರುಗಳ ಕಾರ್ಯವೈಖರಿಗೆ ನಿರಾಶ್ರಿತರು ರೋಷಿಹೋಗಿದ್ದು, ಈಗ ಧರಣಿ ಸತ್ಯಾಗ್ರಹದ ಹಾದಿ ಹಿಡಿಯುವ ಎಲ್ಲ ಮುನ್ಸೂಚನೆಗಳನ್ನು ನೀಡಿದ್ದಾರೆ.

   ಸರ್ಕಾರದಿಂದ ಮಂಜೂರಾಗಿರುವ ಜಮೀನುಗಳಿಗೆ ತಮ್ಮ ಹೆಸರು ದಾಖಲು ಮಾಡಿ ಸದರ ಉತಾರಗಳಲ್ಲಿ ಇರುವಷ್ಟು ಜಮೀನು ಅಳತೆ ಮಾಡಿಸಿ ಈ ಜಮೀನುಗಳನ್ನು ಸಾಗುವಳಿ ಮಾಡಲು ತಮಗೆ ನೀಡುವಂತೆ ಈ ಕುಟುಂಬಗಳು ಸುಮಾರು 43 ವರ್ಷಗಳಿಂದ ಹಲವಾರು ಕಛೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದು, ಇನ್ನು ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕೆಲ ಕುಟುಂಬಗಳು ಮಾನಸಿಕ ಅಸ್ವಸ್ಥರಾಗಿ ಆತ್ಮಹತ್ಯೆಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಥವಾ ವಾರದೊಳಗಾಗಿ ಪರಿಹಾರ ದೊರಕಿಸಲಾಗುವುದು ಎಂದು ಮುಖ್ಯಮಂತ್ರಿಗಳು ಜಿಲ್ಲಾ ಜನತಾದರ್ಶನದಲ್ಲಿ ಹೇಳುತ್ತಿದ್ದರೂ ಈ ಕುಟುಂಬಗಳು ಸಲ್ಲಿಸಿರುವ ಮನವಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಈ ವಿಷಯದ ಬಗ್ಗೆ 1 ವಾರದೊಳಗಾಗಿ ವರದಿ ಸಲ್ಲಿಸುವಂತೆ ದಿ. 23-05-2022ರಂದು ಜಿಲ್ಲಾಧಿಕಾರಿಗಳು ತಹಶೀಲ್ದಾರ ಹುಕ್ಕೇರಿ ಇವರಿಗೆ ಪತ್ರ ಬರೆದಿದ್ದರು. ಆದರೆ ಸುಮಾರು 16 ತಿಂಗಳುಗಳು ಕಳೆದರು ಅಧಿಕಾರಿಗಳಿಂದ ಈ ಕುರಿತು ಯಾವುದೇ ಹಿಂಬರಹ ಬರದೇ ಇರುವದು ನೋವಿನ ಸಂಗತಿಯಾಗಿದೆ.

   ಡಿ. 1ರಿಂದ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ :

   ಹಿಡಕಲ್ ಜಲಾಶಯ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಅನ್ಯಾಯ ಮಾಡಿರುವ ಸರ್ಕಾರ ಮತ್ತು ಅಧಿಕಾರಿಗಳು ಕಣ್ಣು ತೆರೆಸುವ ಹಿನ್ನೆಲೆಯಲ್ಲಿ ಬರುವ ಡಿ. 1ನೇ ತಾರೀಖಿನಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಂತ್ರಸ್ತ ಕುಟುಂಬಗಳೊAದಿಗೆ ಅನಿರ್ಧಿಷ್ಟ ಅವಧಿಯವರೆಗೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸುವ ಕುರಿತು ಕಂದಾಯ ಸಚಿವ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

    ನ್ಯಾಯ ನೀಡಲು ಜಿಲ್ಲಾಧಿಕಾರಿಗಳಿಗೆ ಸಂತ್ರಸ್ತರ ಮನವಿ : ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡಿರುವ ರೈತರು ಜಮೀನಿನ ಹಕ್ಕು ಪತ್ರಕ್ಕಾಗಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಗುರುವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಸಂತ್ರಸ್ತರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿಯೊಮದನ್ನು ಸಲ್ಲಿಸಿ, 43 ವರ್ಷಗಳಿಂದ ಯಾವದೇ ಜಮೀನು ಸಿಗದೆ ಅನ್ಯಾಯ ಮಾಡಲಾಗಿದೆ. ಈ ಕೊಡಲೇ ಜಮೀನು ಒದಗಿಸಲು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ನೇತೃತ್ವದಲ್ಲಿ ನ್ಯಾಯ ಒದಗಿಸಿ ಕೊಡುವಂತೆ ಜಿಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

    ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಬೆಳಗಾವಿ ಜಿಲ್ಲೆಯ ಕೆಲ ಗ್ರಾಮದ ರೈತರು ಜಮೀನು ಕಳೆದುಕೊಂಡು ನಿರಾಶ್ರಿತರುರಾಗಿದ್ದಾರೆ. ಸರ್ಕಾರದ ನಿರ್ಲಕ್ಷö್ಯದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಲುವ ಸ್ಥಿತಿ ಒದಗಿದೆ ಡಿಸೆಂಬರ 1ರ ಒಳಗೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಗಮನಹರಿಸಿಲ್ಲ ಅಂದ್ರೇ ಉಗ್ರ ಹೋರಾಟ ಮಾಡುತ್ತೇವೆ ಎಂದರು.  


ಸುದ್ದಿ ಓದಿ