ಮಹಲಿಂಗಪುರ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸುಷ್ಮಾ ಗವಳಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸುಷ್ಮಾ  ಗವಳಿ

ಮಹಾಲಿಂಗಪುರ : ಗ್ರಾಮಗಳು ಉದ್ಧಾರವಾಗಬೇಕಾದರೆ ಪರಿಸರ ಸ್ವಚ್ಛವಾಗಿರಬೇಕು ನಾವು ನಿತ್ಯ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕಲುಷಿತಗೊಳಿಸದೆ ಹಸಿರು ಪರಿಸರವನ್ನು ನರ‍್ಮಿಸಿ ನಮ್ಮ  ಉಸಿರನ್ನಾಗಿಸಿ ನೆಮ್ಮದಿಯ ಬದುಕು ಸಾಗಿಸೋಣವೆಂದು ಬಾಗಲಕೋಟ ಜಿಲ್ಲಾ ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ಸುಶ್ಮ  ಗವಳಿ ಹೇಳಿದರು.ಭಾರತ ರ‍್ಕಾರದ ನೆಹರು ಯುವ ಕೇಂದ್ರ ಹಾಗೂ ಮಹಾ ಶರಣ ಸುಜ್ಞಾನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬಸವಾನಂದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಸ್ವಚ್ಛ ಗ್ರಾಮ ಹಸಿರು ಗ್ರಾಮ ಎಂಬ ಯುವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಯುವ ಜನಾಂಗ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಾಮಾಜಿಕ ಕರ‍್ಯರ‍್ತರಾಗಿ, ಸಮಾಜದ ಋಣ ತೀರಿಸುವತ್ತ ಕರ್ಯೊನ್ಮೂಖರಾಗಬೇಕೆಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭೆಯ ಅಧ್ಯಕ್ಷ ಸ್ನೇಹಲ ಅಂಗಡಿಯವರು ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೊಳಗೊಂಡು ಪ್ರತಿಯೊಬ್ಬ ಕೈಜೋಡಿಸಿದಾಗ, ಸ್ವಚ್ಛ ಗ್ರಾಮ ಹಸಿರು ಗ್ರಾಮ ಆಗಲಿಕ್ಕೆ ಸಾಧ್ಯವೆಂದು ಹೇಳುತ್ತಾ ಸಾಮಾನ್ಯರಲ್ಲಿಯೂ ಇದರ ಕಳಕಳಿಯನ್ನು ತುಂಬಿದರು. ಇದೇ ಸಂದರ್ಭದಲ್ಲಿ ನಗರದ ಸ್ವಚ್ಛತೆ ಹಾಗೂ ನರ‍್ಮಲೀಕರಣದ ಬಗ್ಗೆ ಪುರಸಭೆಯ ವತಿಯಿಂದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.ಆರ‍್ಶ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಸ್ವಪ್ನಾ ಅನಿಗೋಳ ಆಗಮಿಸಿ ವಿಶೇಷ  ಉಪನ್ಯಾಸ ನೀಡುತ್ತಾ  ಪ್ಲಾಸ್ಟಿಕ್ ನಿಂದಾಗುವ ದುμÀ್ಪರಿಣಾಮ,  ಕಲಬೆರೆಕೆ ಆಹಾರದ ತೊಂದರೆಗಳು, ಪರಿಸರ ಕಲ್ಮಶಗಳಿಂದ ಮಾನವ ಜನಾಂಗ ಹಾಗೂ ಒಟ್ಟಾರೆ ಜೀವಸಂಕುಲದ ಮೇಲೆ ಆಗುವ ನμÀ್ಟದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಯುವಕರ ಮನಮುಟ್ಟುವಂತೆ ತರಬೇತಿ ನೀಡಿದರು. 

ಎರಡನೇ ಗೋಷ್ಠಿಯ ಉಪನ್ಯಾಸಕ ಜಿಲ್ಲಾ  ಕಾನಿಪ ಉಪಾಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ ಹಸಿರಿನಿಂದ ನಮ್ಮ ಉಸಿರು ಸರಳವಾಗುತ್ತದೆ. ಪ್ರಸ್ತುತ ಕಾಡುತ್ತಿರುವ ಅನೇಕ ಮಹಾಮಾರಿಗಳಿಗೆ ಮೂಲ ಕಾರಣವೇ ಕಲ್ಮಶ ವಾತಾವರಣ. ಮನೆಗೊಂದು ಮರ ಬೆಳೆಸಿ, ಹಸಿರು ಗ್ರಾಮದ ಕನಸು ನನಸಾಗಿಸಿ, ಸುಂದರ ವಾತಾವರಣದೊಂದಿಗೆ, ಶುದ್ಧ ವಾತಾವರಣ ಪಡೆದು, ನಮ್ಮ ದಿನನಿತ್ಯದ ಬದುಕಿನಲ್ಲಿ ಹಸಿರನ್ನೇ ಉಸಿರಾಗಿಸಿಕೊಳ್ಳೋನವೆಂದು  ಕರೆ ನೀಡಿದರು, 

ಉಪನ್ಯಾಸಕ ಸುರ‍್ಣ ಆಸಂಗಿ ಮಾತನಾಡುತ್ತಾ ಬಯಲು ಶೌಚಾಲಯ ರೋಗಗಳ ಆಲಯ, ಹಲವು ರೋಗಗಳ ಮೂಲವೇ ಬಯಲು ಶೌಚಾಲಯ, ಬಯಲು ಶೌಚ ಮುಕ್ತ ಭಾರತ ನರ‍್ಮಾಣಕ್ಕಾಗಿ ರ‍್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರಜೆಗಳು ಇದರ ಸದುಪಯೋಗ ಪಡೆದುಕೊಂಡು ರೋಗ ಮುಕ್ತ ಭಾರತವನ್ನಾಗಿ ಮಾಡಲು ಪನ ತೊಡಬೇಕು ಎಂದರು. ಗೋಷ್ಠಿಯ ಉಪನ್ಯಾಸಕÀ ಬಸವಾನಂದ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸುರೇಶ ಗಿಂಡೆಯವರು ಮಾತನಾಡಿದರು. ಜಿಲ್ಲೆಯ ವಿವಿಧ ಯುವ ಸಂಘಗಳ ಪದಾಧಿಕಾರಿಗಳು ಹಾಗೂ ಬಸವಾನಂದ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಜಿಲ್ಲಾ ವಿಪತ್ತು ನಿರ್ವಹಣೆಯ ಬಾಹುಬಲಿ ಕೊಂಡಾಳಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಚಾಲಕ ಗಂಗಾಧರ ಮೇಟಿ, ಅಲ್ಪಸಂಖ್ಯಾತರ ವಸತಿ ಶಾಲೆಯ ಪ್ರಾಂಶುಪಾಲ ಶೀತಲ ಆಲಗೂರ, ಶಿಕ್ಷಕಿ ಮಂಜುನಾಥ ಸಬಸನ್ನವರ, ಅಧ್ಯಾತ್ಮ ಚಿಂತಕ ಗೋಲೇಶ ಅಮ್ಮಣಗಿ, ಡಾ. ಮಹಾಲಿಂಗಪ್ಪ ಪೂಜಾರಿ, ಬಸವ ಸಮಿತಿ ಅಧ್ಯಕ್ಷ ಶ್ರೀಶೈಲಪ್ಪ ಉಳ್ಳೆಗಡ್ಡಿ, ವರದಿಗಾರ ಮೀರಾಸಾಬ ತಟಗಾರ ಉಪಸ್ಥಿತರಿದ್ದರು.ಮಹಾಶರಣ ಸುಜ್ಞಾನ ಸಂಸ್ಥೆಯ ಅಧ್ಯಕ್ಷ ಭೀಮಪ್ಪ ನೇಗಿನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಉಪಾಧ್ಯಕ್ಷ ಲಕ್ಷ್ಮಣ ಕಿಶೋರ ಸ್ವಾಗತಿಸಿ, ಚೇತನ್ ಹಿರೇಮಠ ಹಾಗೂ ಶಿವಾನಂದ ನೇಗಿನ್ಯಾಳ ನಿರೂಪಿಸಿ, ಶೇಖರ ದೊಡವಾಡ ವಂದಿಸಿದರು.


ಸುದ್ದಿ ಓದಿ