ಮಹಲಿಂಗಪುರ

ಸೈದಾಪುರ ಸ್ವಯಂಪ್ರೇರಿತ ಲಾಕ್‌ಡೌನ್ ಅಂತ್ಯ ! ಅಗತ್ಯ ವಸ್ತುಗಳಿಗಾಗಿ ಮಾತ್ರ ಅವಕಾಶ

ಸೈದಾಪುರ ಸ್ವಯಂಪ್ರೇರಿತ ಲಾಕ್‌ಡೌನ್ ಅಂತ್ಯ !  ಅಗತ್ಯ ವಸ್ತುಗಳಿಗಾಗಿ ಮಾತ್ರ ಅವಕಾಶ
ಮಹಾಲಿಂಗಪುರ ಸಮೀಪದ ಸೈದಾಪುರ ಗ್ರಾಮದಲ್ಲಿ ಸ್ವಯಂ ಲಾಕ್‌ಡೌನ್ ನಂತರ ಸಡಿಲಿಕೆಗಾಗಿ ಸಭೆ ನಡೆಸಲಾಯಿತು.

ಮಹಾಲಿಂಗಪುರ 25:  ಸ್ವಯಂ ಪ್ರೇರಿತ ಬಂದ್‌ಗೆ ಸಹಕರಿಸಿದ ಸಾರ್ವಜನಿಕರಿಗೂ ಕೊರೊನಾ ವಾರಿಯರ್ಸ್‌ ಧನ್ಯವಾದಗಳೆಂದು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಹಾಲಿಂಗಪ್ಪ ಸನದಿ ವಿನಂತಿಸಿದರು. 

ಸಮೀಪದ ಸೈದಾಪುರ ಗ್ರಾಮದಲ್ಲಿ ಕೋವಿಡ್ ಸೋಂಕಿನ ಮತ್ತು ಸಾವಿನ ಸಂಖ್ಯೆ ಇದೀಗ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಮವಾರ ಕರೆದ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಮಾತನಾಡುತ್ತಿದ್ದರು. 

ಮಂಗಳವಾರದಿಂದ ಸಂಪೂರ್ಣ ಬಂದ್ ಸಡಿಲಗೊಳಿಸಿ ಸರಕಾರರದ ಮಾರ್ಗಸೂಚಿಯಂತೆ ಅಗತ್ಯ ವಸ್ತುಗಳಿಗಾಗಿ ಬೆಳಗ್ಗೆ 6 ರಿಂದ 10 ವರೆಗೆ ಮಾತ್ರ ಸಡಿಲಿಕೆ, ನಿಯಮಗಳನ್ನು ಮೀರಿ ತೆರೆಯುವ ಅಂಗಡಿಗಳನ್ನು ಲಾಕ್ ಮಾಡಿ ಮುಟ್ಟುಗೋಲು ಹಾಕಲಾಗುವುದು, ಅಲ್ಲದೆ ಅರ್ಹರು ಕಡ್ಡಾಯವಾಗಿ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಲು ಮರೆಯಬಾರದು ಎಂದು ಕಳಕಳಿಯ ವಿನಂತಿಯನ್ನು ಮಾಡಿದರು.  

ಈ ಹಿಂದೆ ಕೊರೋನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಗ್ರಾಪಂ ಸರ್ವ ಸದಸ್ಯರ ಸಭೆಯಲ್ಲಿ ಠರಾವ್ ಪಾಸ್ ಮಾಡಿ ರಾಜ್ಯ ಸರಕಾರದ ಲಾಕ್‌ಡೌನ್ ಜೊತೆ ಸ್ವಯಂ ಪ್ರೇರಿತ ಸಂಪೂರ್ಣ ಬಂದ್ ಮಾಡುವ 8 ದಿನ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.  

ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ಕೌಜಲಗಿ, ಸದಸ್ಯರಾದ ಚಿನ್ನಪ್ಪ ಬಾಯಪ್ಪಗೋಳ, ಬಸವರಾಜ ಪೂಜೇರಿ, ರಾಜು ಮುರಚಿಟ್ಟಿ, ಪಿಡಿಒ ಯಲ್ಲಪ್ಪ ಮಾಂಗ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಬೀಟ್ ಪೊಲೀಸ್ ಹಾಗೂ ಅಂಗಡಿಕಾರರು ಇದ್ದರು.  


ಸುದ್ದಿ ಓದಿ